ಸಚಿವರ ಮನೆ ಎದುರಿನ ಪಾರ್ಕ್ಗೆ ₹90 ಲಕ್ಷ ಖರ್ಚು ಮಾಡಿದ್ದು, ದಾವಣಗೆರೆಯ ಉಳಿದ ಸಾರ್ವಜನಿಕರ, ಜನರ ಪಾರ್ಕ್ಗಳಿಗೇಕೆ ನಿರ್ಲಕ್ಷ್ಯ ವಹಿಸಿದ್ದಾರೆ. ದಾವಣಗೆರೆ ನಗರದ ಗುಂಡಿ ವೃತ್ತದ ಸಮೀಪ ಸಚಿವರ ನಿವಾಸದ ಎದುರು ತೋಟಗಾರಿಕೆ ಇಲಾಖೆಯಿಂದ ಸುಮಾರು ₹90 ಲಕ್ಷ ವೆಚ್ಚದಲ್ಲಿ ಪಾರ್ಕ್ ಕಾಮಗಾರಿ ಕೈಗೊಳ್ಳುತ್ತಿರುವುದರ ಔಚಿತ್ಯವೇನು? ಎಂದು ಎಸ್ ಡಿ ಪಿ ಐ (SDPI) ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಸಚಿವರ ಮನೆ ಮುಂದಿನ ಕಾಮಗಾರಿಯ ಅಗತ್ಯತೆ ಹಾಗೂ ಇಷ್ಟು ದೊಡ್ಡ ಮೊತ್ತದ ವೆಚ್ಚದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳಿದ್ದು, ಸರ್ಕಾರ ಸಮಗ್ರ ತನಿಖೆಗೆ ಮುಂದಾಗಬೇಕು” ಎಂದು ಆಗ್ರಹಿಸಿದ್ದಾರೆ.

“ದಾವಣಗೆರೆ ನಗರದ ಹಲವು ಬಡಾವಣೆಗಳಲ್ಲಿರುವ ಪಾರ್ಕ್ಗಳು ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಅನೇಕ ಪಾರ್ಕ್ಗಳಿಗೆ ಕಾಂಪೌಂಡ್ ಇಲ್ಲದೆ ಬೀಡಾಡಿ ದನಗಳ ಓಡಾಟ, ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಮಕ್ಕಳ ಆಟದ ಮೈದಾನ, ವಾಕಿಂಗ್ ಟ್ರ್ಯಾಕ್ ಹಾಗೂ ಸಾರ್ವಜನಿಕರ ವಿಶ್ರಾಂತಿ ಸ್ಥಳಗಳೂ ಹದಗೆಟ್ಟಿವೆ” ಎಂದು ಆರೋಪಿಸಿದರು.

“ದಾವಣಗೆರೆ ನಗರದ ಇತರೆ ಪಾರ್ಕ್ಗಳಿಗೆ ಮೊದಲು ಕಾಂಪೌಂಡ್, ಸ್ವಚ್ಛತೆ, ವಿದ್ಯುತ್ ದೀಪ, ಭದ್ರತೆ ಮತ್ತು ಹಸಿರೀಕರಣದಂತಹ ಮೂಲಸೌಲಭ್ಯ ಕಲ್ಪಿಸುವ ಬದಲು ಸಚಿವರ ನಿವಾಸದ ಎದುರಿನ ಪಾರ್ಕ್ಗೆ ಮಾತ್ರ ₹90 ಲಕ್ಷ ವೆಚ್ಚ ಮಾಡುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಅಸಮಾಧಾನ ಹೊರಹಾಕಿದರು.
“ಇತರ ಬಡಾವಣೆಗಳ ಪಾರ್ಕ್ಗಳಿಗೆ ಕಾಂಪೌಂಡ್ ಹಾಕಲು ಹಣವಿಲ್ಲವೇ? ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಪಾರ್ಕ್ಗಳು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಸಚಿವರ ಮನೆ ಎದುರಿನ ಪಾರ್ಕ್ಗೆ ಮಾತ್ರ ಇಷ್ಟು ದೊಡ್ಡ ಮೊತ್ತದ ಕಾಮಗಾರಿ ಏಕೆ?” ಎಂದು ಪ್ರಶ್ನಿಸಿದರು.

“₹90 ಲಕ್ಷದ ಕಾಮಗಾರಿಗೆ ಸಂಬಂಧಿಸಿದ ಅಂದಾಜು, ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ, ಟೆಂಡರ್ ಪ್ರಕ್ರಿಯೆ ಹಾಗೂ ಗುತ್ತಿಗೆದಾರರ ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು. ಯಾವುದೇ ನಿಯಮ ಉಲ್ಲಂಘನೆ ಅಥವಾ ಸಾರ್ವಜನಿಕ ಹಣದ ದುರುಪಯೋಗ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈದಾವಣಗೆರೆ | ಅಶ್ವಿನಿ, ಭೂಮಾನಂದ ಹತ್ಯೆಯ ಸೂಕ್ತ ತನಿಖೆಗೆ ದಲಿತ-ದಮನಿತರ ಹೋರಾಟ ಸಮಿತಿ ಆಗ್ರಹಗೊಳ್ಳಬೇಕು” ಎಂದು ಒತ್ತಾಯಿಸಿದರು.
“ದಾವಣಗೆರೆ ನಗರದ ಎಲ್ಲಾ ಪಾರ್ಕ್ಗಳ ಸ್ಥಿತಿಗತಿಗಳ ಕುರಿತು ಸಮಗ್ರ ಸಮೀಕ್ಷೆ ನಡೆಸಿ, ಅಗತ್ಯವಿರುವ ಕಡೆ ಕಾಂಪೌಂಡ್, ಸ್ವಚ್ಛತೆ, ಬೆಳಕು, ಭದ್ರತೆ, ಹಸಿರೀಕರಣ ಹಾಗೂ ನಿರ್ವಹಣೆಗೆ ಆದ್ಯತೆ ನೀಡಬೇಕು. ಸಚಿವರ ಮನೆ ಎದುರಿನ ಪಾರ್ಕ್ ಸೇರಿದಂತೆ ನಗರದ ಪ್ರತಿಯೊಂದು ಪಾರ್ಕ್ವೂ ಸಾರ್ವಜನಿಕರ ಆಸ್ತಿಯಾಗಿದ್ದು, ತೆರಿಗೆ ಹಣ ಜನರ ಹಿತಕ್ಕಾಗಿ ಸಮರ್ಪಕವಾಗಿ ಬಳಕೆಯಾಗಬೇಕು” ಎಂದು ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.





