ಧಾರವಾಡ | ಬಸವ ಸಂಸ್ಕೃತಿ ಅಭಿಯಾನ ಯಾರ ವಿರುದ್ಧವೂ ಅಲ್ಲ: ಬಸವಪರ ಸಂಘಟನೆಗಳ ಸ್ಪಷ್ಟನೆ

Date:

ಯಾರೇ ವಿರೋಧಿಸಿದರೂ ಬಸವ ಸಂಸ್ಜೃತಿ ಉತ್ಸವ ನಡೆಯುತ್ತದೆ. ವಿಶ್ವಗುರು ಬಸವಣ್ಣನವರ ಸಲುವಾಗಿ ಈ ಅಭಿಯಾನ ನಡೆಯುತ್ತಿದೆಯೇ ಹೊರತು ಯಾವುದೇ ರಾಜಕಾರಣಿ ಅಥವಾ ಸ್ವಾಮಿಗಳ ಸಲುವಾಗಿ ಅಲ್ಲ ಅಥವಾ ಯಾರ ವಿರುದ್ಧವೂ ಅಲ್ಲ ಎಂದು ಧಾರವಾಡದಲ್ಲಿ ಬಸವಪರ ಸಂಘಟನೆಗಳು ಸ್ಪಷ್ಟಪಡಿಸಿವೆ.

- Advertisement -

ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದ್ದು, ಧಾರವಾಡದಲ್ಲಿಯೂ ಇದೇ ಸೆಪ್ಟೆಂಬರ್ 12ರಂದು ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕುರಿತು ಮುರುಘಾಮಠದಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಶುವಾನಂದ ಶೆಟ್ಟೆಣ್ಣವರ ಮಾತನಾಡಿ, ” ಬಸವಣ್ಣನ ಸಲುವಾಗಿ ಎಲ್ಲರೂ ಒಂದಾಗಿ ದುಡಿಯೋಣ. ಸೇವೆಯ ಫಲ‌ ಸಿಕ್ಕೇ ಸಿಗುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಬಸವಂತಪ್ಪ ತೋಟದ ಮಾತನಾಡಿ, “ಹೊಸ ಉತ್ಸಾಹ ಮೂಡಲಿ. ಎಲ್ಲರೂ ಭಾಗವಹಿಸೋಣ. ಬಸವಣ್ಣ ಒಬ್ಬರಿಗೆ ಮಾತ್ರ ಸೀಮಿತವಲ್ಲ. ಎಲ್ಲರಿಗೂ ಬೇಕಾದವರು. ಶರಣರ ವೇಶಭೂಷಣವನ್ನು ಮಕ್ಕಳು ಧರಿಸುವುದಿದ್ದರೆ; ಹೆಸರು ನೊಂದಾಯಿಸಿಕೊಳ್ಳಬೇಕು. ಪ್ರಸಾದ ವ್ಯವಸ್ಥೆ ಇದ್ದಾಗ; ಯಾರೂ ಪ್ರಸಾದ ಕೆಡಿಸದಿರಿ. ಎಲ್ಲರೂ ವೈಯಕ್ತಿಕ ರಾಜಕೀಯ, ದ್ವೇಷ ಎಲ್ಲವನ್ನೂ ಮರೆತು, ಒಗ್ಗಟ್ಟಾಗಿ ಈ ಅಭಿಯಾನವನ್ನು ಯಶಸ್ವಿಯಾಗುವಂತೆ ಕಾರ್ಯನಿರ್ವಹಿಸಬೇಕು. ಯಾವುದೇ ರಾಜಕಾರಣಿಗಳು ಬರಲಿ, ಬರದಿರಲಿ, ಸ್ವಾಮೀಜಿಗಳು ಬರಲಿ ಬರದಿರಲಿ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಲಿಂಗಾಯತ ಧರ್ಮದ ಬದ್ದತೆಯಿಂದ ಪಾಲ್ಗೊಳ್ಳಲು ಅನುವು ಮಾಡಿಕೊಡಿ” ಎಂದು ಕರೆ ಕೊಟ್ಟರು.

ಇದನ್ನೂ ಓದಿ: ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿಜೆ ವಿಚಾರಕ್ಕೆ ಗುಂಪು ಜಗಳ

ಸಂತೋಷ್ ಕತ್ತಿಶೆಟ್ಟರ್ ಮಾತನಾಡಿ, “ನಮ್ಮ ಬೆಳವಣಿಗೆಗಳನ್ನು ವಿರೋಧಿಸುವವರನ್ನು ಪ್ರತಿವಿರೋಧಿಸದೇ ನಾವೇ ದೂರಕರಿಸೋಣ. ಹುಬ್ಬಳ್ಳಿಯಲ್ಲಿ ಕೂಡಾ ಬಸವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಆ ಕಾರ್ಯಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ” ಎಂದರು.

ಮುರುಘಾಮಠದ ಉಪಾಧ್ಯಕ್ಷ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಕಾರ್ಯದರ್ಶಿ ಪಟ್ಟಣಶೆಟ್ಟಿ ಮಾತನಾಡಿ, “ಯುವಕರೆಲ್ಲ ಸೇರಿ ಈ ಅಭಿಯಾನ‌ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ. ನಾವು ಮಾಡುವ ಕಾರ್ಯ ಸದ್ವಿನಿಯೋಗವಾಗಲಿ. ಎಲ್ಲರನ್ನು ಅಭಿಯಾನಕ್ಕೆ ಕರೆತರುವ ಕೆಲಸವಾಗಲಿ. ನಾವು ಮಾಡುವ ಕಾರ್ಯ ಮೊದಲು ಆತ್ಮಸಾಕ್ಷಿಯಾಗಿ ನಮಗೇ ಸರಿ ಎನಿಸಬೇಕು. ಉಪದೇಶ ಮಾಡುವವರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.‌ ಯಾರು ಯಾರ ಮೇಲೆ ಸವಾರಿ ಮಾಡದೇ ಎಲ್ಲರೂ ಒಗ್ಗೂಡಿ ಕೆಲಸಮಾಡಬೇಕಿದೆ” ಎಂದರು.

ಸಭೆಯಲ್ಲಿ ಶಿವರುದ್ರಗೌಡ ಪಾಟೀಲ್, ದೇಸೂರ, ರವಿ ಬಾಗೋಡಿ, ಸಿ ಜಿ ಪಾಟೀಲ್, ಗುರುರಾಜ ಅವರಾದಿ, ಭೀಮನಗೌಡ ಪಾಟೀಲ್, ಮನೋಹರ ಜಮಖಂಡಿ, ಶಿವರುದ್ರಗೌಡ ಪಾಟೀಲ್, ವಿಶ್ವನಾಥ ನಡಕಟ್ಟಿ, ಸಂತೋಷ್, ಅರುಣ ಮೂಡಿ ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...

ಗದಗ | ಮಾನವ ದಿನಗಳ ಸೃಜನೆ ಮಾಡದಿದ್ದರೇ ಶಿಸ್ತು ಕ್ರಮ : ಜಿಪಂ ಸಿಇಓ ಮುಕುಲ್ ಜೈನ್

ರೋಣ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆ ಇದೆ. ಮಾನವ...

ಮಹಿಷಮಂಡಲದ ಇತಿಹಾಸಕ್ಕೆ ಮರುಜೀವ: ಮೈಸೂರಿನಲ್ಲಿ ಮಹಿಷಮಂಡಲೋತ್ಸವ-2026

ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ದಲಿತ ಸಂಘಟನೆಗಳು,...