ಧಾರವಾಡ | 50 ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ರೆಡ್ ಹ್ಯಾಂಡ್ ಸಿಕ್ಕ ತಹಶೀಲ್ದಾರ

Date:

ಭೂಮಿ ಅ ಖರಾಬ್ ತೆಗೆಯಲು ಒಂದು‌ ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 50 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್​ ಆಗಿ ಧಾರವಾಡ ತಹಶೀಲ್ದಾರ್​​ ಸಚ್ಚಿದಾನಂದ ಕುಚನೂರ್​ ಲೋಕಾ ಬಲೆಗೆ ಬಿದ್ದಿದ್ದಾರೆ‌.

- Advertisement -

ಮುದೋಳ್​ ಮೂಲದ ಡೆವಲಪರ್​​ ಬಳಿ ಒಂದು ಕೋಟಿ ರೂ. ಹಣಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು. ಅದರಂತೆ ಬುಧವಾರ ಮುಂಗಡವಾಗಿ 50 ಲಕ್ಷ ರೂ. ಹಣ ಪಡೆಯುವಾಗ ತಹಶೀಲ್ದಾರ್​ ಸಚ್ಚಿದಾನಂದ ಸಿಕ್ಕಿ ಬಿದ್ದಿದ್ದಾರೆ. ಡೆವಲಪರ್ ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ಜಮೀನು ಖರೀದಿಸಿದ್ದು, ಜಮೀನಿನಲ್ಲಿನ ಅ ಖರಾಬ್ ತೆಗೆದು ಡೆವಲಪ್ಮೆಂಟ್ ಮಾಡಲು ಮುಂದಾಗಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ ಎಂಡಿಆರ್‌ವರೆಗೆ...

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’ (Retailers Association of India - RAI) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆ ಡಿಜಿಟಲ್ ಆರ್ಥಿಕತೆಯನ್ನು ನುಚ್ಚುನೂರು...

ಈ ಬಗ್ಗೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, “ಬಾಗಲಕೋಟೆ ಮೂಲದ ಮಂಜುನಾಥ್ ಅನ್ನೋ ಡೆವಲಪರ್ ಯರಿಕೊಪ್ಪದಲ್ಲಿ‌ 33 ಎಕರೆ ಜಮೀನು ಖರೀದಿಸಿದ್ದಾರೆ. ಇನ್ನೊಂದು ಸ್ವಲ್ಪ ಜಮೀನು ಖರೀದಿಸಲಿದ್ದಾರೆ. ಖರಾಬ್ ಒಂದು ಕಡೆ, ಸಾಗುವಳಿ ಒಂದು ಕಡೆ ಸರ್ವೆ ಮಾಡಿದ್ದರು. ಎಡಿಎಲ್ಆರ್ ಅವರು ಹಿಂದೆ ಪೋಡಿ ಮಾಡಿರುವ ಆದೇಶ ರದ್ದು ಮಾಡಿದ್ದರು. ತಹಶೀಲ್ದಾರ್​ಗೆ ಎಡಿಎಲ್ಆರ್ ಖರಾಬ್, ಸಾಗುವಳಿ ಎಲ್ಲಿ ಬರುತ್ತದೆ ಎನ್ನುವ ಬಗ್ಗೆ ಪ್ರಪೋಸಲ್ ಕಳುಹಿಸಿದ್ದರು. ಒಂದು ಎಕರೆ ಜಮೀನು ಹಾಗೂ ಒಂದು ಕೋಟಿ ಕ್ಯಾಶ್ ಅಮೌಂಟ್ ಕೇಳಿದ್ದಾರೆ. ಹಣ ಪಡೆಯುವಾಗ ತಹಶೀಲ್ದಾರ್​ ಸಚ್ಚಿದಾನಂದ ಕುಚನೂರ್ ಅವರನ್ನು​​ ಟ್ರ್ಯಾಪ್ ಮಾಡಿದ್ದೇವೆ” ಎಂದು ಹೇಳಿದರು.

“ನಿನ್ನೆ ಬೆಳಗ್ಗೆ(ಬುಧವಾರ) ದೂರು ಕೊಟ್ಟಿದ್ದರು. ರಾತ್ರಿ 9:30 ಗಂಟೆ ಸುಮಾರಿಗೆ ಲೋಕಾಯುಕ್ತ ದಾಳಿ ಆಗಿದೆ. ಕೆಸಿಡಿ ಹತ್ತಿರ ಬರಲು ಹೇಳಿ 50 ಲಕ್ಷ ರೂ. ಹಣ ಪಡೆಯುತ್ತಿದ್ದರು. ದೂರುದಾರರು ಅವರ ಬ್ಯಾಗ್​ನಲ್ಲಿ ತಂದಿದ್ದ ಹಣ ತಹಶೀಲ್ದಾರ್​ ತಮ್ಮ ಬ್ಯಾಗ್​ಗೆ ಹಾಕಿಕೊಂಡಿದ್ದರು. ರಾಜ್ಯದಲ್ಲಿ ಇದು ದೊಡ್ಡ ರೇಡ್​ ಆಗಿದೆ” ಎಂದು ವಿವರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಲೋಕಾಯುಕ್ತ ದಾಳಿ; 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್ ಸಚ್ಚಿದಾನಂದ

ಭೂ ದಾಖಲೆಗಳ ತಿದ್ದುಪಡಿ ಮತ್ತು 'ಖರಾಬು' ಜಮೀನಿನ ಮಾರ್ಪಾಟು ಮಾಡಿಕೊಡಲು ಬರೋಬ್ಬರಿ...

ವಿಜಯಪುರ | ವಿದ್ಯಾರ್ಥಿನಿಯರು ಆರೋಗ್ಯ ಕಾಳಜಿ ಮಾಡಬೇಕು: ಪ್ರೊ. ವಿಜಯಾ ಬಿ ಕೊರಿಶೆಟ್ಟಿ

ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಣ್ಣಿನ ಆರೋಗ್ಯವನ್ನು...

ಕುಮಟಾ | ನಿಲ್ಲಿಸಿದ್ದ ಲಾರಿ ಏಕಾಏಕಿ ಚಲಿಸಿ ಏಳನೀರು ವ್ಯಾಪಾರಿ ಸಾವು: ಮತ್ತೊಬ್ಬರಿಗೆ ಗಾಯ

ಕುಮಟಾ ಪಟ್ಟಣದ ಎಪಿಎಂಸಿ (APMC) ರಾಷ್ಟ್ರೀಯ ಹೆದ್ದಾರಿ ಬದಿ ಸಂಭವಿಸಿದ ಭೀಕರ...

ವಿಜಯಪುರ | ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ರಾಕೇಶ್ ಕುಮಟಗಿ ನೇಮಕ

ನ್ಯಾಯ, ಸಮಾನತೆ ಹಾಗೂ ಸಂವಿಧಾನದ ಆಶಯಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಭೀಮ್ ಆರ್ಮಿ ಭಾರತ್...