ದವಡೆ ಜಜ್ಜಿಸಿಕೊಂಡ ಆಪರೇಷನ್ ಎಪಿಕ್ ಫ್ಯೂರಿ: ಇರಾನ್ ಕಾಳಗದಲ್ಲಿ ಅಮೆರಿಕಕ್ಕೆ ಆದ ನಷ್ಟಗಳೇನೇನು?

Date:

ಬೃಹತ್ ಮೊತ್ತದ ಬಜೆಟ್, ದುಬಾರಿ ಬೆಲೆಯ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿದ ಹೊರತಾಗಿಯೂ, ಇರಾನ್ ತನ್ನಲ್ಲಿ ಲಭ್ಯವಿದ್ದ ದಟ್ಟವಾದ ವಾಯು ರಕ್ಷಣಾ ಜಾಲ ಹಾಗೂ ಕ್ಷಿಪಣಿಗಳ ಮೂಲಕ ಅಮೆರಿಕಕ್ಕೆ ಭಾರಿ ಹಾನಿಯನ್ನುಂಟುಮಾಡಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಸಶಸ್ತ್ರ ಸಂಘರ್ಷದಲ್ಲಿ ಅಮೆರಿಕ ಅಂದುಕೊಂಡಿದ್ದು ಒಂದು ಆದರೆ ಆಗಿರುವುದು ಇನ್ನೊಂದು. ಆಧುನಿಕ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಲದಿಂದ ಸುಲಭವಾಗಿ ಇರಾನ್‌ ತಲೆಬಾಗುವಂತೆ ಮಾಡಬಹುದು ಅಂದುಕೊಂಡಿದ್ದ ಅಮೆರಿಕಕ್ಕೆ ಇರಾನ್‌ನ ಸುಧಾರಿತ ಕ್ಷಿಪಣಿ ತಂತ್ರಜ್ಞಾನ ಹಾಗೂ ಸ್ಥಳೀಯ ರಕ್ಷಣಾ ವ್ಯವಸ್ಥೆಗಳು ಕಲ್ಪನೆಗೂ ಮೀರಿದ ಆಘಾತವನ್ನು ನೀಡಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ಯ ಯೋಜನಾ ವೆಚ್ಚಗಳು ಕೈತಪ್ಪಿ ಹೋಗಿದ್ದಷ್ಟೇ ಅಲ್ಲದೆ, ಪ್ರಮುಖ ಸೇನಾ ನೆಲೆಗಳ ಮೇಲಿನ ಇರಾನ್‌ನ ನಿಖರ ದಾಳಿಗಳು ಅಮೆರಿಕದ ಸೇನಾ ಶಕ್ತಿಯನ್ನು ಆರ್ಥಿಕವಾಗಿ ಕುಗ್ಗುವಂತೆ ಮಾಡಿದೆ.

- Advertisement -

ಬೃಹತ್ ಮೊತ್ತದ ಬಜೆಟ್, ದುಬಾರಿ ಬೆಲೆಯ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿದ ಹೊರತಾಗಿಯೂ, ಇರಾನ್ ತನ್ನಲ್ಲಿ ಲಭ್ಯವಿದ್ದ ದಟ್ಟವಾದ ವಾಯು ರಕ್ಷಣಾ ಜಾಲ ಹಾಗೂ ಕ್ಷಿಪಣಿಗಳ ಮೂಲಕ ಅಮೆರಿಕಕ್ಕೆ ಭಾರಿ ಹಾನಿಯನ್ನುಂಟುಮಾಡಿದೆ. ಈ ಮುಖಾಮುಖಿಯಲ್ಲಿ ಅಮೆರಿಕ ಅನುಭವಿಸಿದ ಭೌತಿಕ ಮತ್ತು ಸೇನಾ ಆಸ್ತಿಪಾಸ್ತಿಗಳ ನಷ್ಟವು ಪ್ರಸ್ತುತ ಜಾಗತಿಕ ರಕ್ಷಣಾ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಇದನ್ನೂ ಓದಿ: ‘ಡ್ರೋನ್ ವ್ಯೂಹ’ಕ್ಕೆ ದೊಡ್ಡಣ್ಣನ ಪ್ರತಿಷ್ಠೆ ಧೂಳೀಪಟ: ಅಮೆರಿಕದ ಕೊಬ್ಬು ಇಳಿಸಿದ ಇರಾನ್

‘ಆಪರೇಷನ್ ಎಪಿಕ್ ಫ್ಯೂರಿ’ಯಲ್ಲಿ ಅಮೆರಿಕಕ್ಕೆ ಆದ ನಷ್ಟ

ಪೆಂಟಗನ್ ಇನ್‌ಸ್ಪೆಕ್ಟರ್ ಜನರಲ್ ಅಮೆರಿಕನ್ ಕಾಂಗ್ರೆಸ್‌ಗೆ ಸಲ್ಲಿಸಿದ ಅಧಿಕೃತ ವರದಿಯ ಪ್ರಕಾರ, ಜೂನ್ ಅಂತ್ಯದ ವೇಳೆಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ಗಾಗಿ ಒಟ್ಟು 33.4 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಿದೆ (ಭಾರತೀಯ ರೂಪಾಯಿ ಮೌಲ್ಯದಲ್ಲಿ ಅಂದಾಜು ₹3,34,000 ಕೋಟಿಗೂ ಅಧಿಕ). $3.7 ಬಿಲಿಯನ್ (35,483 ಕೋಟಿ ರೂಪಾಯಿಗಳು) ಮೌಲ್ಯದ ಉಪಕರಣ ಮತ್ತು ರಕ್ಷಣಾ ಶಸ್ತ್ರಾಸ್ತ್ರಗಳು ನಾಶವಾಗಿವೆ. ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿನ ಅಮೆರಿಕನ್ ರಾಯಭಾರ ಕಚೇರಿಗಳು ಇರಾನ್ ಕ್ಷಿಪಣಿ ದಾಳಿಗೆ ತೀವ್ರ ಹಾನಿಗೊಳಗಾಗಿವೆ. ಇದರಿಂದಾಗಿ $184 ಮಿಲಿಯನ್ (1,766 ಕೋಟಿ ರೂಪಾಯಿಗಳು) ನಷ್ಟವಾಗಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಕಾಂಗ್ರೆಸ್ ವರದಿಗಳ ಪ್ರಕಾರ ಕಾರ್ಯಾಚರಣೆಯಲ್ಲಿ ಒಟ್ಟು 52 ಪ್ರಮುಖ ವಾಯುಪಡೆ ವಿಮಾನಗಳು ಹಾಗೂ ಡ್ರೋನ್‌ಗಳು ನಾಶವಾಗಿವೆ ಅಥವಾ ತೀವ್ರ ಹಾನಿಗೊಳಗಾಗಿವೆ. 1x F-35A ಸ್ಟೆಲ್ತ್ ಫೈಟರ್ ಜೆಟ್ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶವಾಗಿದೆ. 3 ಯುದ್ಧ ವಿಮಾನಗಳು ಸ್ವಂತ ಪಡೆಗಳ ತಪ್ಪಿನಿಂದ ಮತ್ತು 1 ಶತ್ರುಗಳ ದಾಳಿಯಿಂದ ನಾಶವಾಗಿದೆ. 1x A-10 ದಾಳಿ ವಿಮಾನವು ರಕ್ಷಣಾ ಕಾರ್ಯಾಚರಣೆಯಲ್ಲಿ ತೀವ್ರ ಹಾನಿಗೊಳಗಾಗಿ ಬಳಕೆಗೆ ಬಾರದಾಗಿದೆ. ಅತ್ಯಂತ ದುಬಾರಿ ಕಣ್ಗಾವಲು ಡ್ರೋನ್‌ಗಳಾದ 30x MQ-9 ರಿಪರ್ ಡ್ರೋನ್‌ಗಳು ಇರಾನ್ ವಾಯುಪಡೆ ಹಾಗೂ ಕ್ಷಿಪಣಿಗಳು ಹೊಡೆದುರುಳಿಸಿದವು. ಎತ್ತರದಲ್ಲಿ ಹಾರಾಟ ನಡೆಸುವ ದುಬಾರಿ ಕಣ್ಗಾವಲು ಡ್ರೋನ್ 1x MQ-4C ಟ್ರಿಟಾನ್ ಪತನಗೊಂಡಿದೆ. ಒಟ್ಟು 7 ಹೆಲಿಕಾಪ್ಟರ್‌ಗಳು ನಾಶವಾದವು. ಇದರಲ್ಲಿ 4 AH-6 ಅಪಾಚೆ/ದಾಳಿ ಹೆಲಿಕಾಪ್ಟರ್‌ಗಳು, 2 MH-60 ಸೀಹಾಕ್ ಹಾಗೂ 1 HH-60W ರಕ್ಷಣಾ ಹೆಲಿಕಾಪ್ಟರ್ ಸೇರಿವೆ.

ಕನಿಷ್ಠ 7 ಅಮೆರಿಕನ್ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 417ಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತಗಳಲ್ಲಿ ಮತ್ತು ಹೆಲಿಕಾಪ್ಟರ್/ವಿಮಾನ ಪತನದಿಂದ ಹೆಚ್ಚುವರಿಯಾಗಿ 7 ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ. ಇರಾನ್‌ನ ನಿರಂತರ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕ ಸಾವಿರಾರು ಪೇಟ್ರಿಯಾಟ್ ಮತ್ತು THAAD ರಕ್ಷಣಾ ಕ್ಷಿಪಣಿಗಳನ್ನು ಬಳಸಿದ್ದರಿಂದ, ಅಮೆರಿಕದ ಖಜಾನೆಯಲ್ಲಿದ್ದ ಪ್ರಮುಖ ಶಸ್ತ್ರಾಸ್ತ್ರಗಳ ದಾಸ್ತಾನು ಖಾಲಿಯಾಗಿದೆ ಎಂದು ಪೆಂಟಗನ್ ಈಗಾಗಲೇ ಕಳವಳ ವ್ಯಕ್ತಪಡಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವಿದ್ಯಾರ್ಥಿನಿಯರು ಆರೋಗ್ಯ ಕಾಳಜಿ ಮಾಡಬೇಕು: ಪ್ರೊ. ವಿಜಯಾ ಬಿ ಕೊರಿಶೆಟ್ಟಿ

ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಣ್ಣಿನ ಆರೋಗ್ಯವನ್ನು...

ಭಾರತದ ಮೇಲೆ ಅಮೆರಿಕದ ಸುಂಕದ ಬರೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ...

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ ಪ್ಯಾಟ್ರಿಷಿಯೊ ಗುಜ್ಮಾನ್

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ...

ಹೊಸ ತಿದ್ದುಪಡಿ ಕಾಯ್ದೆ ಜಾರಿ: ಅ.1ರಿಂದ ಜನನ, ಮರಣ ನೋಂದಣಿ ತಡ ಮಾಡಿದ್ರೆ ಕೋರ್ಟ್ ಅಲೆಯಬೇಕಾದೀತು

ಜನನ ಮತ್ತು ಮರಣಗಳ ವಿಳಂಬ ನೋಂದಣಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನಿಯಮಗಳನ್ನು...