ಕೋಲಾರ | ಹಸು ಹೊಟ್ಟೆಯಿಂದ 15 ಕೆಜಿ ಪ್ಲಾಸ್ಟಿಕ್‌ ಹೊರತೆಗೆದ ವೈದ್ಯರು!

Date:

  • ಮೇವು ತಿನ್ನುವುದು ನಿಲ್ಲಿಸಿ ಹಾಲು ಇಳುವರಿ ಕಡಿಮೆ ಮಾಡಿದ್ದ ಹಸು
  • ಹಸುಗಳನ್ನು ಮೇಯಲು ಬಿಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ

15 ಕೆಜಿ ಪ್ಲಾಸ್ಟಿಕ್‌ ತಿಂದು ಹೊಟ್ಟೆಯಲ್ಲಿಟ್ಟುಕೊಂಡು ಬಳಲುತಿದ್ದ ಹಸುವಿಗೆ ಪಶು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಪ್ಲಾಸ್ಟಿಕ್‌ ಹೊರತೆಗೆದಿದ್ದು, ಹಸುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಕೋಲಾರದ ನಗರದಲ್ಲಿ ವಿದೇಶಿ ಎಚ್‌ಎಫ್‌ ತಳಿಯ ಹಸು ಮೇವು ತಿನ್ನುವುದನ್ನು ನಿಲ್ಲಿಸಿ, ಹಾಲು ಇಳುವರಿಯನ್ನು ಕಡಿಮೆ ಮಾಡಿತ್ತು. ಮಾಲೀಕ ಹಸುವಿಗೆ ಸಾಕಷ್ಟು ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ.

ಬಳಿಕ ಪಶು ವೈದ್ಯರ ಬಳಿಗೆ ಹಸುವನ್ನು ಕೊಂಡೊಯ್ದಿದ್ದಾರೆ. ಹಸುವಿನ ತಪಾಸಣೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಇರುವುದನ್ನು ಪತ್ತೆಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪಶು ಶಸ್ತ್ರಚಿಕಿತ್ಸಕ ಡಾ. ರಾಹುಲ್‌ ಮತ್ತು ಪಶು ವೈದ್ಯಾಧಿಕಾರಿ ಡಾ. ರಘುನಾಥ್‌ ಅವರು ಹಸುವಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊಟ್ಟೆಯಲ್ಲಿಟ್ಟ ಸುಮಾರು 15 ಕೆಜಿ ಪ್ಲಾಸ್ಟಿಕ್‌ ಹೊರತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ತಪ್ಪಿದ ಕೈ ಟಿಕೆಟ್‌; ಬಂಡಾಯ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ

ಹಸುಗಳಿಗೆ ಮೇವು ತಿನ್ನಲು ಹೊರಗೆ ಬಿಡುವ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯ ಹೊಟ್ಟೆಸೇರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬ ಹಸು ಸಾಕಾಣಿಕೆದಾರರ ಜವಾಬ್ದಾರಿಯಾಗಬೇಕು. ಇಲ್ಲವಾದರೆ ರಾಸುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಪಶು ಶಸ್ತ್ರಚಿಕಿತ್ಸಕ ಡಾ. ರಾಹುಲ್‌ ಮತ್ತು ಡಾ. ರಘುನಾಥ್‌ ಹೈನುಗಾರಿಕೆ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕೋಮುವಾದಿ ಶಕ್ತಿ ಸೋಲಿಸಿ, ಸಂವಿಧಾನ ಉಳಿಸಿ: ಸುಹೇಲ್ ಅಹಮದ್

ಸ್ವಾತಂತ್ರ್ಯ ಭಾರತದಲ್ಲಿ ಇಂದಿನ ಲೋಕಸಭಾ ಚುನಾವಣೆ ಐತಿಹಾಸಿಕವಾದದ್ದು ಯಾಕೆ ಅಂದ್ರೆ ಪ್ರಜಾಪ್ರಭುತ್ವ...

ಯಾದಗಿರಿ | ರಾಕೇಶ ಹತ್ಯೆ ಖಂಡಿಸಿ ಮಾದಿಗ ಸಮಾಜದ ಪ್ರತಿಭಟನೆ

ದಲಿತ ಯುವಕ ರಾಕೇಶ ಕೊಲೆಯನ್ನು ಖಂಡಿಸಿ ಯಾದಗಿರಿ ಜಿಲ್ಲಾ ಮಾದಿಗ ಸಮಾಜ...

ಶಿವಮೊಗ್ಗ | ಕಾಂಗ್ರೆಸ್‌ ಮುಖಂಡರ ಮನೆ ಮನೆ ಪ್ರಚಾರ; ಕಾರ್ಡ್‌ ಹಂಚಿ ಮತಯಾಚನೆ

ಶಿವಮೊಗ್ಗನಗರದ ಗೋಪಾಲಗೌಡ ಬಡಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಮನೆಮನೆಗೆ ತೆರಳಿ...

ತುಮಕೂರು | ನಟಿ ಶೃತಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಆಗ್ರಹ

ಬಿಜೆಪಿ ಪಕ್ಷದ ಪ್ರಚಾರಕಿ ನಟಿ ಶ್ರುತಿ ಅವರ ಫ್ರಿ ಬಸ್ ಕುರಿತ...