ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಧರ್ಮ ಧರ್ಮಗಳ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಮೂರು ಪರ್ಸೆಂಟ್ ಇರುವ ಜನ ಹಿಂದೂ ಹೆಸರಿನಲ್ಲಿ ದೇಶದ ಹಿಡಿತ ಹೊಂದಿದ್ದಾರೆ. ಬಹುಸಂಖ್ಯಾತರು ಈಗಲು ಹಿಂದೆ ಉಳಿದಿದ್ದು ಅಧಿಕಾರ ವಂಚಿತರಾಗಿದ್ದಾರೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದೆ ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಎಂಎಲ್‌ಸಿ ಡಾ. ತಿಮ್ಮಯ್ಯ ಹೇಳಿದರು.
ಮೈಸೂರಿನ ಗುರು ರೆಸಿಡೆನ್ಸಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಹಿಂದ ದುಂಡುಮೇಜಿನ ಅಧಿವೇಶನದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಚಿಂತಕರಾದ ಅರವಿಂದ್ ಮಾಲಗತ್ತಿ ಮಾತನಾಡಿ, ದೇಶದಲ್ಲಿ ಎಂತಹ ವಿಷಮ ಪರಿಸ್ಥಿತಿ ನಿರ್ಮಾಣ ಆಗಿದೆ ಅಂದ್ರೆ, ಭೂಗತ ರಾಜಕಾರಣ ಎದುರಾಗಿದೆ. ಯಾರು ಸತ್ಯ ಹೇಳುತ್ತಾರೆ, ಯಾರು ಹೋರಾಟ ಮಾಡ್ತಾರೆ ಅವರ ಮೇಲೇ ಕೇಸ್ ಹಾಕೀಸೋದು ಇಡಿ, ಐಟಿ ಮೂಲಕ ಕಡಿವಾಣ ಹೇರೋದು. ಈಗಿನ ರಾಷ್ಟ್ರೀಯ ವ್ಯವಸ್ಥೆ ಜನತೆಯನ್ನು ನೆಮ್ಮದಿಯಾಗಿ ಇರಲು ಬಿಟ್ಟಿಲ್ಲ. ಜನ ಈಗ ಜಾಗೃತರಾಗಿ ಇಂತಹ ಕೀಳು ಮಟ್ಟದ ರಾಜಕೀಯ ಮಾಡುವವರನ್ನು ಬದಲಾಯಿಸಬೇಕು ಎಂದರು.
ಮೋದಿ ಹೇಳ್ತಾರೆ 400 ಸೀಟ್ ಗೆಲ್ತೀವಿ ಅಂತ ರಾಜ್ಯದ ಬಿಜೆಪಿ ಮುಖಂಡ ಹೇಳ್ತಾರೆ 400 ಬಂದ್ರೆ ಸಂವಿಧಾನ ಬದಲಾಯಿಸುತ್ತೇವೆ ಅಂತ. ಅಂದರೆ, ಇವರಿಗೆ ಜನರ ಬದುಕು ಮುಖ್ಯ ಅಲ್ಲ ಸಂವಿಧಾನ ಬದಲಿಸೋದೆ ಇವರ ಗುರಿ. ಬಹು ಸಂಖ್ಯಾತ ವರ್ಗ ಆಳಿಸಿ ಕೊಳ್ಳಬೇಕು, ಮೇಲ್ಜಾತಿ ವರ್ಗ ಆಳಬೇಕು ಇದು ಮನುಸ್ಮೃತಿಯ ಕುತಂತ್ರ ಎಂದರು.
ಚಿಂತಕರಾದ ಕಾಳೇಗೌಡ ನಾಗವಾರ ಮಾತನಾಡಿ, ಯಾರ ಸ್ವಾತಂತ್ರ್ಯಕ್ಕೂ ದಕ್ಕೆ ಬರಬಾರದು. ಆದ್ರೆ ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಅಪಮಾನ ಮಾಡುತ್ತಾ ಬಂದಿದೆ. ಬುದ್ದನ ಚಿಂತನೆ ಪ್ರಪಂಚದಲ್ಲೇ ಶ್ರೇಷ್ಠ.ರಾಜನ ಮಗ ಭಿಕ್ಷೆಗೆ ಬಂದ, ಕರ್ನಾಟಕದಲ್ಲಿ ಬಸವಣ್ಣ ಬಂದ್ರು ಇದು ನಿಜವಾದ ಶ್ರೇಷ್ಠತೆ. ಆತ್ಮದಲ್ಲಿ ನಾನು ಅನ್ನುವುದು ಇದ್ದರೆ ಶ್ರೇಷ್ಠ ಎನಿಸಿಕೊಳ್ಳಕಾರ, ಸಾಹಿತ್ಯ ಓದಿದ ಕಾರಣ ಸರ್ವ ಜನಾಂಗ ಶ್ರೇಷ್ಠ ಅನಿಸಿತು. ಪ್ರಕೃತಿ ಸಹಜ ಅನುಗುಣವಾಗಿ ಮಹಿಳೆಯರಿಗೆ ರಾಜಕೀಯ ಅವಕಾಶ ಸಿಗಲೇ ಇಲ್ಲ. ಕರ್ನಾಟಕ ಎಲ್ಲದಕ್ಕೂ ಮಾದರಿ ಆಗಿದೆ ಅಂದಿನ ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿ ಇದ್ರು. ಮಹಿಳೆಯರು ಇದ್ರು ಮಹಿಳೆಯರಿಗೆ ಪ್ರಾಧಾನ್ಯತೆ ಇತ್ತು. ಆದ್ರೆ ಈಗ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಆಗ್ತಾ ಇದೆ. ಧರ್ಮ ಧರ್ಮ ಅನ್ನುವ ಭೂತ ಮೆಟ್ಟಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಣ್ಣ, ಮಾಜಿ ಶಾಸಕ ನಂಜುಂಡಸ್ವಾಮಿ, ಭಾರತಿ ಶಂಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಹರಿಹರ ಆನಂದ್ ಸ್ವಾಮಿ, ಅಹಿಂದ ಮುಖಂಡರಾದ ಶಿವರಾಮ್, ಜವರಪ್ಪ, ಮಾಜಿ ಪೊಲೀಸ್ ಅಧಿಕಾರಿ ಸುಹೈಲ್ ಅಹಮದ್ ಮರೂರು, ನಾಗೇಶ್, ಕಾಂತರಾಜು ಮುಂತಾದವರ ಉಪಸ್ಥಿತರಿದ್ದರು.
