ಗದಗ | ಟಕ್ಕೇದ ದರ್ಗಾದಿಂದ ಅಸ್ತಮಾ ರೋಗಿಗಳಿಗೆ ಔಷಧ ವಿತರಣೆ

Date:

ಪ್ರಸ್ತುದಲ್ಲಿ ಯುವಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದುಶ್ಚಟಕ್ಕೆ ಬಲಿಯಾಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್‌ ನಿಜಾಮುದ್ದೀನ್ ಷಾ ಆಶ್ರಫಿ ಮಕಾನದಾರ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಡಣದಲ್ಲಿ ಟಕ್ಕೇದ ದರ್ಗಾದಲ್ಲಿ ಹಮ್ಮಿಕೊಂಡಿದ್ದ ಅಸ್ತಮಾ ರೋಗಿಗಳಿಗೆ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಕಫ ಉಂಟಾಗಿ ಅಸ್ತಮಾ ರೋಗ ಬರುತ್ತದೆ. ಬೀಡಿ, ಸೀಗರೇಟ್‌ನಂತಹ ದುಶ್ಚಟಗಳಿಂದ ದೂರವಿರಬೇಕು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಡಾ ಶಿವಕುಮಾರ ಹುದ್ದಾರ ಮಾತನಾಡಿ, “ಅಸ್ತಮಾ ಎನ್ನುವುದು ಕೆಲವು ಜನರನ್ನು ಬಾಲ್ಯದಿಂದ ಹಿಡಿದು ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ಇದು ಅನುವಂಶೀಯವಾಗಿಯೂ ಬರಬಹುದು ಅಥವಾ ಬೇರೆ ಕಾರಣಗಳಿಂದಲೂ ಬರಬಹುದಾಗಿದೆ. ಅಸ್ತಮಾ ಇರುವಂತಹ ಜನರು ಕೆಲವೊಂದು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಅಸ್ತಮಾ ರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ. ಅದರಲ್ಲೂ ಅಸ್ತಮಾ ಅತಿಯಾಗಿರುವಂತಹ ರೋಗಿಗಳು ಕೆಲವೊಂದು ಆಹಾರಗಳನ್ನು ಕಡೆಗಣಿಸಲೇಬೇಕು” ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್‌ ಸರ್ಕಾರ ಮಕ್ಕಳ ವಿಚಾರದಲ್ಲಿ ಚೆಲ್ಲಾಟ ಆಡುತ್ತಿದೆ: ಎಚ್‌ ಡಿ ಕುಮಾರಸ್ವಾಮಿ ವಾಗ್ದಾಳಿ

ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನಿಂದ ಆಗಮಿಸಿದ್ದವರಿಗೆ 5:15ಕ್ಕೆ ಮೃಗಶಿರ ಮಳೆ ಪ್ರವೇಶಿಸುವ ವೇಳೆ ದರ್ಗಾದಿಂದ ಔಷಧಿಯನ್ನು ವಿತರಣೆ ಮಾಡಲಾಯಿತು.

ಸಾಹಿತಿ ಎಸ್ ಐ ಪತ್ತಾರ ಮಾತನಾಡಿದರು. ಮಾಜಿ ಪುರಸಭಾ ಸದಸ್ಯ ಎಂ ಎಸ್ ಮಕನದಾರ, ಅಂಜುಮಾನ್ ಇಸ್ಲಾಂ ಕಮೀಟಿ ಕಾರ್ಯದರ್ಶಿ ಮಾಸುಮಲಿ‌ ಮದಗಾರ, ಎಸ್ ಎಸ್ ನರೇಗಲ್ಲ, ಮೈನು ಮಕಾನದಾರ, ಮುರ್ತುಜಖಾದ್ರಿ ಮದಗಾರ, ಪಾಷಾ ಹವಾಲ್ದಾರ್, ಸೇರಿದಂತೆ ಸುತ್ತಮುತ್ತಲಿನ ಭಕ್ತರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಲೋಕಸಭಾ ಚುನಾವಣೆ; ಮಾಂಗಲ್ಯ ಧಾರಣೆ ಬಳಿಕ ಮತಗಟ್ಟೆಗೆ ಬಂದು ಮತ ಚಲಾಯಿಸಿದ ದಂಪತಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಚುನಾವಣೆ ಹಾಗೂ ಮತದಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ....

ಹಾಸನ ಪೆನ್‌ಡ್ರೈವ್ ಪ್ರಕರಣ | ಸಂಬಂಧಪಟ್ಟವರ ಬಂಧನಕ್ಕೆ ಆಗ್ರಹಿಸಿ ಏ.29ರಂದು ಪ್ರತಿಭಟನೆ

ನೂರಾರು ಅಶ್ಲೀಲ ವಿಡಿಯೋಗಳು, ಚಿತ್ರಗಳು ಇರುವ ಹಾಸನದ ಪೆನ್ ಡ್ರೈವ್ ಲೈಂಗಿಕ...