“ಪ್ರಯತ್ನಶೀಲರಿಗೆ ಖಂಡಿತ ಪುರಸ್ಕಾರ ದೊರೆಯುತ್ತದೆ. ಮಕ್ಕಳು ಓದಿನ ಅಭಿರುಚಿಯೊಂದಿಗೆ ಸದಾ ಸೃಜನಶೀಲರಾಗಿ, ಕ್ರಿಯಾಶೀಲವಾಗಿರಬೇಕು. ರಜಾ ಅವಧಿಯಲ್ಲಿ ಶಾಲಾ ಗ್ರಂಥಾಲಯದ ಪುಸ್ತಕ ಪಡೆದು ಓದಬೇಕು. ಮನೆಯ ಪ್ರತಿ ಚಟುವಟಿಕೆಗಳನ್ನು ಗಮನಿಸಿ ನೆರವಾಗಬೇಕು. ಓದು- ಬರಹ ನಮ್ಮ ಬದುಕನ್ನು ಬದಲಿಸುತ್ತದೆ” ಎಂದು ಶಾಲಾ ಮುಖ್ಯೊಪಾಧ್ಯಾಯ ಡಾ. ನಿಂಗು ಸೊಲಗಿ ಎಂದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.
ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಮನೋಹರ ಮಾತನಾಡಿ, “ಮಕ್ಕಳು ನಿಶ್ಚಿತ ಗುರಿ ಹಾಗೂ ದೃಢತೆಯೊಂದಿಗೆ ಪ್ರಯತ್ನಶೀಲರಾಗಿ ಮುನ್ನಡೆಯಬೇಕು. ತಂದೆ-ತಾಯಿಗಳ ಆಶಯದಂತೆ ಸದೃಢ ಮನಸ್ಥಿತಿಯವರಾಗಿ ಸಾವಧಾನ ಚಿತ್ತದಿಂದ ಅಭ್ಯಾಸ ಮಾಡುತ್ತ ಮುನ್ನಡೆ ಸಾಧಿಸಬೇಕು” ಎಂದು ಹೇಳಿದರು.
“ಮಕ್ಕಳು ನಿಶ್ಚಿತ ಗುರಿ ಹಾಗೂ ದೃಢತೆಯೊಂದಿಗೆ ಪ್ರಯತ್ನಶೀಲರಾಗಿ ಮುನ್ನಡೆಯಬೇಕು. ತಂದೆ-ತಾಯಿಗಳ ಆಶಯದಂತೆ ಸದೃಢ ಮನಸ್ಥಿತಿಯವರಾಗಿ ಸಾವಧಾನ ಚಿತ್ತದಿಂದ ಅಭ್ಯಾಸ ಮಾಡುತ್ತ ಮುನ್ನಡೆ ಸಾಧಿಸಬೇಕು” ಎಂದು ಹೇಳಿದರು.

“ಶಾಲೆಯಲ್ಲಿ ರಜಾ ಅವಧಿಯಲ್ಲಿ ನಿತ್ಯ ಬೆಳಿಗ್ಗೆ 10 ಗಂಟೆಯಿಂದ 12.30 ರವರೆಗೆ ಮುಕ್ತ ಕಲಿಕೆಗೆ ಪೂರಕ ತರಗತಿ ನಡೆಸುತ್ತಿದ್ದು. ಮಲ್ಟಿ ಮೀಡಿಯಾ ಆಧರಿಸಿ ಸ್ಪೋಕನ್ ಇಂಗ್ಲಿಷ ಮತ್ತು ಒಂದು ಗಂಟೆ ಮರದ ನೆರಳಿನಲ್ಲಿ ಕುಳಿತು ಗ್ರಂಥಾಲಯ ಪುಸ್ತಕಗಳ ಸೃಜನಶೀಲ ಓದಿಗೆ ಅವಕಾಶ ನೀಡಲಾಗುತ್ತಿದ್ದು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2025-26 ನೇ ಸಾಲಿನ ಫಲಿತಾಂಶ ಪ್ರಕಟಿಸಿ ಶಾಲಾ ಎಸ್.ಡಿ.ಎಂ.ಸಿ. ಹಾಗೂ ಮಕ್ಜಳ ಪಾಲಕರೊಂದಿಗೆ ಚರ್ಚಿಸಲಾಯಿತು, ಪ್ರತಿ ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 2026-27 ನೇ ಸಾಲಿನ ಒಂದನೇ ತರಗತಿಗೆ ದಾಖಲಾಗುವ ಅರ್ಹ ಮಕ್ಕಳನ್ನು ದಾಖಲಿಸಿಕೊಂಡು ರಜಾ ಅವಧಿಯಲ್ಲಿ ಸಕ್ರಿಯವಾಗಿರಲು ಪ್ರೋತ್ಸಾಹದಾಯಕವಾಗಿ ಡ್ರಾಯಿಂಗ್ ಬುಕ್ ಹಾಗೂ ಡ್ರಾಯಿಂಗ್ ಬಿಡಿಸಲು ಪೂರಕ ಪರಿಕರಗಳನ್ನು ನೀಡಲಾಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ. ಎಂಸಿ ಸದಸ್ಯರಾದ ವಿಠ್ಠಲ ಜಂಬಗಿ, ಪರಮೇಶ ದಂಡಿನ, ಲಕ್ಕಪ್ಪ ಗುಡಿ, ವೆಂಕಟೇಶ ಗಾಳೆಪ್ಪನವರ, ರಾಘವೇಂದ್ರ ಅಬ್ಬಿಗೇರಿ, ಮಲ್ಲಪ್ಪ ಸಜ್ಜೇರಿ, ತಿಮ್ಮಪ್ಪ ಹಿರೇಹೊಳಿ, ನಿವೃತ್ತ ಶಿಕ್ಷಕರಾದ ಪಿ.ಎಂ. ಲಾಂಡೆ, ಶಿಕ್ಷಕಿಯರಾದ ಶಿವಲೀಲಾ ಅಬ್ಬಿಗೇರಿ, ಪಿ. ಆರ್. ಗಾಡದ ಉಪಸ್ಥಿತರಿದ್ದರು. ಶ್ರೀಮತಿ ಪಿ.ಆರ್. ಗಾಡದ ಸ್ವಾಗತಿಸಿದರು. ಎಂ.ಆರ್. ಗುಗ್ಗರಿ ವಂದಿಸಿದರು, ಬಿ.ಎಚ್. ಹಲವಾಗಲಿ ಕಾರ್ಯಕ್ರಮ ನಿರೂಪಿಸಿದರು.




