ನಮ್ಮ ಪ್ರಧಾನಿಗಳನ್ನು ಕೇಳುವ ಧೈರ್ಯ ನಮಗಿದೆ; 15 ಲಕ್ಷ ರೂ.ಗೆ ದಾಖಲೆ ಕೊಡಿ: ಯತ್ನಾಳ್‌ ಸವಾಲು

Date:

  • ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ: ಯತ್ನಾಳ್‌
  • ಸಾಕ್ಷಿ ಕೇಳಿದ್ದಾರೆ, ನಿಮ್ಮ ಬಳಿ ಇದ್ದರೆ ಕೊಟ್ಟುಬಿಡಿ: ಖಾದರ್

ನಮ್ಮ ಪ್ರಧಾನ ಮಂತ್ರಿಗಳನ್ನು ಧೈರ್ಯವಾಗಿ ನಾವೇ ಕೇಳುತ್ತೇವೆ. ಆ ಧೈರ್ಯ ನಮಗಿದೆ. ಪ್ರತಿಯೊಬ್ಬರಿಗೂ 15 ಲಕ್ಷ ರೂ. ಹಾಕುತ್ತೇವೆ ಎಂದು ನರೇಂದ್ರ ಮೋದಿ ಅವರು ಎಲ್ಲಿ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ನೀಡಿ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದರು.

- Advertisement -

ಗುರುವಾರ ಸದನ ಆರಂಭವಾಗುತ್ತಿದ್ದಂತೆ ರಾಜ್ಯಪಾಲರ ಭಾಷಣದ ಮೇಲೆ ಸಭಾಧ್ಯಕ್ಷ ಯು ಟಿ ಖಾದ‌ರ್‌ ಅವರು ಎನ್‌ ಎಚ್‌ ಕೋನರೆಡ್ಡಿ ಅವರಿಗೆ ಮಾತನಾಡಲು ಅನುವು ಮಾಡಿಕೊಟ್ಟರು. ಸಚಿವ ಕೆ ಜೆ ಜಾರ್ಜ್‌ ಅವರು “ಮೋದಿ ಅವರು 15 ಲಕ್ಷ ಕೊಡುತ್ತಾರೆ ಎಂದಿದ್ದರು. ಕೊಟ್ರಾ?” ಎಂದು ಪ್ರತಿಪಕ್ಷದ ನಾಯಕರನ್ನು ಪ್ರಶ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದಕ್ಕೆ ಯತ್ನಾಳ್‌ ಎದ್ದುನಿಂತು, “ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ. ನಮ್ಮ ಪ್ರಧಾನಿಯವರು ಹೇಳಿರುವ ಸೂಕ್ತ ಸಾಕ್ಷಿ ನೀಡಿ, ನಾವೇ ಹೋಗಿ ಮೋದಿ ಅವರನ್ನು ಕೇಳುತ್ತೇವೆ. ಅವರು ಹೇಳಿದ್ದು ನಿಜವಿದ್ದರೆ 15 ಲಕ್ಷ ರೂ. ಪ್ರಧಾನಿಗಳಿಂದ ತರುತ್ತೇವೆ” ಎಂದರು.

ಅಭಯ್‌ ಪಾಟೀಲ್‌ ಮಧ್ಯ ಪ್ರವೇಶಿಸಿ, “ನಿಮ್ಮ ಧೈರ್ಯವನ್ನು ರಾಜ್ಯದ ಜನ ನೋಡಿದ್ದಾರೆ. ಮೊದಲು ಜಿಎಸ್‌ಟಿ ಪಾಲನ್ನು ಮೋದಿ ಅವರಿಂದ ಕೇಳಿ ಪಡೆಯಿರಿ” ಎಂದು ಲೇವಡಿ ಮಾಡಿದರು.

ಬಿ ವೈ ವಿಜಯೇಂದ್ರ ಮಧ್ಯ ಪ್ರವೇಶಿಸಿ, “ಸದನದಿಂದ 15 ಲಕ್ಷ ವಿಚಾರ ಕಡತದಿಂದ ತೆಗೆದುಹಾಕಿ. ಇಲ್ಲವಾದರೆ ಆ ಬಗ್ಗೆ ಮಾತನಾಡಿರುವ ಬಗ್ಗೆ ದಾಖಲೆ ನೀಡಿ” ಎಂದು ಆಡಳಿತ ಪಕ್ಷದ ಸದಸ್ಯರನ್ನು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ

ಸಭಾಧ್ಯಕ್ಷರು ಪ್ರತಿಕ್ರಿಯಿಸಿ, “ಇದೇ ವಿಚಾರದಲ್ಲಿ ಕಾಲಹರಣ ಮಾಡಬೇಡಿ. 15 ಲಕ್ಷ ವಿಚಾರದ ಬಗ್ಗೆ ಪ್ರಸ್ತಾಪಿಸಿದವರು ಸೂಕ್ತ ದಾಖಲೆ ನೀಡಿ. ಈ ವಿಷಯ ಎಳೆಯುತ್ತ ಸದನ ಹಾಳು ಮಾಡಬೇಡಿ. ಸಾಕ್ಷಿ ಕೇಳಿದ್ದಾರೆ, ನಿಮ್ಮ ಬಳಿ ಇದ್ದರೆ ಕೊಟ್ಟುಬಿಡಿ” ಎಂದು ಕಾಂಗ್ರೆಸ್‌ ಸದಸ್ಯರಿಗೆ ಸೂಚಿಸಿದರು.

ಕೆ ಎನ್‌ ರಾಜಣ್ಣ ಪ್ರತಿಕ್ರಿಯಿಸಿ, “15 ಲಕ್ಷ ಕೊಡುವ ಬಗ್ಗೆ ಇಡೀ ಜಗತ್ತೇ ಕೇಳಿದೆ. ಆ ವಿಡಿಯೋ ನಾವೆಲ್ಲರೂ ನೋಡಿದ್ದೇವೆ. ಇದಕ್ಕಿಂತ ಸಾಕ್ಷಿ ಬೇಕಾ?” ಎಂದರು.

“ಮೋದಿ ಅವರು ಮಾತನಾಡಿದ್ದು ಕೇವಲ ಕಪ್ಪು ಹಣದ ಬಗ್ಗೆ ಅಷ್ಟೇ. ಆದರೆ, ಅದನ್ನು 15 ಲಕ್ಷ ಕೊಡುತ್ತಾರೆ ಎಂದು ತಿರುಚಲಾಗಿದೆ” ಎಂದು ಬಿಜೆಪಿ ಸದಸ್ಯರು ಪ್ರತಿಕ್ರಿಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನಾಳೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಜೊತೆಗೆ ರೈತರು ಬೆಳೆಯುವ...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...