ಉತ್ತರಾಖಂಡದ ಹಲ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಬಳಿಕ ಸ್ಥಳವನ್ನು ಗೋಮೂತ್ರದಿಂದ ಶುದ್ದೀಕರಿಸಿ ಶುದ್ದೀಕರಿಸಿ ಹೋಮ-ಹವನ ನಡೆಸಿದ ಘಟನೆ ಖಂಡಿಸಿ, ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಜಾತಿ ಈ ಘಟನೆ ಅಸಮಾನತೆ ಹಾಗೂ ಅಸ್ಪೃಶ್ಯತೆ ಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ನೀಡಿದ್ದು, ಇಂತಹ ಘಟನೆಗಳು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತಿವೆ ಎಂದು ದಸಂಸ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಈದ್ ಮಿಲಾದ್: ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲು
ಘಟನೆಗೆ ಕಾರಣರಾದವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಮುಖಂಡರು ಎಚ್ಚರಿಸಿದರು. ಈ ವೇಳೆ ಪ್ರತಿಭಟನೆಯಲ್ಲಿ ರವಿ ಕಾರ್ಜುವಳ್ಳಿ, ರಂಗಯ್ಯ ಅಚ್ಚೇನಹಳ್ಳಿ, ಬಸವರಾಜು ಗೇಕರವಳ್ಳಿ, ದೇವರಾಜು ಜೆ. ತಿಮ್ಮನಹಳ್ಳಿ, ಸುರೇಶ್ ಕೊಂಗಳ್ಳಿ, ಲೋಕೇಶ್ ಅಚ್ಚೇನಹಳ್ಳಿ, ರವಿ ನಿಲುವಾಗಿಲು, ಲೋಹಿತ್ ಹಸಗನೂರು, ರಂಗನಾಥ್ ಬಸವೇಶ್ವರ, ಕಾಂತರಾಜ್ ಬ್ಯಾಬ, ಹರೀಶ್ ಬರತವಳ್ಳಿ, ಧರ್ಮಪ್ಪ ಬ್ಯಾಬ, ದೇವರಾಜ್ ಚಂದ್ರಶೇಖರ್ ತೊರೆಹಳ್ಳಿ, ಮಣಿಕಂಠಸ್ವಾಮಿ ಮುದಿಗೆರೆ, ನಂದೀಶ್ ಬ್ಯಾಬ ಹಾಗೂ ಇನ್ನಿತರರಿದ್ದರು.




