ಹಾಸನ ಜಿಲ್ಲೆ ಆಲೂರು ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಬ ಗ್ರಾಮದಲ್ಲಿ ಬಿಳಿಸುಳಿ (ಫಂಗಸ್) ರೋಗದಿಂದ ಹಾನಿಗೊಳಗಾದ ಮೆಕ್ಕೆಜೋಳದ ಹೊಲಗಳಲ್ಲಿನ ಬೆಳೆಗಳನ್ನು ಪರಿಶೀಲಿಸುವ ಸಲುವಾಗಿ ಭೇಟಿ ನೀಡಿ ಮೆಕ್ಕೆಜೋಳ ಬೆಳೆಯುವ ರೈತರ ಸಂಕಷ್ಟ ಮತ್ತು ನೋವು ನಮ್ಮೆಲ್ಲರ ನೋವು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಈ ಬಾರಿಯೂ ಬಿಳಿಸುಳಿ ರೋಗದಿಂದ ಸಾವಿರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಎಕರೆ ಮೆಕ್ಕೆಜೋಳ ಬೆಳೆಗೆ ಸುಮಾರು 30 ಸಾವಿರ ರೂ.ಗೂ ಹೆಚ್ಚು ವೆಚ್ಚ ಮಾಡುವ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ದ್ದಾಗ ಬೆಳೆ ಹಾನಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ರಾಜ್ಯ ಸರ್ಕಾರ, ಕೃಷಿ ಇಲಾಖೆ,ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ನನ್ನ ದೊಂದು ವಿನಂತಿ. ಹಾಸನ ಜಿಲ್ಲೆಯಾದ್ಯಂತ ತುರ್ತಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ನಷ್ಟ ಅನುಭವಿಸಿರುವ ಪ್ರತಿಯೊಬ್ಬ ರೈತ ನಿಗೂ ನ್ಯಾಯ ಯುತ ಪರಿಹಾರ ನೀಡಬೇಕು. ಅಗತ್ಯ ವಿದ್ದರೆ ವಿಶೇಷ ಪರಿ ಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರ ವನ್ನು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ವಿಶ್ವ ಜನಸಂಖ್ಯಾ ದಿನ ಅಂಗವಾಗಿ ಮಾನವ ಸರಪಳಿ
ರೈತರಿಗೆ ಸದಾ ಸ್ಪಂದಿಸುವುದಾಗಿ ಭರವಸೆ ನೀಡಿದ ಅವರು, ಪ್ರಸ್ತುತ ಮಳೆಯ ಪರಿ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆಯೂ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸ ಬೇಕು ಎಂದು ಸರ್ಕಾರವನ್ನು ನ್ಯಾಯ ಯುತ ಪರಿಹಾರ ನೀಡಬೇಕು. ಅಗತ್ಯ ವಿದ್ದರೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.




