ಹಾವೇರಿ | ಸಂವಿಧಾನ ನಮ್ಮ ಜೀವನಕ್ಕೆ ದಾರಿದೀಪ: ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪ ಎನ್‌

Date:

“ಸಂವಿಧಾನವು ನಮ್ಮ ಜೀವನಕ್ಕೆ ದಾರಿದೀಪವಾಗಿದ್ದು, ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ತತ್ವವನ್ನು ಒಳಗೊಂಡಿದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವೀಂದ್ರಪ್ಪ ಎನ್. ಹೇಳಿದರು.

- Advertisement -

ಹಾವೇರಿ ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ-2026 ಮತ್ತು ಅಂತರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನಾ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪುಸ್ತಕ ವಿವಾದಗಳ ಸುತ್ತ : ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು...

ಒಂದು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಗ್ರಂಥಾಲಯದ ಪಟ್ಟಿಯಿಂದ ಕೈಬಿಡುವುದು ಸಂಪೂರ್ಣ ನಿಷೇಧವಲ್ಲ; ಕಾನೂನಿನ ಚೌಕಟ್ಟಿನಲ್ಲಿ ಆರೋಪ ಮತ್ತು ಸತ್ಯಾಸತ್ಯತೆಗಳ ವಿಚಾರಣೆ ನಡೆದ ನಂತರವೇ ಅಂತಿಮ ತೀರ್ಮಾನವಾಗುತ್ತದೆ. ಯಾವುದೇ ಕೃತಿಯನ್ನು ನಿಷೇಧಿಸುವ...

₹18 ಲಕ್ಷ ಕೋಟಿ ಸಾಲ ರೈಟ್‌ಆಫ್: ದೇಶದ ಸಂಪತ್ತು...

ಒಂದು ಕಡೆ ರೈತರು ಸಾಲದ ಹೊರೆ ತಾಳಲಾರದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣ ಸಾಲದ ಭಾರದಿಂದ ಉದ್ಯೋಗಕ್ಕಾಗಿ ಪರದಾಡುತ್ತಾರೆ. ಬಡ ಕುಟುಂಬಗಳು ಮನೆ ನಿರ್ಮಾಣದ ಕನಸಿಗಾಗಿ ಸಾಲ ಪಡೆದು ಕಂತು ಕಟ್ಟಲು ಹೆಣಗಾಡುತ್ತವೆ....

ಸಂವಿಧಾನಕ್ಕೆ 77 ವರ್ಷ | ಸಂವಿಧಾನ ಸೋತಿದೆಯೇ?, ಅನುಷ್ಠಾನದಲ್ಲಿ...

26 ನವೆಂಬರ್ 1949. ಭಾರತದ ಇತಿಹಾಸದಲ್ಲಿ ಇದೊಂದು ಮಹತ್ವದ ಐತಿಹಾಸಿಕ ದಿನ. ಶತಮಾನಗಳ ಸಾಮಾಜಿಕ ಅಸಮಾನತೆ, ಶೋಷಣೆ, ದಮನ ಮತ್ತು ಅನ್ಯಾಯದ ವಿರುದ್ಧ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಸಹೋದರತ್ವದ ಆಧಾರದಲ್ಲಿ ಹೊಸ...

“ಸಂವಿಧಾನವು ಸ್ತ್ರೀ-ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಿದ್ದರೂ. ಇಂದಿಗೂ ಮಹಿಳೆಯರ ಮೇಲೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದನೀಯ. ಮಹಿಳೆಯರಿಗೆ ಗೌರವ, ಸುರಕ್ಷತೆ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಕೇವಲ ಕಾನೂನಿನ ಜವಾಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬರ ನೈತಿಕ ಹೊಣೆಗಾರಿಕೆಯಾಗಿದೆ” ಎಂದರು.

ಯಾರಿಗಾದರೂ ಕಾನೂನು ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬೇಕು ಅಥವಾ 15100 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಉಚಿತ ಕಾನೂನು ನೆರವು ಪಡೆಯಬಹುದು ಎಂದು ಹೇಳಿದರು.

ನೆರವು ಸಹಾಯಕ ಅಭಿರಕ್ಷಣಾ ವಕೀಲ ಎನ್.ಎನ್. ಡಿಳ್ಳೆಪ್ಪನವರ ಅವರು ಸಂವಿಧಾನ ದಿನಾಚರಣೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಅವರು ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಎಂ.ಜಿ. ಶಿವಳ್ಳಿ, ಶ್ರೀಮತಿ ಅಶ್ವಿನಿ ವಿಜಯ ಶಿರಿಯಣ್ಣನವರ, ಎನ್.ಎಂ. ರಮೇಶ ಮಹ್ಮದ್ ಅನ್ವರ ಹುಸೇನ ಮೊಗಲಾನಿ, ಹಿರಿಯ ದಿವಾಣಿ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ., ಶೋಭಾ ಬಿ.ಜಿ., ಆಕರ್ಷ್ ಎಂ.. ರಾಹುಲ್ ಅಧಿನಾಥ ನ್ಯಾಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ, ಮುಖ್ಯ ಕಾನೂನು ನೆರವು ಅಭಿರಕ್ಷಣಾ ವಕೀಲ ವಿ.ಜಿ. ದೊಡ್ಡಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೇವತಿ ಹೊಸಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ ಇತರರು ಉಪಸ್ಥಿತರಿದ್ದರು..

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ |ಬಸವಣ್ಣನವರ ಬಗ್ಗೆ ಅಪಪ್ರಚಾರ ಸಹಿಸುವುದಿಲ್ಲ; ರವಿ ಹಂಜ್ ವಿರುದ್ಧ ಕ್ರಮಕ್ಕೆ ಒತ್ತಾಯ

ವಿಶ್ವಗುರು ಬಸವಣ್ಣನವರು ಹಾಗೂ ಸಂವಿಧಾನದ ಕುರಿತು ಅವಹೇಳನಕಾರಿ ಮತ್ತು ಆಧಾರರಹಿತ ಹೇಳಿಕೆ...

ಉಡುಪಿ | ಭಾರತಕ್ಕೆ ಬಾಬಾ ಸಾಹೇಬರ ಸಂವಿಧಾನವೇ ಕೈದೀವಿಗೆ: ಪ್ರೊ. ಜಯಪ್ರಕಾಶ್ ಶೆಟ್ಟಿ

ಜಾತಿ, ಮತ, ಭಾಷೆ ಹಾಗೂ ಬಣ್ಣಗಳ ವೈವಿಧ್ಯತೆಯಿಂದ ಕೂಡಿರುವ ಬಹುತ್ವ ಭಾರತದ...

ಉಡುಪಿ | ಶೋಷಿತರ ಪಾಲಿಗೆ ಸಂವಿಧಾನವೇ ಜೀವಾಳ: ಶ್ಯಾಮರಾಜ್ ಬಿರ್ತಿ

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಭಾರತದ ಸಮಗ್ರ...

ಉಡುಪಿ | ಸಂವಿಧಾನದ ಮೌಲ್ಯಗಳ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಬೇಕು: ಪ್ರೊ. ಫಣಿರಾಜ್

ಭಾರತದ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಅವುಗಳ ರಕ್ಷಣೆಗಾಗಿ ಪ್ರತಿಯೊಬ್ಬ ನಾಗರಿಕನೂ...