“ಹಾನಗಲ್ ರಸ್ತೆಯಲ್ಲಿರುವ ಶ್ರೀಕಂಠಪ್ಪ ಬಡಾವಣೆಯು 2004ರಲ್ಲಿಯೇ ಜಾರಿಗೆ ಬಂದಿದ್ದು, ಸದರಿ ಬಡವಾಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಂಡು ನಿವಾಸಿಗಳು ವಾಸಿಸುತ್ತಿದ್ದಾರೆ. ಬಡವಾಣೆಯಲ್ಲಿ ಉದ್ಯಾನವನಕ್ಕಾಗಿಯೇ ವಿಶಾಲ ಜಾಗೆಯು ಮೀಸಲಿದ್ದು, ಸದರಿ ಜಾಗೆಯನ್ನು ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸುವಂತೆ ಕೋರಿ ಮಾನ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ಎಫ್ಎನ್ ಗಾಜಿಗೌಡ್ರ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದರು.
ಶುಕ್ರವಾರ ನಗರದದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಬಡವಾಣೆಯ ನಿವಾಸಿಗಳು ಅಧ್ಯಕ್ಷರಿಗೆ ಸಲ್ಲಿಸಿದ ಮನವಿವ ಸಲ್ಲಿಸಿದರು.
“ಶ್ರೀಕಂಠ ಬಡಾವಣೆಯಲ್ಲಿ ಅಲ್ಪಸಂಖ್ಯಾತ ಇಲಾಖೆಯ ವಿಧ್ಯಾರ್ಥಿನಿಯರ ವಸತಿ ನಿಲಯ ಮತ್ತು ಹಿಂದುಳಿದ ವರ್ಗದ ಇಲಾಖೆಯ ವಿಧ್ಯಾರ್ಥಿನಿಯರ ವಸತಿ ನಿಲಯ ಹೀಗೆ ಎರಡು ವಿದ್ಯಾರ್ಥಿನಿಯರ ಹಾಸ್ಟೆಲಗಳಿವೆ. ಅಲ್ಲದೆ ಒಂದು ಶಾಲೆಯು ಸಹಾ ಇದ್ದು ಪ್ರತಿ ದಿನ ಸುಮಾರು 1000-1200 ಜನರು ಸದರಿ ಬಡಾವಣೆಯಲ್ಲಿ ಇರುವರು” ಬಡಾವಣೆಯ ನಿವಾಸಿ ಬಸವಾರಾಜ ಪುಜಾರ ಹೇಳಿದರು.
“ವಿಶಾಲವಾದ ಉದ್ಯಾನವನದ ಜಾಗೆಯು ಸದ್ಯ ಖಾಲಿ ಇರುವುದರಿಂದ ಕಸ ಗಿಡ-ಕಂಟೆ ಬೆಳೆದಿದ್ದು, ಬಡಾವಣೆಯ ಅಂದವು ಹಾಳಾದಂತ ಬಾಸವಾಗುತ್ತಿದೆ. ಆದ್ದರಿಂದ ತಾವುಗಳು ಪ್ರಾಧಿಕಾರದ ವತಿಯಿಂದ ಸದರಿ ಸ್ಥಳದಲ್ಲಿ ಒಂದು ಸುಂದರವಾದ ಗಾರ್ಡನ್ ಅನ್ನು ನಿರ್ಮಾಣ ಮಾಡಿದರೆ, ನಿವಾಸಿಗಳಿಗೆ ವಾಯು ವಿಹಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ ಇದರಿಂದ ಶಾಲಾ-ಕಾಲೇಜು-ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯಲು ಹಾಗೂ ವಾಯು ವಿಹಾರ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ ಗಾರ್ಡನ್ ನಿರ್ಮಾಣವಾದರೆ ಬಡಾವಣೆಯು ಅಂದವಾಗಿ ಕಾಣುವ ಜೊತೆಗೆ ಇಲ್ಲಿಯ ನಿವಾಸಿಗಳ ಆರೋಗ್ಯ ಸುಧಾರಿಸುತ್ತದೆಯಾದ್ದರಿಂದ ತಾವುಗಳು ಸದರಿ ಜಾಗೆಯಲ್ಲಿ ಉತ್ತಮ ಹಾಗೂ ಸುಸಜ್ಜಿತ ಉದ್ಯಾನವನ ನಿರ್ಮಿಸಿಕೊಡಬೇಕು” ಎಂದು ವಿನಂತಿಸಿದ್ದಾರೆ.
ಉದ್ಯಾನವನ ನಿರ್ಮಾಣದ ಭರವಸೆ: ಮನವಿ ಸ್ವೀಕರಿಸಿದ ಮಾನ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ಎಫ್ಎನ್ ಗಾಜಿಗೌಡ್ರ ಮಾತನಾಡಿ, “ಈಗಾಗಲೇ ಸದರಿ ಜಾಗೆಗೆ ಭೇಟಿ ನೀಡಿ ಪರಿಸೀಲಿಸಿದ್ದೇವೆ. ಒಳ್ಳೆಯ ಜಾಗೆಯಿದ್ದು ಪ್ರಾಧಿಕಾರದಿಂದ ಉದ್ಯಾನವನ ನಿರ್ಮಿಸಿ ಕೊಡಲಾಗುವುದು” ಎಂದು ಭರವಸೆ ನೀಡಿದರು.
ಮನವಿ ಪತ್ರಕ್ಕೆ ಶ್ರೀಕಂಠಪ್ಪ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷರು ಎಸ್.ಎನ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಕೊಟ್ರಗೌಡ ಸಿ, ನಿವಾಸಿಗಳಾದ ಬಸವರಾಜ ಪೂಜಾರ, ಬೀರಪ್ಪ ಸೂರಣಗಿ, ಚಾಮರಾಜ ಕುಲಮಿ, ಸುರೇಶ ಡಿ.ವಿ, ಎಚ್.ಎ. ಮುಲ್ಲಾ, ನಾಗಪ್ಪ ಪೂಜಾರ, ರವೀಂದ್ರ ಕರಡಿ ಸೇರಿದಂತೆ ಬಡವಾಣೆಯ ಜತೆಗಿದ್ದರು.




