2026–27ನೇ ಸಾಲಿನ ಕೃಷಿ ಇಲಾಖೆಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಶುಗರ್ಕೇನ್ ಹಾರ್ವೆಸ್ಟರ್ ಹಾಗೂ ಕಂಬೈನ್ ಹಾರ್ವೆಸ್ಟರ್ ಹಬ್ಗಳ ಸ್ಥಾಪನೆಗೆ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ ಶೇ.70 ಮತ್ತು ರೈತ ಉತ್ಪಾದಕರ ಸಂಸ್ಥೆಗಳು (ಎಫ್ಪಿಒ) ಸೇರಿದಂತೆ ಸಂಘ-ಸಂಸ್ಥೆಗಳಿಗೆ ಶೇ.70ರಷ್ಟು ಕ್ರೆಡಿಟ್ ಲಿಂಕ್ಡ್ ಬ್ಯಾಕ್ಎಂಡೆಡ್ ಸಬ್ಸಿಡಿ ಸೌಲಭ್ಯ ಲಭ್ಯವಿದೆ.
ಅರ್ಜಿದಾರರು ಆಧಾರ್ ಕಾರ್ಡ್, ಎಫ್ಐಡಿ ಸಂಖ್ಯೆ, ಬ್ಯಾಂಕ್ ಪಾಸ್ಬುಕ್ ಪ್ರತಿ, ಸಂಬಂಧಿತ ಬ್ಯಾಂಕ್ನಿಂದ ಪಡೆದ ತಾತ್ವಿಕ ಸಾಲ ಮಂಜೂರಾತಿ ಪತ್ರ ಹಾಗೂ ₹100 ಮೌಲ್ಯದ ಬಾಂಡ್ ಪೇಪರ್ನಲ್ಲಿ ನೋಟರಿ ಮಾಡಿಸಿದ ಮುಚ್ಚಳಿಕೆಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಇದನ್ನು ಓದಿದ್ದೀರಾ? ಕಲಬುರಗಿ | ಬೆಳೆಸಾಲ ಪಡೆದ ರೈತರ ಬೆಳೆ ವಿಮೆ ಕಡ್ಡಾಯ; ಬ್ಯಾಂಕ್ಗಳಿಗೆ ಜಿಲ್ಲಾಧಿಕಾರಿ ಸೂಚನೆ
ಆಸಕ್ತ ರೈತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜುಲೈ 31, 2026ರೊಳಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕಲಬುರಗಿಗೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.





