ಕಲಬುರಗಿ | ದಲಿತರ ಓಣಿಗಿಲ್ಲ ನೀರಿನ ಭಾಗ್ಯ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ

Date:

ಕಲಬುರಗಿ ಜಿಲ್ಲೆಯ ದಕ್ಷಿಣ ಕ್ಷೇತ್ರದ ಭೀಮಳ್ಳಿ ಗ್ರಾಮದ ದಲಿತ ಓಣಿಯಲ್ಲಿ ನೀರಿನ ಸೌಲಭ್ಯ ಸಿಕ್ಕಿಲ್ಲ. ಹಿಂದಿನ ಕಾಲಘಟ್ಟದಂತೆ ಪ್ರಸ್ತುತ ದಿನಗಳಲ್ಲಿಯೂ ಕೂಡ ಬಾವಿ ನೀರು ಸೇದುವ ಅನಿವಾರ್ಯತೆ ಎದುರಾಗಿದೆ.

- Advertisement -

ದಲಿತ(ಮಾದಿಗ ಸಮುದಾಯದ) ಕುಟುಂಬಗಳು ವಾಸವಾಗಿರುವ ಓಣಿಯಲ್ಲಿ ಸುಮಾರು ವರ್ಷಗಳಿಂದ ಕುಡಿಯಲು, ಬಳಸಲು ನೀರಿಲ್ಲ. ಸರ್ಕಾರದಿಂದ ನೀರಿನ ಟ್ಯಾಂಕ್, ಜಲಜೀವನ ಮಷೀನ್ ಮನೆಗೊಂದು ನಳ ಮಾಡಿದ್ದಾರೆ. ಅವುಗಳು ತೋರಿಕೆ ರೂಪದಲ್ಲಿವೆಯೇ ವಿನಃ ಒಂದು ದಿನವೂ ಅದರಲ್ಲಿ ನೀರು ಬಂದಿಲ್ಲ. ಟ್ಯಾಂಕ್‌ಗಳಿಂಗೆ ಪೈಪ್‌ಲೈನ್ ವ್ಯವಸ್ಥೆ ಕೂಡ ಆಗಿಲ್ಲ. ಸುಮನೆ ಕಟ್ಟಿ ಬಿಟ್ಟಿದ್ದಾರೆ ಅಷ್ಟೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

“ಬಳಸುವುದಕ್ಕೆ, ಕುಡಿಯುವುದಕ್ಕೆ ನಾವು ಪ್ರತಿನಿತ್ಯ ಬಾವಿಯಿಂದ ನೀರು ಸೇದಿ ಹೊತ್ತು ತರುವಂತಹ ಅನಿವಾರ್ಯತೆ ಎದುರಾಗಿದೆ. ತೆರೆದ ಬಾವಿಯಿಲ್ಲಿ ಕಸಕಡ್ಡಿ, ಮಳೆ ನೀರು ಸೇರಿಕೊಳ್ಳುತ್ತಿದೆ. ಇದರಿಂದ ಬಾವಿಯ ನೀರು ಕಲುಸಿತಕೊಂಡು ಅದೇ ಬಾವಿ ನೀರು ಸೇವಿಸಿದರೆ ರೋಗ ರುಜಿನಗಳು ಹರಡಬಹುದೆನ್ನುವ ಆತಂಕ ಮನೆಮಾಡಿದೆ. ಆದರೆ ದಲಿತರ ಓಣಿ ಅಂದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ” ಎಂದು ಭೀಮಳ್ಳಿ ಗ್ರಾಮಸ್ಥರು ಆರೋಪಿದರು.

ಸೇದುವ ಬಾವಿ 1

ಶ್ರೀದೇವಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಎಸ್‌ಸಿ ಜನರ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯವಾಗಿದೆ. ನಾವು ಸತ್ತಿದ್ದೇವಾ ಬದುಕಿದ್ದೇವಾ ಎಂದೂ ಕೂಡ ನೋಡುವುದಿಲ್ಲ. ನೀರಿಗಾಗಿ ಬೀದಿ ಬೀದಿ ಅಲೆದು ನೀರು ತರುವ ಪರಿಸ್ಥಿತಿ ಇದೆ. ಅವರು ನೀರು ಕೊಡಲಿಲ್ಲ ಅಂದರೆ ಬಾವಿಯಿಂದ ನೀರು ಸೇದಿ ತರುವಷ್ಟರಲ್ಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಕೆಲಸ ಬಿಟ್ಟು ಕೂತರೆ ನಮ್ಮ ಹೊಟ್ಟೆ ಬಟ್ಟೆ ಹೇಗೆ ನಡೆಯಬೇಕು” ಎಂದು ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.

ಸುಗಲಬಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಮಕ್ಕಳು, ಸೊಸೆಯಂದಿರು ದುಡಿಯಲು ಬಾಂಬೆ, ಪೂನಾ ಹೋಗಿದ್ದಾರೆ. ನಾವು ವಯಸ್ಸಾದವರು ಬಾವಿಯಿಂದ ಹೇಗೆ ನೀರು ಸೇದಿ ತರಬೇಕು. ಅವರಿವರ ಮಕ್ಕಳಿಗೆ ಕೈ ಕಾಲು ಬಿದ್ದು ಒಂದು ಕೊಡ ನೀರು ತಂದು ಕೊಡಿರೆಂದು ಬೇಡಿಕೊಳ್ಳಬೇಕು. ನಮ್ಮ ಓಣಿಗೆ ನೀರಿನ ಸೌಲಭ್ಯ ಕಲ್ಪಿಸಿಕೊಡಿ” ಎಂದು ಮನವಿ ಮಾಡಿದರು.

ಬಾವಿ ನೀರು

ದೂಳಮ್ಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನೀರಿನ ಟ್ಯಾಂಕ್ ಮತ್ತು ಜಲಜೀವನ ಮಷೀನ್ ಮನೆಗೊಂದು ನಳ ಮಾಡಿದ್ದಾರೆ. ಆದರೆ ಅದರಲ್ಲಿ ನೀರು ಬರುವುದಿಲ್ಲ. ಪೈಪ್‌ಲೈನ್‌ ವ್ಯವಸ್ಥೆ ಕೂಡ ಸರಿಯಾಗಿ ಆಗಿಲ್ಲ. ನಾಮಕಾವಸ್ತೆಗೆ ನೀರಿನ ಟ್ಯಾಂಕ್ ಕಟ್ಟಿ ಬಿಟ್ಟಿದ್ದಾರೆ. ನಾವು ಬಾವಿ ಮುಂದೆ ಒಬ್ಬರ ಮೇಲೊಬ್ಬರು ಬಿದ್ದು, ನೀರು ಹೊತ್ತು ತರುವ ಪರಿಸ್ಥಿತಿ ಇದೆ. ಎರಡ್ಮೂರು ದಿನಗಳಿಂದ ಶೇಖರಣೆ ಮಾಡಿಟ್ಟ ನೀರನ್ನೇ ಬಳಸುತ್ತಿದ್ದೇವೆ. ನಿತ್ಯ ನೀರು ಸೇದಿ ತರಲು ಆಗುವುದಿಲ್ಲ. ನೀರು ಹೊತ್ತು ತರುವಷ್ಟರಲ್ಲಿ ಕೂಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಇದೇ ರೀತಿಯಾದರೆ ನಮ್ಮ ಸಾಲ ಸವದ ಹೇಗೆ ಕಟ್ಟಿಕೊಳ್ಳಬೇಕು” ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ದೇವದಾರಿಯಲ್ಲಿ ಗಣಿಗಾರಿಕೆಗಿಲ್ಲ ದಾರಿ; ಅನುಮತಿ ನಿರಾಕರಿಸಲು ಅರಣ್ಯ ಸಚಿವ ಖಂಡ್ರೆ ಸೂಚನೆ

ನಾಗಮ್ಮ ಗ್ರಾಮಸ್ಥರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ನಾನು ವಯಸ್ಸಾದವಳು ನೀರು ಹೊತ್ತು ತರಲು ಆಗುವುದಿಲ್ಲ. ಯಾರಾದರೂ ನೀರು ತಂದುಕೊಟ್ಟರೆ ಮಾತ್ರ ನನಗೆ ನೀರು ಸಿಗುತ್ತದೆ. ನೀರು ಪ್ರತಿನಿತ್ಯ ಅತೀ ಮುಖ್ಯವಾಗಿ ಬೇಕು. ಅದರಿಂದ ನಮಗೆ ನೀರಿನ ಸವಲತ್ತು ಮಾಡಿಕೊಡಿ” ಎಂದು ಬೇಡಿಕೊಂಡರು.

WhatsApp Image 2026 05 02 at 12.01.27 e1777704270988
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಗ್ರಾಮೀಣ ಪ್ರತಿಭೆಯ ಅಂತಾರಾಷ್ಟ್ರೀಯ ಸಾಧನೆಗೆ ಎಂ.ಬಿ ಪಾಟೀಲ ಮೆಚ್ಚುಗೆ

ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ...

ಕೋಲಾರ | ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ: ಎನ್. ಸಂಪಂಗಿ

ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು...

ಉತ್ತರ ಕರ್ನಾಟಕದ ರೈಲ್ವೇ ಅಭಿವೃದ್ಧಿಗೆ ವೇಗ ನೀಡಿ: ಉಮಾಶ್ರೀಗೆ ಕುತುಬುದ್ದೀನ್ ಕಾಜಿ ಮನವಿ

ಉತ್ತರ ಕರ್ನಾಟಕದ ರೈಲ್ವೇ ಅಭಿವೃದ್ಧಿಗೆ ವೇಗ ನೀಡುವುದು, ಬಾಕಿ ಉಳಿದಿರುವ ಕಾಮಗಾರಿಗಳನ್ನು...

ವಿಜಯಪುರ | ವೃಕ್ಷಥಾನ್ ಹೆರಿಟೇಜ್ ರನ್ 2026: ತೆರೆಮರೆಯ ಸಾಧಕರಿಗೆ ಗೌರವ

ಕ್ರೀಡೆ, ಪಾರಂಪರಿಕ ಕ್ಷೇತ್ರ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಸೇವೆ...