ಕಲಬುರಗಿ | SIR ಎಡವಟ್ಟು: ಬದುಕಿರುವವರಿಗೂ ಮತದಾರರ ಪಟ್ಟಿಯಲ್ಲಿ ‘Death’ ಮುದ್ರೆ?

Date:

ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ಕಲಬುರಗಿ ನಗರದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

- Advertisement -

ಮತದಾರರ ಪಟ್ಟಿಯಲ್ಲಿ ಬದುಕಿರುವವರನ್ನೇ ‘Death’ ಎಂದು ಗುರುತಿಸಿರುವುದು, ಮನೆಯಲ್ಲಿ ವಾಸಿಸುತ್ತಿರುವವರನ್ನು ‘ಶಾಶ್ವತ ಸ್ಥಳಾಂತರ /ಗೈರು’ ಎಂದು ನಮೂದಿಸಿರುವುದು, ಎನ್ಯೂಮರೇಷನ್ ಫಾರಂ ತುಂಬಿ ಸಲ್ಲಿಸಿದವರ ಹೆಸರುಗಳೂ ಪಟ್ಟಿಯಲ್ಲಿ ಕಾಣಿಸದಿರುವುದು ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಮತದಾರರು ತಮ್ಮ ಮತಹಕ್ಕು ಉಳಿಯುವುದೇ ಎಂಬ ಗೊಂದಲದಲ್ಲಿ ಕಾಲ ಕಳೆಯುವಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಅನರ್ಹ ಮತದಾರರ ಗುರುತು ಹಾಗೂ ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ದೇಶದಲ್ಲಿ ಎಸ್‌ಐಆರ್ ಕೈಗೊಳ್ಳಲಾಗುತ್ತಿದ್ದು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಹಂತ ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಪ್ರಕ್ರಿಯೆಯಲ್ಲಿನ ಲೋಪಗಳಿಂದಾಗಿ ಹತ್ತಾರು ವರ್ಷಗಳಿಂದ ಸ್ಥಳೀಯವಾಗಿಯೇ ವಾಸ ಮಾಡಿ ಮತದಾನ ಮಾಡುತ್ತಿರುವ ಅರ್ಹ ಮತದಾರರೇ ಇದೀಗ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿದಿದೆಯೇ ಎಂಬುದನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಲಬುರಗಿ ಉತ್ತರ ಮತಕ್ಷೇತ್ರದ ಬೂತ್ ನಂ.233ರ ಹಜ್ ಕಮಿಟಿ ವ್ಯಾಪ್ತಿಯ ನೇಹಾ ಪರ್ವೀನ್ ಎಂಬುವವರ ಹೆಸರಿನ ಮುಂದೆ ಮತದಾರರ ಪಟ್ಟಿಯಲ್ಲಿ ‘ಡೆತ್’ ಎಂದು ನಮೂದಿಸಲಾಗಿದೆ ಎಂದು ಅವರ ಪತಿ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರ ಪತಿ, “ನನ್ನ ಪತ್ನಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಬೂತ್‌ನಲ್ಲಿ ಮತ ಹಾಕುತ್ತಿದ್ದಾರೆ. ಎಸ್‌ಐಆರ್ ಎನ್ಯೂಮರೇಷನ್ ಫಾರಂ ಕೂಡ ತುಂಬಿ ಸಲ್ಲಿಸಿದ್ದಾರೆ. ಆದರೂ ಇದೀಗ ಮತದಾರರ ಪಟ್ಟಿಯಲ್ಲಿ ‘ಡೆತ್’ ಎಂದು ನಮೂದಿಸಲಾಗಿದೆ. ಬಿಎಲ್‌ಒ ಅವರನ್ನು ವಿಚಾರಿಸಿದರೂ ಸ್ಪಷ್ಟ ಉತ್ತರ ಸಿಗಲಿಲ್ಲ. ಬಳಿಕ ಫಾರಂ-6 ತುಂಬಿ ಕೊಡುವಂತೆ ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.

ಜೀವಂತವಾಗಿರುವ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ‘ಮೃತ’ ಎಂದು ಗುರುತಿಸಲು ಯಾವ ಪರಿಶೀಲನೆ ನಡೆಸಲಾಯಿತು? ಈ ನಮೂದು ಮಾಡಿದವರು ಯಾರು? ಎಂಬ ಪ್ರಶ್ನೆಯನ್ನು ಕುಟುಂಬಸ್ಥರು ಮುಂದಿಟ್ಟಿದ್ದಾರೆ.

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿದ್ಯಾಪುರ ಕಾಲೋನಿ ನಿವಾಸಿ ವಿಜಯಕುಮಾರಿ ಅವರು, 2017ರಿಂದ ಅದೇ ಬೂತ್‌ನಲ್ಲಿ ಮತದಾನ ಮಾಡುತ್ತಿದ್ದರೂ ತಮ್ಮ ಬಿಎಲ್‌ಒ ಎಸ್‌ಐಆರ್ ಎನ್ಯೂಮರೇಷನ್ ಫಾರಂ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಬಿಎಲ್‌ಒಗೆ ಫಾರಂ ಯಾಕೆ ಕೊಟ್ಟಿಲ್ಲ ಎಂದು ಕೇಳಿದರೆ ‘ನನಗೆ ಗೊತ್ತಿಲ್ಲ, ನಿಮ್ಮ ಫಾರಂ ನಮ್ಮ ಬಳಿ ಬಂದಿಲ್ಲ’ ಎಂದು ಜಾರಿಕೊಳ್ಳುತ್ತಿದ್ದಾರೆ. ಇದೀಗ ಆನ್ಲೈನ್ ಅರ್ಜಿ ಸಲ್ಲಿಸುವಂತೆ ಸಲಹೆ ನೀಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅರ್ಜಿ ಹೇಗೆ ಹಾಕುವುದು, ಎಂಬುದು ನಮಗೆ ಗೊತ್ತಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಾವು ಇಲ್ಲಿಯೇ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ್ದೇವೆ. ಹಲವು ವರ್ಷಗಳಿಂದ ಮತ ಹಾಕುತ್ತಿದ್ದೇವೆ. ಈಗ ನಮ್ಮ ವೋಟ್ ಇಲ್ಲದಂತಾಗಿದೆ. ನಮ್ಮ ಮತವೇ ಅಳಿಸಿ ಹೋದರೆ ನಾವು ಈ ದೇಶದ ಪ್ರಜೆಗಳಲ್ಲವೇ? ಎಂದು ಆತಂಕದಿಂದ ಕೇಳುತ್ತಿದ್ದಾರೆ.

ಕಲಬುರಗಿ ಉತ್ತರ ಮತಕ್ಷೇತ್ರದ ಆದರ್ಶ ನಗರದ ವಿಕರ್ ಅಹ್ಮದ್ ಖಾನ್ ಅವರು ಸುಮಾರು 15-20 ವರ್ಷಗಳಿಂದ ಮತದಾನ ಮಾಡುತ್ತಿದ್ದರೂ ಎಸ್‌ಐಆರ್ ಬಳಿಕ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿದಿದೆ ಎಂದು ದೂರಿದ್ದಾರೆ.

“ನಾನು ಎಸ್‌ಐಆರ್ ಎನ್ಯೂಮರೇಷನ್ ಫಾರಂ ತುಂಬಿ ಬಿಎಲ್‌ಒಗೆ ಸಲ್ಲಿಸಿದ್ದೇನೆ. ಆದರೆ, ಈಗ ಮತ್ತೆ ಫಾರಂ-6 ತುಂಬಿ ಕೊಡಿ ಎನ್ನುತ್ತಿದ್ದಾರೆ. ಅದರಲ್ಲಿ ತಂದೆ-ತಾಯಿಯ ವಿವರ ಕೇಳಲಾಗುತ್ತಿದೆ. ನನ್ನ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ಅವರ ವಿವರಗಳನ್ನು ಈಗ ಎಲ್ಲಿಂದ ತರಲಿ? ಎಂದು ಪ್ರಶ್ನಿಸಿದ ಅವರು, ವರ್ಷಗಳಿಂದ ಮತದಾನ ಮಾಡುತ್ತಿರುವ ವ್ಯಕ್ತಿಯನ್ನೇ ಹೊಸ ಮತದಾರರಂತೆ ಪರಿಗಣಿಸಿ ಫಾರಂ-6 ಸಲ್ಲಿಸುವಂತೆ ಸೂಚಿಸುವ ಅಗತ್ಯ ಏಕೆ ಬಂತು ಎಂಬುದು ಅವರ ಪ್ರಶ್ನೆಯಾಗಿದೆ.

ಕಲಬುರಗಿ ಉತ್ತರ ಮತಕ್ಷೇತ್ರದ ಭೂತ್ ನಂ.129ರ ಅಮನ್ ಪಬ್ಲಿಕ್ ಸ್ಕೂಲ್ ವ್ಯಾಪ್ತಿಯ ಅಜಾತಪುರ ನಿವಾಸಿ ದಿಲ್‌ಶಾದ್ ಗಂಡ ಶಾಹೆಬ್ ಲಾಲ್ (30) ಅವರ ಹೆಸರೂ ಮತದಾರರ ಪಟ್ಟಿಯಿಂದ ಹೊರಗುಳಿದಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಮದುವೆಯಾದ ಬಳಿಕ ತವರು ಮನೆಯಲ್ಲಿಯೇ ವಾಸವಿದ್ದು, ಎನ್ಯೂಮರೇಷನ್ ಫಾರಂ ತುಂಬಿ ಸಲ್ಲಿಸಿದ್ದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ‘ಅನ್‌ಟ್ರೇಸಬಲ್/ಅಬ್ಸೆಂಟ್’ ಎಂದು ಗುರುತಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಬಿಎಲ್‌ಒ ಅವರನ್ನು ಪ್ರಶ್ನಿಸಿದಾಗ, ʼಮೇಲಿಂದ ಆಗಿದೆ, ನಾನು ಮಾಡಿಲ್ಲʼ ಎಂಬ ಉತ್ತರ ದೊರೆತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತಾಯಿ-ಮಗಳ ಹೆಸರು ಪಟ್ಟಿಯಿಂದ ಹೊರಗೆ

ಕಲಬುರಗಿ ದಕ್ಷಿಣ ಮತಕ್ಷೇತ್ರದ ಬೋರಾಬಾಯಿ ನಗರ, ವಾರ್ಡ್ ನಂ.39ರ ಲಕ್ಷ್ಮಿಬಾಯಿ (55) ಹಾಗೂ ಅವರ ಮಗಳು ಶೃತಿ ಗಂಡ ಸುನೀಲ್ (32) ಅವರ ಹೆಸರುಗಳು ಎಸ್‌ಐಆರ್ ಬಳಿಕ ಮತದಾರರ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇಬ್ಬರೂ ಹಲವು ವರ್ಷಗಳಿಂದ ಮತದಾನ ಮಾಡುತ್ತಿದ್ದು, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳಿದ್ದರೂ ಎನ್ಯೂಮರೇಷನ್ ಫಾರಂ ದೊರೆತಿಲ್ಲ. ಈ ಬಗ್ಗೆ ಬಿಎಲ್‌ಒ ಅವರು ʼನಿಮ್ಮ ಎನ್ಯೂಮರೇಷನ್ ಫಾರಂ ನನ್ನ ಬಳಿ ಇಲ್ಲ” ಎಂದು ಹೇಳಿದ್ದಾರೆ. ಬಳಿಕ ಪರಿಶೀಲಿಸಿದಾಗ ಇಬ್ಬರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಕಾಣಿಸದಿರುವುದು ಗೊತ್ತಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ.

‘ಮತದಾರನೇ ತನ್ನ ಮತವನ್ನು ಹುಡುಕಿಕೊಳ್ಳಬೇಕೇ?’ ಎಸ್‌ಐಆರ್ ಪ್ರಕ್ರಿಯೆಯ ಬಳಿಕ ಕೇಳಿಬರುತ್ತಿರುವ ಈ ಪ್ರಕರಣಗಳು ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಕಾರ್ಯವಿಧಾನ ಮತ್ತು ಪರಿಶೀಲನೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಫಾರಂ ನೀಡದಿದ್ದರೆ ಹೊಣೆ ಯಾರದ್ದು? ಫಾರಂ ತುಂಬಿ ಸಲ್ಲಿಸಿದರೂ ಹೆಸರು ಏಕೆ ಕಾಣಿಸುತ್ತಿಲ್ಲ? ಬದುಕಿರುವ ವ್ಯಕ್ತಿಯ ಹೆಸರಿನ ಮುಂದೆ ‘ಡೆತ್’ ಎಂದು ನಮೂದಿಸಿದವರು ಯಾರು? ಸ್ಥಳದಲ್ಲೇ ವಾಸವಿರುವವರನ್ನು ‘ಶಾಶ್ವತ ಸ್ಥಳಾಂತರʼ ಅಥವಾ ʼಗೈರುʼ ಎಂದು ನಮೂದಿಸಲು ಆಧಾರವೇನು? ಮತದಾರರ ದೂರುಗಳಿಗೆ ಸ್ಪಷ್ಟ ಉತ್ತರ ನೀಡುವವರು ಯಾರು? ಎಂಬ ಪ್ರಶ್ನೆಗಳು ಇದೀಗ ಎದುರಾಗಿವೆ.

ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹವಲ್ಲದ ಹೆಸರುಗಳನ್ನು ತೆಗೆದುಹಾಕುವುದಾಗಿದ್ದರೂ, ಪ್ರಕ್ರಿಯೆಯಲ್ಲಿ ಅರ್ಹ ಮತದಾರರೇ ಹೊರಗುಳಿಯದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ಪ್ರತಿಯೊಂದು ಹೆಸರು ಕೈಬಿಡುವಿಕೆಗೂ ಕಾರಣ, ಪರಿಶೀಲನೆ ಮತ್ತು ದಾಖಲೆ ಆಧಾರಿತ ಪ್ರಕ್ರಿಯೆ ಇರಬೇಕು ಎಂಬುದು ಮತದಾರರ ಒತ್ತಾಯವಾಗಿದೆ.

ಕಲಬುರಗಿ ನಗರದಲ್ಲಿ ಕೇಳಿಬರುತ್ತಿರುವ ಈ ಪ್ರಕರಣಗಳ ಕುರಿತು ಸಂಬಂಧಿಸಿದ ಚುನಾವಣಾಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಬೇಕಿದೆ. ‘ಡೆತ್’, ‘ಅನ್‌ಟ್ರೇಸಬಲ್’, ‘ಅಬ್ಸೆಂಟ್’ ಸೇರಿದಂತೆ ವಿವಿಧ ಕಾರಣಗಳಿಂದ ಹೆಸರುಗಳನ್ನು ಹೊರಗಿಟ್ಟಿರುವ ಪ್ರಕರಣಗಳಲ್ಲಿ ಅದರ ಆಧಾರವೇನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಎನ್ಯೂಮರೇಷನ್ ಫಾರಂ ಭರ್ತಿ ಮಾಡಿ ಸಲ್ಲಿಸಿದ ನಂತರವೂ ಹೆಸರುಗಳು ಏಕೆ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ ಎಂಬುದನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳನ್ನು ನಿಯಮಾನುಸಾರ ಮರುಪರಿಶೀಲಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇದನ್ನೂ ಓದಿ : ಬೀದರ್‌ | ಲೇಖಕರಿಂದ ಗಟ್ಟಿ ಸಾಹಿತ್ಯ ಹೊರಬರಲಿ: ವಿಜಯಕುಮಾರ ಸೋನಾರೆ

ಮತದಾರರ ಪಟ್ಟಿಯ ‘ಶುದ್ಧೀಕರಣ’ದ ಉದ್ದೇಶ ಮತದಾನದ ವ್ಯವಸ್ಥೆಯನ್ನು ಮತ್ತಷ್ಟು ನಿಖರಗೊಳಿಸುವುದೇ ಹೊರತು, ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗುವುದಲ್ಲ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ಪ್ರತಿಯೊಂದು ಗೊಂದಲಕ್ಕೂ ಸ್ಪಷ್ಟ ಉತ್ತರ ದೊರೆಯಬೇಕಿದೆ.

ಅರ್ಹ ಮತದಾರರನ್ನು ಪಟ್ಟಿಯಿಂದ ಮಾಯವಾದರೆ, ಆ ಲೋಪಕ್ಕೆ ಹೊಣೆ ಯಾರು? ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಸಂಚಿನಿಂದ ಈ ರೀತಿ ಮಾಡಲಾಗುತ್ತಿದೆಯೇ ಎಂಬ ಮತದಾರರ ಪ್ರಶ್ನೆಗಳಿಗೆ ಚುನಾವಣಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸ್ಪಷ್ಟ ಉತ್ತರ ಸಿಗಬೇಕಿದೆ. ಅರ್ಹ ಮತದಾರರನ್ನು ಅಂತಿಮ ಕರಡು ಪಟ್ಟಿಯಲ್ಲಿ ಉಳಿಯುವಂತೆ ಕ್ರಮವಹಿಸುವುದು ಒಳಿತು.

WhatsApp Image 2026 05 02 at 12.01.27 e1777704270988
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...

ಹಳೆಯ ಪ್ರಕರಣ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳ ಸರ್ಕಾರ ಆದೇಶ

20೦6ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಾಲಿ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್...

ಗಣೇಶ ವಿಸರ್ಜನೆ ಮುಗಿಯಿತು, ಇನ್ನು ಸಿಇಸಿ ಗ್ಯಾನೇಶ್ ಕುಮಾರ್ ವಿಸರ್ಜನೆ ಬಾಕಿ: ನಟ ಪ್ರಕಾಶ್ ರಾಜ್

ದೇಶಾದ್ಯಂತ ಗಣೇಶ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ...

ಜಿಎಸ್‌ಟಿ ದಸ್ತಗಿರಿ ಅಧಿಕಾರ ಹಿಂಪಡೆಯುವ ಪ್ರಸ್ತಾಪ: ಆಡಂಬರದ ಜಾರಿಯೂ ಇಂದಿನ ಭ್ರಮನಿರಸನವೂ….

2017ರ ಜೂನ್ 30ರ ಮಧ್ಯರಾತ್ರಿ ಭಾರತದ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆಯಾಗಿತ್ತು....