ಯಾದಗಿರಿ | ಅಣಬಿ ಗ್ರಾಮದಲ್ಲಿ ಕಾರಹುಣ್ಣಿಮೆ ವೈಭವ

Date:

ತಲೆಮಾರುಗಳಿಂದ ಮುಂದುವರಿದಿರುವ ಕಾರಹುಣ್ಣಿಮೆ ಆಚರಣೆ ಅಣಬಿ ಗ್ರಾಮದಲ್ಲಿ ಇಂದಿಗೂ ಅಷ್ಟೇ ವೈಭವದಿಂದ ನಡೆಯುತ್ತಿದ್ದು, ಉತ್ತರ ಕರ್ನಾಟಕದ ನೆಲಮೂಲ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ಜನಪದ ವೈಭವವನ್ನು ಜೀವಂತವಾಗಿಟ್ಟಿರುವುದು ವಿಶೇಷವಾಗಿದೆ.

ಉತ್ತರ ಕರ್ನಾಟಕದ ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿ ಹಾಗೂ ಪಶುಗಳ ಮೇಲಿನ ಅಪಾರ ಪ್ರೀತಿ-ಗೌರವವನ್ನು ಪ್ರತಿಬಿಂಬಿಸುವ ವಿಶಿಷ್ಟ ಜನಪದ ಹಬ್ಬ, ಕೃಷಿಕರ ಸಂಭ್ರಮ ಕಾರಹುಣ್ಣಿಮೆಯನ್ನು ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿ ಸೋಮವಾರ ಶತಮಾನಗಳ ಸಂಪ್ರದಾಯದಂತೆ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

- Advertisement -

ಕಾರ ಹುಣ್ಣಿಮೆ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ. ರೈತರ ಬದುಕು, ಪ್ರಕೃತಿಯೊಂದಿಗಿನ ಬಾಂಧವ್ಯ ಹಾಗೂ ಕೃಷಿಯಲ್ಲಿ ಜೀವನಾಡಿಯಾಗಿರುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಸಂಸ್ಕೃತಿಯ ಪ್ರತೀಕವಾಗಿದೆ. ಬೇಸಿಗೆಯ ಬಿರುಬಿಸಿಲು ಮುಗಿದು ಮುಂಗಾರು ಆರಂಭವಾಗುವ ಸಂದರ್ಭದಲ್ಲಿ ರೈತ ತನ್ನ ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸಲು ಎತ್ತುಗಳೊಂದಿಗೆ ಹಗಲಿರುಳು ಶ್ರಮಿಸುತ್ತಾನೆ. ನೇಗಿಲು ಹೊಡೆಯುವುದು ಸೇರಿದಂತೆ ಕೃಷಿಯ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿರುವ ಎತ್ತುಗಳಿಗೆ ವಿಶ್ರಾಂತಿ ನೀಡಿ, ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಆಚರಿಸುವ ಹಬ್ಬವೇ ಕಾರಹುಣ್ಣಿಮೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಹಬ್ಬದ ದಿನದಂದು ಬೆಳಗ್ಗೆಯೇ ಗ್ರಾಮಸ್ಥರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ ನದಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಎತ್ತುಗಳಿಗೆ ಅರಿಶಿಣ ಹಾಗೂ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಹೊಸ ಮಗಡ, ಎಲೆಗಳಿಂದ ತಯಾರಿಸಿದ ಬಾಸಿಂಗ, ಜುಲಾ, ಬಣ್ಣಬಣ್ಣದ ರಿಬ್ಬನ್‌ಗಳು ಹಾಗೂ ಕೊರಳಿಗೆ ಗೆಜ್ಜೆಸರ ಕಟ್ಟಿ ಅಲಂಕರಿಸಿದರು.

ಈ ಬಗ್ಗೆ ಗ್ರಾಮದ ಹಿರಿಯ ಸಿದ್ದಪ್ಪ ಚಿಪ್ಪರ್ ಮಾತನಾಡಿ, “ಹೊನ್ನುಗಿ ದಿನ ಜೋಳ ಕುಟ್ಟಿ ಅನ್ನ ತಯಾರಿಸಿ, ಕುಸುಬಿ ನೆನೆಸಿ ಹಾಲು ಮಾಡಿ ಮೊದಲು ಎತ್ತುಗಳಿಗೆ ತಿನ್ನಿಸುತ್ತೇವೆ. ನಂತರವೇ ಮನೆಯವರು ಸೇವಿಸುತ್ತಾರೆ. ಪಶುಗಳಿಗೆ ಮೊದಲ ಆದ್ಯತೆ ನೀಡುವುದು ನಮ್ಮ ಹಿರಿಯರು ಕಲಿಸಿಕೊಟ್ಟ ಮೌಲ್ಯ” ಎಂದು ಹೇಳಿದರು.

ಕಾರಹುಣ್ಣಿಮೆ ದಿನ ಕಾರಿಂಗ್, ಕುಗ್ಗಳ, ಇಂಗು, ಕೋಳಿಮೊಟ್ಟೆ ಹಾಗೂ ಅಡುಗೆ ಎಣ್ಣೆ ಸೇರಿದಂತೆ ವಿವಿಧ ಪದಾರ್ಥಗಳನ್ನು ಸೇರಿಸಿ ವಿಶೇಷ ಮಿಶ್ರಣ ತಯಾರಿಸಿ ಎತ್ತುಗಳಿಗೆ ಕುಡಿಸುವ ಪದ್ಧತಿ ಇದೆ. ಇದರಿಂದ ಪಶುಗಳ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ ಎಂದರು.

WhatsApp Image 2026 06 29 at 7.52.32 PM

ರೈತ ಬಲಭೀಮ ಚಿಪ್ಪರ್ ಮಾತನಾಡಿ, “ನಮ್ಮ ಊರಿನ ಕಾರ ಹುಣ್ಣಿಮೆಯ ಪ್ರಮುಖ ವಿಶೇಷವೇ ಎತ್ತುಗಳಿಗೆ ಸಾಂಕೇತಿಕವಾಗಿ ಮದುವೆ ಮಾಡುವುದು. ಹಿಂದೆ ಬಸವನಿಗೆ ಮದುವೆ ಮಾಡುವ ಸಂಪ್ರದಾಯವಿತ್ತು. ಎತ್ತುಗಳನ್ನು ನಂದಿಯ ಪ್ರತಿರೂಪವೆಂದು ಭಾವಿಸುವ ಕಾರಣ ವರ್ಷಕ್ಕೊಮ್ಮೆ ಈ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇವೆ. ಇದು ನಮ್ಮ ಜನಪದ ಸಂಸ್ಕೃತಿಯ ಜೀವಂತ ಪರಂಪರೆಯಾಗಿದೆ” ಎಂದು ಹೇಳಿದರು.

ಹಬ್ಬದ ಅಂಗವಾಗಿ ಮನೆಗಳಲ್ಲಿ ಹೊಳಿಗೆ, ಬದನೆಕಾಯಿ ಪಲ್ಯ, ಹಾಲು, ತುಪ್ಪ ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಲಾಯಿತು. ಪುಂಡಿ ಕಟ್ಟಗಿ ನಾರಿನಿಂದ ಕಪ್ಪು ಮಗ್ಗದ ಹಗ್ಗ ತಯಾರಿಸಿ ಅದಕ್ಕೆ ಬೇವಿನ ಎಲೆ ಕಟ್ಟಿ ಊರಿನ ಅಗಸಿ ಬಾಗಿಲಿಗೆ ಕರಿ ಕಟ್ಟುವ ಸಂಪ್ರದಾಯವನ್ನು ಗ್ರಾಮಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ.

ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದ ಬಳಿಕ ಊರಿನ ಎಲ್ಲ ಎತ್ತುಗಳನ್ನು ಅಗಸಿಯೊಳಗೆ ಸೇರಿಸಲಾಯಿತು. ಮೊದಲು ಪೂಜಾರಿಗಳು ಕರಿ ಕತ್ತರಿಸಿದ ನಂತರ ಗೌಡರು ತಮ್ಮ ಎತ್ತುಗಳನ್ನು ಮೆರವಣಿಗೆಯಲ್ಲಿ ಮನೆಗಳಿಗೆ ಕರೆದುಕೊಂಡು ತೆರಳಿದರು.

ಬಾಜಾ-ಭಜಂತ್ರಿ, ಹಲಗೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಾದದ ನಡುವೆ ಅಲಂಕೃತ ಎತ್ತುಗಳ ಮೆರವಣಿಗೆ ಗ್ರಾಮದೆಲ್ಲೆಡೆ ಸಂಚರಿಸಿತು. ಕಳಸ ಹೊತ್ತ ಮಹಿಳೆಯರು ಹೆಜ್ಜೆ ಹಾಕಿದರೆ, ಯುವಕರು ಬಿದಿರು ತಿರುಗಿಸುವುದು, ಬಾರಕೋಲು ಪ್ರದರ್ಶನ ಸೇರಿದಂತೆ ವಿವಿಧ ಜನಪದ ಸಾಹಸ ಕಲೆಗಳನ್ನು ಪ್ರದರ್ಶಿಸಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು. ಮಹಿಳೆಯರು ಸಂಪ್ರದಾಯಬದ್ಧ ಉಡುಗೆಯೊಂದಿಗೆ ಪೂಜೆಯಲ್ಲಿ ಭಾಗವಹಿಸಿದರೆ, ಮಕ್ಕಳು ಹಾಗೂ ಯುವಕರು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಮನೆಗೆ ಮರಳಿದ ಬಳಿಕ ಎತ್ತುಗಳಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಕೊಟ್ಟಿಗೆಯ ಬಾಗಿಲಿಗೆ ಕರಿ ಹಗ್ಗ ಕಟ್ಟಲಾಯಿತು. ನಂತರ ಎತ್ತುಗಳನ್ನು ಕೊಟ್ಟಿಗೆಯೊಳಗೆ ಪ್ರವೇಶ ಮಾಡಿಸಿ, ಮನೆಯಲ್ಲಿ ತಯಾರಿಸಿದ ಹೋಳಿಗೆ ಸೇರಿದಂತೆ ವಿಶೇಷ ತಿನಿಸುಗಳನ್ನು ಮೊದಲು ಎತ್ತುಗಳು ಹಾಗೂ ಇತರ ಸಾಕುಪ್ರಾಣಿಗಳಿಗೆ ನೈವೇದ್ಯವಾಗಿ ಅರ್ಪಿಸಲಾಯಿತು. ಬಳಿಕವೇ ಮನೆಯ ಸದಸ್ಯರು ಹಬ್ಬದ ಊಟ ಸವಿದರು.

“ಮೊದಲು ಪ್ರಾಣಿಗಳಿಗೆ ಹೊಟ್ಟೆತುಂಬ ತಿನ್ನಿಸಿ, ನಂತರವೇ ಮನೆಯವರು ಊಟ ಮಾಡುವ ಸಂಪ್ರದಾಯ ನಮ್ಮದು. ಪ್ರಾಣಿಗಳಿಗೆ ತಿನ್ನಿಸಿದಷ್ಟು ಬೆಳೆ ಸಮೃದ್ಧಿಯಾಗಿ ಬರುತ್ತದೆ ಎಂಬುದು ಹಿರಿಯರ ನಂಬಿಕೆ. ಪಶುಗಳೇ ರೈತನ ಜೀವನಾಡಿ ಎಂಬ ಕೃತಜ್ಞತೆಯ ಭಾವನೆಯೇ ಈ ಆಚರಣೆಯ ಮೂಲ” ಎಂದು ರೈತರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ : ಬೀದರ್‌ | ಒಳಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯ : ಶಾಸಕ ಪ್ರಭು ಚವ್ಹಾಣ

ತಲೆಮಾರುಗಳಿಂದ ಮುಂದುವರಿದಿರುವ ಕಾರಹುಣ್ಣಿಮೆ ಆಚರಣೆ ಅಣಬಿ ಗ್ರಾಮದಲ್ಲಿ ಇಂದಿಗೂ ಅಷ್ಟೇ ವೈಭವದಿಂದ ನಡೆಯುತ್ತಿದ್ದು, ಉತ್ತರ ಕರ್ನಾಟಕದ ನೆಲಮೂಲ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ಜನಪದ ವೈಭವವನ್ನು ಜೀವಂತವಾಗಿಟ್ಟಿರುವುದು ವಿಶೇಷವಾಗಿದೆ.

WhatsApp Image 2026 05 02 at 12.01.27 e1777704270988
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್‌ಘಾಟ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಮೌನ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು...

ಬಾಗಲಕೋಟೆ | ಪ್ರಜಾಪ್ರಭುತ್ವದ ಕರಾಳ ದಿನ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...