ಕಲಬುರಗಿ | ಪ್ರತಿದಿನವೂ ನೀರಿಗಾಗಿ ಬವಣೆ ಪಡುತ್ತಿರುವ ಭೀಮಳ್ಳಿ ಗ್ರಾಮದ ದಲಿತರು

Date:

ಕಲಬುರಗಿ ಜಿಲ್ಲೆಯ ದಕ್ಷಿಣ ಕ್ಷೇತ್ರದ ಭೀಮಳ್ಳಿ ಗ್ರಾಮದ ದಲಿತ ಓಣಿಯಲ್ಲಿ ನೀರಿನ ಸೌಲಭ್ಯ ಸಿಕ್ಕಿಲ್ಲ. ಹಿಂದಿನ ಕಾಲಘಟ್ಟದಂತೆ ಪ್ರಸ್ತುತ ದಿನಗಳಲ್ಲಿಯೂ ಕೂಡ ಬಾವಿ ನೀರು ಸೇದುವ ಅನಿವಾರ್ಯತೆ ಎದುರಾಗಿದೆ.

- Advertisement -

ದಲಿತ(ಮಾದಿಗ ಸಮುದಾಯದ) ಕುಟುಂಬಗಳು ವಾಸವಾಗಿರುವ ಓಣಿಯಲ್ಲಿ ಸುಮಾರು ವರ್ಷಗಳಿಂದ ಕುಡಿಯಲು, ಬಳಸಲು ನೀರಿಲ್ಲ. ಸರ್ಕಾರದಿಂದ ನೀರಿನ ಟ್ಯಾಂಕ್, ಜಲಜೀವನ ಮಿಷನ್ ಅಡಿಯಲ್ಲಿ ಮನೆಗೊಂದು ನಳ್ಳಿ ಮಾಡಿದ್ದಾರೆ. ಅವುಗಳು ತೋರಿಕೆ ರೂಪದಲ್ಲಿವೆಯೇ ವಿನಃ ಒಂದು ದಿನವೂ ಅದರಲ್ಲಿ ನೀರು ಬಂದಿಲ್ಲ. ಟ್ಯಾಂಕ್‌ಗಳಿಗೆ ಪೈಪ್‌ಲೈನ್ ವ್ಯವಸ್ಥೆ ಕೂಡ ಆಗಿಲ್ಲ. ಸುಮನೆ ಕಟ್ಟಿಬಿಟ್ಟಿದ್ದಾರೆ ಅಷ್ಟೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

“ಬಳಸುವುದಕ್ಕೆ ಕುಡಿಯುವುದಕ್ಕೆ ನಾವು ಪ್ರತಿನಿತ್ಯ ಬಾವಿಯಿಂದ ನೀರು ಸೇದಿ ಹೊತ್ತು ತರುವಂತಹ ಅನಿವಾರ್ಯತೆ ಎದುರಾಗಿದೆ. ತೆರೆದ ಬಾವಿಯಲ್ಲಿ ಕಸಕಡ್ಡಿ, ಮಳೆ ನೀರು ಸೇರಿಕೊಳ್ಳುತ್ತಿದೆ. ಇದರಿಂದ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ. ಅದೇ ಬಾವಿ ನೀರು ಸೇವಿಸಿದರೆ ರೋಗ ರುಜಿನಗಳು ಹರಡಬಹುದೆನ್ನುವ ಆತಂಕ ಮನೆಮಾಡಿದೆ. ಆದರೆ ದಲಿತರ ಓಣಿ ಅಂದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ” ಎಂದು ಭೀಮಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಭೀಮಳ್ಳಿ 1

ಈ ವಿಚಾರದ ಕುರಿತು ಈ ದಿನ. ಕಾಮ್‌ನೊಂದಿಗೆ ಮಾತನಾಡಿದ ಗ್ರಾಮದ ಗೃಹಿಣಿ ಶ್ರೀದೇವಿ, “ಎಸ್‌ಸಿ ಜನರ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯವಾಗಿದೆ. ನಾವು ಸತ್ತಿದ್ದೇವಾ ಬದುಕಿದ್ದೇವಾ ಎಂದೂ ಕೂಡ ನೋಡುವುದಿಲ್ಲ. ನೀರಿಗಾಗಿ ಬೀದಿ-ಬೀದಿ ಅಲೆದು ನೀರು ತರುವ ಪರಿಸ್ಥಿತಿ ಇದೆ. ಅವರು ನೀರು ಕೊಡಲಿಲ್ಲ ಅಂದರೆ ಬಾವಿಯಿಂದ ನೀರು ಸೇದಿ ತರುವಷ್ಟರಲ್ಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಕೆಲಸ ಬಿಟ್ಟು ಕೂತರೆ ನಮ್ಮ ಹೊಟ್ಟೆ ಬಟ್ಟೆ ಹೇಗೆ ನಡೆಯಬೇಕು” ಎಂದು ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.

ಸುಗಲಬಾಯಿ ಈ ದಿನ. ಕಾಮ್‌ನೊಂದಿಗೆ ಮಾತನಾಡಿ,”ನಮ್ಮ ಮಕ್ಕಳು, ಸೊಸೆಯಂದಿರು ದುಡಿಯಲು ಬಾಂಬೆ, ಪೂನಾಗೆ ಹೋಗಿದ್ದಾರೆ. ನಾವು ವಯಸ್ಸಾದವರು. ಬಾವಿಯಿಂದ ಹೇಗೆ ನೀರು ಸೇದಿ ತರಬೇಕು. ಅವರಿವರ ಮಕ್ಕಳಿಗೆ ಕೈ ಕಾಲು ಬಿದ್ದು ಒಂದು ಕೊಡ ನೀರು ತಂದು ಕೊಡಿರೆಂದು ಬೇಡಿಕೊಳ್ಳಬೇಕು. ನಮ್ಮ ಓಣಿಗೆ ನೀರಿನ ಸೌಲಭ್ಯ ಕಲ್ಪಿಸಿಕೊಡಿ” ಎಂದು ಮನವಿ ಮಾಡಿದರು.

“ನೀರಿನ ಟ್ಯಾಂಕ್ ಮತ್ತು ಜಲಜೀವನ್ ಅಡಿಯಲ್ಲಿ ಮನೆಗೊಂದು ನಳ ಮಾಡಿದ್ದಾರೆ. ಆದರೆ ಅದರಲ್ಲಿ ನೀರು ಬರುವುದಿಲ್ಲ. ಪೈಪ್‌ಲೈನ್ ವ್ಯವಸ್ಥೆ ಕೂಡ ಸರಿಯಾಗಿ ಆಗಿಲ್ಲ. ನಾಮಕಾವಸ್ಥೆಗೆ ನೀರಿನ ಟ್ಯಾಂಕ್ ಕಟ್ಟಿ ಬಿಟ್ಟಿದ್ದಾರೆ. ನಾವು ಬಾವಿ ಮುಂದೆ ಒಬ್ಬರ ಮೇಲೊಬ್ಬರು ಬಿದ್ದು, ನೀರು ಹೊತ್ತು ತರುವ ಪರಿಸ್ಥಿತಿ ಇದೆ. ಎರಡೂರು ದಿನಗಳಿಂದ ಶೇಖರಣೆ ಮಾಡಿಟ್ಟ ನೀರನ್ನೇ ಬಳಸುತ್ತಿದ್ದೇವೆ. ನಿತ್ಯ ನೀರು ಸೇದಿ ತರಲು ಆಗುವುದಿಲ್ಲ. ನೀರು ಹೊತ್ತು ತರುವಷ್ಟರಲ್ಲಿ ಕೂಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಇದೇ ರೀತಿಯಾದರೆ ನಮ್ಮ ಸಾಲ ಸವದ ಹೇಗೆ ಕಟ್ಟಿಕೊಳ್ಳಬೇಕು” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದು ಗ್ರಾಮದ ದೂಳಮ್ಮ.

ಈ ದಿನ. ಕಾಮ್‌ನೊಂದಿಗೆ ಮಾತನಾಡಿದ ನಾಗಮ್ಮ, “ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ನಾನು ವಯಸ್ಸಾದವಳು. ನೀರು ಹೊತ್ತು ತರಲು ಆಗುವುದಿಲ್ಲ. ಯಾರಾದರೂ ನೀರು ತಂದುಕೊಟ್ಟರೆ ಮಾತ್ರ ನನಗೆ ನೀರು ಸಿಗುತ್ತದೆ. ನೀರು ಪ್ರತಿನಿತ್ಯ ಅತೀ ಮುಖ್ಯವಾಗಿ ಬೇಕು. ಅದರಿಂದ ನಮಗೆ ನೀರಿನ ಸವಲತ್ತು ಮಾಡಿಕೊಡಿ” ಎಂದು ಮನವಿ ಮಾಡಿಕೊಂಡರು.

ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯೀಲ್  ಈ ದಿನ. ಕಾಮ್‌ದೊಂದಿಗೆ ಮಾತನಾಡಿ, “ಐದು ಕಿಲೋ ಮೀಟರ್ ದೂರದ ಕೇರಿಬೋಸಗ ಗ್ರಾಮದಿಂದ ನಮ್ಮ ಊರಿಗೆ ನೀರು ಸರಬರಾಜು ಆಗುತ್ತದೆ. ಗ್ರಾಮದಲ್ಲಿ ಪ್ರವಾಹ ಜಾಸ್ತಿ ಬಂದು ಪೈಪ್‌ಲೈನ್ ಕಟ್ ಆಗುತ್ತಿದೆ. ಎಷ್ಟೇ ದುರಸ್ಥಿ ಮಾಡಿದ್ರೂ, ಅದೇ ರೀತಿ ಆಗುತ್ತಿದೆ. ಹಾಗಾಗಿ ದಲಿತ ಓಣಿಗೆ ಪ್ರತ್ಯೇಕವಾಗಿ ಬೋರ್‌ವೆಲ್ ಹಾಕಿಸಿ ಎಂಬುದು ನಮ್ಮ ಬೇಡಿಕೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಹುದುಗಿದ್ದ ಮಣ್ಣಿನ ಗುಡ್ಡೆಯಲ್ಲಿ ನೆಲಮಾಳಿಗೆ ಪತ್ತೆ

ಈ ವಿಚಾರದಕುರಿತು ಈ ದಿನ. ಕಾಮ್ ಶಾಸಕ ಅಲ್ಲಪ್ರಭು ಪಾಟೀಲ್ ಅವರೊಂದಿಗೆ ಮಾತನಾಡಿದಾಗ, “ಗ್ರಾಮದ ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ. ಕೆಡಿಪಿ ಮೀಟಿಂಗ್‌ನಲ್ಲಿ ಈ ವಿಚಾರದ ಕುರಿತು ಚರ್ಚೆ ಮಾಡಿರುವೆ. ಹೊಸ ಬೋರ್‌ವೆಲ್ ಸ್ಯಾಂಕ್ಷನ್ ಆಗಿದೆ. ಇದನ್ನು ಆದಷ್ಟು ಬೇಗ ಹಾಕಿಸುವೆ” ಎಂದು ತಿಳಿಸಿದರು.

WhatsApp Image 2026 05 02 at 12.01.27 e1777704270988
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಬರಗಾಲದಲ್ಲಿ ಸ್ಥಳೀಯರಿಗೆ ಹೆಚ್ಚಿನ ಕೆಲಸ ನೀಡಿ, ವಾರದೊಳಗೆ ಕೂಲಿ ಪಾವತಿಸಿ: ಡಿಸಿಎಂ ಪರಮೇಶ್ವರ

ತೀವ್ರ ಬರಗಾಲವಿರುವ ಕಾರಣ ವಿಬಿ ಜಿ ರಾಮ್‌ಜಿ ಯೋಜನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ...

ಕಲಬುರಗಿ | ಬೆಣ್ಣೂರ ಬಿ ಗ್ರಾಮಕ್ಕೆ ಪ್ರತ್ಯೇಕ ಬಸ್‌ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮಕ್ಕೆ ಸಮರ್ಪಕ ಬಸ್‌ ಸಂಚಾರವಿಲ್ಲದೆ ಕಳೆದ...

ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ

ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು...

ಯಾದಗಿರಿ | ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸಲು ಅ.17ರಿಂದ ತರಬೇತಿ ಶಿಬಿರ

ಯುವಜನರಲ್ಲಿ ಸಂವಿಧಾನಾತ್ಮಕ ಅರಿವು, ಸಾಮಾಜಿಕ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ...