ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪ್ರತಿಫಲದಿಂದ ನಾವೆಲ್ಲರೂ ಉತ್ತಮ ಉದ್ಯೋಗ ಪಡೆದಿದ್ದೇವೆ. ಆದರೆ, ಮುಂದೆ ನೌಕರರ ಮಕ್ಕಳು ಕೂಲಿ ಕಾರ್ಮಿಕರಾಗಬಾರದು. ಅದಕ್ಕಾಗಿ, ಎಲ್ಲರೂ ಬಾಬಾಸಾಹೇಬರ ನೈಜ ದಾರಿಯಲ್ಲಿ ಬದುಕುವುದು ಅಗತ್ಯ ಎಂದು ಜೇವರ್ಗಿ ಪ್ರಥಮ ದರ್ಜೆ ಕಾಲೇಜು ಪಾಂಶುಪಾಲ ಡಾ. ಕರಿಘೋಲೇಶ್ವರ ಹೇಳಿದ್ದಾರೆ.
ಕಲಬುರಗಿಯ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ವಸತಿ ನಿಲಯದಲ್ಲಿ ಪ್ರಬುದ್ಧ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭಾರತೀಯರಾದ ನಾವೆಲ್ಲರೂ ಬಾಬಾಸಾಹೇಬರ ಋಣದ ಮಕ್ಕಳಾಗಿದ್ದೇವೆ. ಅಂಬೇಡ್ಕರರು 1956 ಜುಲೈ 31ರಂದು ತಮ್ಮ ಅಪ್ತ ಕಾರ್ಯದರ್ಶಿ ನಾನಕ ಚಂದ್ ರತ್ತು ಅವರೊಂದಿಗೆ ಹಂಚಿಕೊಂಡ ಅಂತರಂಗದ ನೋವಿನ ಮಾತುಗಳನ್ನು ಇಂದು ದಮನಿತರು ಮರೆತಿದ್ದಾರೆ. ಬಾಬಾಸಾಹೇಬರು ತಮ್ಮ ಜೀವನದುದ್ದಕ್ಕೂ ವಿರೋಧಿಗಳೊಂದಿಗೆ ಹೋರಾಡಿ ಯಾವ ಕತ್ತಲೆಯಿಂದ ಬೆಳಕಿನೆಡೆಗೆ ಕರೆತಂದರೋ, ಅದೇ ಕತ್ತಲೆ ಕಡೆಗೆ ನಾವು ಮುಖಮಾಡಿ ನಿಂತಿದ್ದೇವೆ. ಇದು ಬಹುದೊಡ್ಡ ದುರಂತ” ಎಂದರು.
ಕಾರ್ಯಕ್ರಮದಲ್ಲಿ ಅನಂದ ಅಂಕಲಗಿಕರ, ವಿವಿಧ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು. ಸಂದೀಪ ಸ್ವಾಗತಿಸಿದರು. ಸತೀಶ ಹೊನ್ನಾನಗ ಕುಮಾರ, ಮಲ್ಲಪ್ಪ, ಸಂತೋಷ ನಿರೂಪಿಸಿದರು. ನಿಲಯಗಳ ವಾರ್ಡನ್ ಸಂಜು ಸರಡಗಿ, ರಾಜಕುಮಾರ ಹುಲಿಕರ
ವಂದಿಸಿದರು.