ಕಲಬುರಗಿ | ಅಂಬೇಡ್ಕರ್ ಸಿದ್ದಾಂತ ಪಾಲಿಸಿದಾಗ ಸಂಘಟನೆ ಸಾರ್ಥಕ: ಶರಣು ನೆರಡಗಿ

Date:

ಪ್ರಸ್ತುತ ದಿನಗಳಲ್ಲಿ ಹಲವಾರು ಸಂಘಟನೆಗಳು ಬೆಳೆದು ನಿಂತಿವೆ. ಅದರ ಜೊತೆಯಲ್ಲಿ ಹಲವಾರು ದಲಿತ ಪರ ಸಂಘಟನೆಗಳೂ ಕೂಡಾ ರಚನೆ ಆಗಿವೆ. ಬಹಳ ಸಂತೋಷ ಆದರೆ ಅವುಗಳ ಕಾರ್ಯ ಬಹಳ ಪ್ರಮುಖವಾಗಿರುತ್ತದೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಾರಿದ ಶಿಕ್ಷಣ, ಸಂಘಟನೆ, ಹೋರಾಟ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ಶರಣು ನೆರಡಗಿ ಸಲಹೆ ನೀಡಿದರು.

ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯ ಗ್ರಾಮ ಘಟಕ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಮೊದಲು ಎಲ್ಲರೂ ಶಿಕ್ಷಣಕ್ಕೆ ಒತ್ತು ಕೊಡಬೇಕು ನಂತರ ಸಂಘಟನೆ ಮೂಲಕ ಹಲವಾರು ಸಮಾಜದ ವಿರುದ್ಧ ಆಗುವ ದೌರ್ಜನ್ಯ ವಿರುದ್ಧ ಧ್ವನಿ ಎತ್ತಬೇಕು. ಅದಕ್ಕೆ ಕಾನೂನಿನ ನೆರವಿನಿಂದ ನ್ಯಾಯ ಒದಗಿಸಿದಾಗ ಅದು ಸಾರ್ಥಕ ನಿಮ್ಮ ಹೋರಾಟಕ್ಕೆ ಬೆಲೆ ಬರುತ್ತೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಂಘಟನೆಯಲ್ಲಿ ನಾವು ಸಾಗುವ ದಾರಿಯಲ್ಲಿ ಹಲವಾರು ಅಡಚಣೆ ಬರುತ್ತವೆ ನಾವು ಬಹಳ ತಾಳ್ಮೆಯಿಂದ ಇರಬೇಕು. ಯಾವುದೇ ಆತುರದ ನಿರ್ಧಾರ ನಮ್ಮ ಪ್ರಗತಿಗೆ ಕಂಠಕವಾಗುವ ಸಾಧ್ಯತೆ ಇರುತ್ತೆ. ಎಚ್ಚರಿಕೆಯಿಂದ ಸಾಗಬೇಕು” ಎಂದರು

ಭೀಮ್ ಆರ್ಮಿ ಜೇವರ್ಗಿ ತಾಲೂಕು ಅಧ್ಯಕ್ಷ ಸುನಿಲ್ ರಾಜಾಹುಲಿ ಮಾತನಾಡಿ, “ಸಂಘಟನೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಸಂಘಟನೆಯ ತತ್ವ ಸಿದ್ಧಾಂತವನ್ನು ಪಾಲನೆ ಮಾಡಬೇಕು” ಎಂದು ತಿಳಿಸಿದರು.

ಮಂದೇವಾಲ ಗ್ರಾಮ ಘಟಕದ ಪದಾಧಿಕಾರಿಗಳು: ಅಧ್ಯಕ್ಷ ಮಲ್ಕಪ್ಪ ಸುಣ್ಣೂರು, ಉಪಾಧ್ಯಕ್ಷ ರಾಹುಲ್ ಸಿಂಗೆ, ಕಾರ್ಯದರ್ಶಿ ಬಾಗೇಶ್ ನೇರಡಗಿ, ಸಹಕಾರ್ಯದರ್ಶಿ ಮುನ್ನ ಶೇಕ್, ಖಜಾಂಚಿ ಸುನಿಲ್ ಲಂಗೋಟಿ, ವಿದ್ಯಾರ್ಥಿ ಘಟಕ ಅಧ್ಯಕ್ಷ ಪ್ರವೀಣ್ ಸುಣ್ಣೂರ್, ಸದಸ್ಯರಾಗಿ ಶ್ರೀಮಂತ್ ಜಡಗಿ, ಶ್ರೀಶೈಲ್ ಬುಟ್ನಾಳ, ನಾಗಪ್ಪ ಬುಟ್ನಾಳ, ಜೈ ಭೀಮ್ ನೆರಡಗಿ, ಹುಲಿಯಪ್ಪ ಲಂಗೋಟಿ, ಚೇತನ್ ಬುಟ್ನಾಳ್, ಅನಿಲ್ ಸಿಂಗೆ, ಈರಪ್ಪ ಬಡಿಗೇರ್ ಅವರನ್ನು ನೇಮಕಾತಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಲೋಕಾಯುಕ್ತ ದಾಳಿ; ಸಿ.ಎಸ್ ಪುರ ಕಂದಾಯ ನಿರೀಕ್ಷಕ ಬಂಧನ

ತಾಲೂಕು ಪಂಚಾಯತ್ ಸದಸ್ಯರ ಸಾಗರ ಮಂದೇವಾಲ, ರಾಹುಲ ಪಂಚಶೀಲ, ಮಿಲ್ಲಿಂದ ಸಾಗರ್, ಗ್ರಾಮಸ್ಥರು ಸೇರಿದಂತೆ ಯುವಜನರು ಇದ್ದರು.

ವರದಿ: ಸಿಟಿಜನ್ ಜರ್ನಲಿಸ್ಟ್ ಮಿಲಿಂದ ಸಾಗರ್

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಕ್ಕೆ ವಿರೋಧ; ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ...

ವಿಜಯಪುರ | ನೀಟ್ ಅವ್ಯವಹಾರ: ನ್ಯಾಯಾಂಗ ತನಿಕೆಗೆ ಡಿವಿಪಿ ಆಗ್ರಹ

ನೀಟ್‌ ಪರೀಕ್ಷೆಯಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು....

ದರ್ಶನ್ ಪ್ರಕರಣ | ವಿಶೇಷ ಪ್ರಾಸಿಕ್ಯೂಟ‌ರ್ ಆಗಿ ಪಿ ಪ್ರಸನ್ನ ಕುಮಾರ್‌ ನೇಮಕ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 19 ಆರೋಪಿಗಳು...