ಕೋಲಾರ: ರೋಟರಿ ಸಂಸ್ಥೆಯ ವತಿಯಿಂದ ಕಾಮಧೇನು ಯೋಜನೆಯಡಿಯಲ್ಲಿ ಸುಗಟೂರು ಹೋಬಳಿಯ ತುರಾಂಡಹಳ್ಳಿ ಗ್ರಾಮದ 10 ಮಹಿಳೆಯರಿಗೆ ಉಚಿತವಾಗಿ 10 ಸೀಮೆಹಸುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ರಾಜ್ಯಪಾಲ ಡಿ.ಜಿ ಶ್ರೀಧರ್ ಮಾತನಾಡಿ ಗ್ರಾಮೀಣ ಪ್ರದೇಶದ ರೈತ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕಾಮಧೇನು ಯೋಜನೆಗೆ ಒತ್ತು ನೀಡಿ ಉಚಿತಯ ಹಸುಗಳನ್ನು ವಿತರಿಸಿದ್ದೇವೆ ಮಂದಿನ ದಿನಗಳಲ್ಲಿ ಅವಶ್ಯಕತೆ ಇರುವ ಕಡೆ ಕೊಡುವ ಮೂಲಕ ಮತ್ತಷ್ಟು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ..? ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು : ಎಂ.ಕೆ.ರಾಘವೇಂದ್ರ
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ್ ಕಾಮಧೇಯ ಯೋಜನೆಯ ನಿರ್ದೇಶಕ ಸುಧಾಕರ್, ನಿವೃತ್ತ ಬಿಇಒ ಸಿ.ಆರ್ ಅಶೋಕ್, ಕೆಡಿಪಿ ಸದಸ್ಯ ಹಾಗೂ ಪ್ರಗತಿಪರ ರೈತ ತುರಾಂಡಹಳ್ಳಿ ಟಿ.ಎನ್ ರವಿ, ಡೇರಿ ಅಧ್ಯಕ್ಷ ಟಿ.ವಿ ನಾಗರಾಜ್, ಸುಗಟೂರು ಗ್ರಾಪಂ ಮಾಜಿ ಅಧ್ಯಕ್ಷ ಭೂಪತಿಗೌಡ, ಮುಖಂಡರಾದ ಟಿ.ಎಂ ರಮೇಶ್, ಶ್ರೀನಿವಾಸ್, ಅನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.




