ಕೊಪ್ಪಳ | ವಿರೂಪಾಪುರ ಗಡ್ಡೆ ನಿರಾಶ್ರಿತರ ನರಕಕ್ಕೆ ಕೊನೆ ಇಲ್ಲವೇ?

Date:

ಸಂಕಷ್ಟಗಳಲ್ಲಿರುವ ವಿರೂಪಾಪುರ ಗಡ್ಡೆ ಸಂತ್ರಸ್ತರನ್ನು ಕೊಪ್ಪಳ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳು ಹೇಗೆ ಪಾರು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರ ಗಡ್ಡೆ ನಿವಾಸಿಗಳು ಸ್ವಂತ ಸೂರಿಗಾಗಿ ನಿತ್ಯವೂ ಅಲೆದಾಡುವಂತಹ ದುಃಸ್ಥಿತಿ ಎದುರಾಗಿದೆ. ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದ ಜನರು ವಾಸಿಸಲು ಸ್ವಂತ ಸೂರುಗಳಿಲ್ಲದೆ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಅದೂ ಮೀಸಲು ಅರಣ್ಯದ ಅಂಚಿನಲ್ಲೇ ಇರುವ ಗುಡ್ಡದಲ್ಲಿ ಸಣ್ಣ ಪುಟ್ಟ ಗುಡಿಸಲಿನಂತಹ ಮನೆಗಳನ್ನು ಕಟ್ಟಿಕೊಂಡು ದಿನ ದೂಡುತ್ತಿದ್ದು, ಸರ್ಕಾರದಿಂದ ಮನೆಗಾಗಿ ಎಷ್ಟೇ ಬಾರಿ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವುದೇ ದುರದೃಷ್ಟಕರ ಸಂಗತಿ.

- Advertisement -

ಇಷ್ಟಕ್ಕೂ ವಿರೂಪಾಪುರ ಗಡ್ಡೆಯಲ್ಲಿ 72 ಕುಟುಂಬಗಳಿವೆ. ಇವರೆಲ್ಲ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹಿಂಬದಿಯಿಂದ ಹೋಗುವ ಮೀಸಲು ಅರಣ್ಯ ಪ್ರದೇಶದಲ್ಲಿ ವಾಸವಿದ್ದರು. 2016ರಲ್ಲಿ ಅಲ್ಲಿನ ಮನೆಗಳನ್ನೆಲ್ಲ ಹಂಪಿ ಪ್ರಾಧಿಕಾರ, ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ತೆರವುಗೊಳಿಸಿ ಇವರನ್ನೆಲ್ಲ ಬೀದಿಗೆ ತಳ್ಳಿತ್ತು. ಯಾವುದೇ ಮುಂದಾಲೋಚನೆ ಇಲ್ಲದೇ ಅವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಸಣ್ಣ ಯೋಚನೆಗಳೂ ಇಲ್ಲದೇ ಅವರನ್ನೆಲ್ಲ ಒಕ್ಕಲೆಬ್ಬಿಸಿತ್ತು. ಅಂದು ಬೀದಿಗೆ ಬಿದ್ದ 72 ಕುಟುಂಬಗಳು ಇಂದಿಗೂ ವಸತಿಗಾಗಿ ಅಲೆದಾಟವನ್ನು ನಿಲ್ಲಿಸಿಯೇ ಇಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಈಗ ಅವರ ಸ್ಥಿತಿ ಹೇಗಿದೆ ಅಂತ ತಿಳಿದುಕೊಳ್ಳಲು ಈ ದಿನ.ಕಾಮ್ ತಂಡ ವಿರೂಪಾಪುರ ಗಡ್ಡೆ ಗ್ರಾಮಕ್ಕೆ ಭೇಟಿ ನೀಡಿತು. ಆ ವೇಳೆ ಯಾರೂ ಊಹಿಸದ, ಯಾರೂ ನೋಡಿರದ ದೃಶ್ಯಗಳು ಕಂಡುಬಂದಿವೆ.

ಯಾಕಂದರೆ, ಅವರೆಲ್ಲ ವಾಸ ಮಾಡುತ್ತಿರುವುದೇ ಅರಣ್ಯ ವ್ಯಾಪ್ತಿಯಲ್ಲಿರುವ ಗುಡ್ಡದಲ್ಲಿ. ಗುಡ್ಡದ ಆಕಾರದಂತೆ ಒಂದರ ಮೇಲೆ ಒಂದರಂತೆ ಮನೆಗಳಿವೆ. ಅದರ ಮಧ್ಯದಲ್ಲಿ ಗಿಡಗಂಟಿ, ಮರಗಳು ಬೆಳೆದು ರಾತ್ರಿ ಹೊತ್ತಿನಲ್ಲಿ ಮನೆಯಿಂದ ಹೊರಗೆ ಬಂದರೆ ಭಯ ಹುಟ್ಟಿಸುವಂತಿದೆ. ರಾತ್ರಿ ಹೊತ್ತಲ್ಲಿ ಒಬ್ಬರ ಮನೆಗೊಬ್ಬರು ಹೋಗಬೇಕಾದರೆ ಅದು ಅಸಾಧ್ಯದ ಮಾತು. ಕತ್ತಲಾದರೆ ಮುಖ್ಯ ರಸ್ತೆಗೆ ಬರಬೇಕೆಂದರೆ ಜೀವ ಕೈಯಲ್ಲಿ ಹಿಡಿದು ಬರಬೇಕು. ಒಂದು ರೀತಿಯಲ್ಲಿ ಇವರ ಜೀವನ ಪ್ರಾಣಿಗಳ ಜೊತೆಗಿನ ವಾಸ. ಗುಡ್ಡದ ಮೇಲಿರುವ ಕೊನೆಯ ಮನೆಗಳಿಗೆ ಕರಡಿ, ಚಿರತೆ ಬರುವುದು ಮಾಮೂಲು. ಇದರ ಮಧ್ಯೆ ಯಾರಿಗಾದರೂ ಅನಾರೋಗ್ಯ ಕಾಡಿದರೆ ಚಿಕಿತ್ಸೆ ಪಡೆಯಲು ದೂರದ ಊರಿಗೆ ಹೋಗಬೇಕು. ಮಕ್ಕಳು ಓದಲು ಶಾಲೆಯ ವ್ಯವಸ್ಥೆಯೂ ಸರಿಯಾಗಿಲ್ಲದಿರುವುದು ಕಂಡುಬಂದಿದೆ.

ಇಷ್ಟೆಲ್ಲ ಸಾಹಸಗಳ ಮಧ್ಯೆ ಜೀವನ ನಡೆಸುತ್ತಿರುವ ಈ ಗ್ರಾಮದ 72 ಕುಟುಂಬಗಳಿಗೆ ಸರ್ಕಾರ ವಸತಿ ಕಲ್ಪಿಸಬೇಕಿತ್ತು. ಆದರೆ 72 ಕುಟುಂಬಗಳ ಪೈಕಿ ರಾಜೀವ್ ಗಾಂಧಿ ಆಶ್ರಯ ಮನೆ ಯೋಜನೆಯಡಿ 21 ಕುಟುಂಬಗಳಿಗೆ ಮಾತ್ರ ಮಂಜೂರಾಗಿದ್ದು, ಆ ಮನೆಗಳನ್ನೂ ನಿವಾಸಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಅಸಮಾಧಾನಗೊಂಡ ನಿವಾಸಿಗಳು, ಸಾಣಾಪುರ ಗ್ರಾಮ ಪಂಚಾಯಿತಿ ಪಿಡಿಒ ವತ್ಸಲಾ ಅವರಿಗೆ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ 21 ಮನೆಗಳನ್ನು ಹಂಚಿಕೆ ಮಾಡಬೇಡಿ. ಉಳಿದವರಿಗೂ ವಸತಿ ಮಂಜೂರಾದ ಮೇಲೆ ಎಲ್ಲರಿಗೂ ಒಮ್ಮೆಲೇ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ವಿರೂಪಾಪುರ ಗಡ್ಡೆ ನಿವಾಸಿ ಅನುಷಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸರ್ವೆ ನಂ.49ರ ಅರಣ್ಯ ಭೂಮಿಯಲ್ಲಿ ವಾಸ ಮಾಡುತ್ತಿದ್ದ ನಮ್ಮನ್ನೆಲ್ಲ ಬೀದಿ ತಳ್ಳಿ ಈಗ ಮನೆ ಕೊಡಿ ಎಂದರೆ ಯಾರೂ ಕ್ಯಾರೆ ಎನ್ನುತ್ತಿಲ್ಲ. ನಾವು ಆ ಜಾಗದಲ್ಲಿ 30-40 ವರ್ಷಗಳಿಂದ ವಾಸ ಮಾಡುತ್ತಿದ್ದೆವು. ಆದರೆ ಕೊನೆಯಲ್ಲಿ ಬಂದು ಆ ಜಾಗದಲ್ಲಿ ವಾಸ ಮಾಡುತ್ತಿದ್ದವರಿಗೆ ಈಗ ಮನೆಗಳು ಮಂಜೂರಾಗಿದ್ದು, ಜೀವನಪೂರ್ತಿ ಅಲ್ಲೇ ಇದ್ದ ನಮಗೆ ಯಾವುದೇ ಮನೆ ಸಿಕ್ಕಿಲ್ಲ. ಹೀಗಾಗಿ, ಮತ್ತೊಮ್ಮೆ ಸರ್ವೆ ಮಾಡಿ 72 ಕುಟುಂಬಗಳಿಗೆ ಏಕಕಾಲಕ್ಕೆ ಮನೆಯ ಹಕ್ಕುಪತ್ರ ನೀಡಬೇಕು” ಎಂದು ಆಗ್ರಹಿಸಿದರು.

ಮತ್ತೊಬ್ಬ ನಿವಾಸಿ ನಾಗಮಣಿ ಮಾತನಾಡಿ, “ಈ ಹಿಂದಿನ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ನಿರಾಶ್ರಿತರಿಗೆ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದೆವು. ಅವರು ವಸತಿ ವ್ಯವಸ್ಥೆ ಮಾಡಲಾಗುವುದು ಎನ್ನುವಷ್ಟರಲ್ಲೇ ಚುನಾವಣೆಯಲ್ಲಿ ಸೋತರು. ಈಗ ಜನಾರ್ದನರೆಡ್ಡಿಯವರು ಶಾಸಕರಾಗಿದ್ದು, ಅವರಿಗೂ ಮನವಿ ಮಾಡಿದ್ದೇವೆ. ಶಾಸಕರಾದ ಆರಂಭದಲ್ಲಿ ಎರಡು ಎಕರೆ ಜಮೀನು ಖರೀದಿಸಿ ಡಬಲ್ ಬೆಡ್ ರೂಮ್‌ ಮನೆ ನಿರ್ಮಿಸಿಕೊಡುತ್ತೇವೆ. ಆದರೆ ಇತ್ತೀಚೆಗೆ ಅವರು ಭೇಟಿಗೆ ಸಿಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೂಪಾಪುರ ಗಡ್ಡೆ 1

ಈ ಕುರಿತು ಸಾಣಾಪುರ ಗ್ರಾಮ ಪಂಚಾಯಿತಿ ಪಿಡಿಒ ವತ್ಸಲಾ ಅವರು ಮಾತನಾಡಿ, “ಈಗ ಮಂಜೂರಾಗಿರುವ 21 ಹಕ್ಕುಪತ್ರ ವಿತರಣೆ ಮಾಡಬಾರದೆಂದು ನಿರಾಶ್ರಿತರು ಮನವಿ ಮಾಡಿದ್ದಾರೆ. ಹೀಗಾಗಿ, ಪುನರ್ ಸರ್ವೆ ಮಾಡಿ ಎಲ್ಲರಿಗೂ ಒಮ್ಮೆಲೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಈಗಾಗಲೇ ತಹಶೀಲ್ದಾರ್ ವಸಂತಕುಮಾರಿ ಮೇಡಂ, ಇಒ ರಾಮಾರೆಡ್ಡಿ ಪಾಟೀಲ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ” ಎಂದು ಹೇಳಿದರು.

ಗಂಗಾವತಿ ತಾಲೂಕು ಪಂಚಾಯಿತಿ ಇಒ ರಾಮಾರೆಡ್ಡಿ ಪಾಟೀಲ್ ಅವರನ್ನು ಮಾಹಿತಿ ಕೇಳಿದಾಗ, “21 ಕುಟುಂಬಗಳಿಗೆ ಹಕ್ಕುಪತ್ರಗಳು ಬಂದಿವೆ. ಉಳಿದ ಕುಟುಂಬಗಳಿಗೆ ವಸತಿ ಕೊಡಲು ತಿಮ್ಮಲಾಪುರ ಬಳಿ ಜಾಗ ಗುರುತು ಮಾಡಿದ್ದೇವೆ. ಈಗಾಗಲೇ ಈ ಸ್ಥಳಕ್ಕೆ ತಹಶೀಲ್ದಾರ್ ಮತ್ತು ನಾವು ಭೇಟಿ ಮಾಡಿ ಪರಿಶೀಲನೆ ಮಾಡಿದ್ದೇವೆ. ಆದರೆ ಅವರುಗಳು ಈಗಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಭೂಮಿಯಲ್ಲೇ ವಸತಿ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಅದು ಅಸಾಧ್ಯವಾದುದು. ಈ ಕಾರಣಕ್ಕಾಗಿ ಅವರಿಗೆ ಮನೆ ಒದಗಿಸುವುದು ವಿಳಂಬವಾಗುತ್ತಿದೆ” ಎಂದರು.

ಇದನ್ನೂ ಓದಿದ್ದೀರಾ? ಭಟ್ಕಳ: ಗಲಭೆಗಳ ನೆರಳಿನಿಂದ…. ಸೌಹಾರ್ದದ ಹುಡುಕಾಟದವರೆಗೆ

ವಿರೂಪಾಪುರ ಗಡ್ಡೆ ಈಗ ಜನರಿಗೆ ಸಂಕಷ್ಟದ ಸ್ಥಳವಾಗಿದೆ. ಯಾರಾದರೂ ಮೃತಪಟ್ಟರೂ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೂ ಕಷ್ಟದ ಪರಿಸ್ಥಿತಿ ಇದೆ. ಸಣ್ಣ ಗುಡಿಸಲಲ್ಲೇ ನಾಲ್ಕೈದು ಮಂದಿ ವಾಸ ಮಾಡಬೇಕು. ಕುಡಿಯುವ ನೀರು ತರುವುದಕ್ಕೂ ಹರಸಾಹಸ ಪಡಬೇಕು. ದುಡ್ಡಿದ್ದವರು ಹೇಗೋ ಸುಸಜ್ಜಿತ ನಿವೇಶನ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಪಾಪ ಬಡವರು ಏನು ಮಾಡಬೇಕು? ಮಳೆ ಬಂದರೆ ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆಗಳು ಕಾಡದೇ ಇರದು. ಇಂತಹ ಸಂಕಷ್ಟಗಳಲ್ಲಿರುವ ವಿರೂಪಾಪುರ ಗಡ್ಡೆ ಸಂತ್ರಸ್ತರನ್ನು ಕೊಪ್ಪಳ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳು ಹೇಗೆ ಪಾರು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕು.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...