ವಿಜಯನಗರ | ಗಂಡನಷ್ಟೇ ಹೆಂಡತಿಗೂ ಗೌರವ, ಘನತೆ ಇದೆ: ಬಲವಂತದ ಮನೆಗೆಲಸ ಸಲ್ಲದು: ರೈತ ಮಹಿಳೆ

Date:

ಮನೆಗೆಲಸವು ಮಹಿಳೆಯೊಬ್ಬಳ ಹೊಣೆಗಾರಿಕೆ ಮಾತ್ರವಲ್ಲ; ಕುಟುಂಬದ ಎಲ್ಲ ಜವಾಬ್ದಾರಿಗಳಂತೆಯೇ ಅದನ್ನೂ ಗಂಡ–ಹೆಂಡತಿ ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಹೈಕೋರ್ಟ್‌ನ ಅಭಿಪ್ರಾಯಕ್ಕೆ ಹೊಸಪೇಟೆಯ ಮಹಿಳೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ದಾಂಪತ್ಯ ಜೀವನದಲ್ಲಿ ಸಮಾನತೆ, ಪರಸ್ಪರ ಗೌರವ ಮತ್ತು ಸಹಭಾಗಿತ್ವವೇ ನೆಮ್ಮದಿಯ ಕುಟುಂಬದ ಆಧಾರವಾಗಬೇಕು ಎಂಬ ಸಂದೇಶ ಶ್ಲಾಘನೀಯ.

ಮನೆಗೆಲಸವನ್ನು ಗಂಡ ಹೆಂಡತಿ ಇಬ್ಬರೂ ಸಮಾನವಾಗಿ ಹಂಚಿಕೊಂಡು ಮಾಡಬೇಕು. ಮನೆಗೆಲಸವನ್ನು ಹೆಂಡತಿಯೇ ಮಾಡಬೇಕೆಂದು ಗಂಡ ಬಲವಂತ ಮಾಡುವಂತಿಲ್ಲ ಎಂಬ ಹೈಕೋರ್ಟ್ ಹೇಳಿಕೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲೂ ಮಹಿಳೆಯರಿಂದ ಬೆಂಬಲ ವ್ಯಕ್ತವಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾವಯವ ಕೃಷಿಕರು, “ಮನೆಗೆಲಸ ಎನ್ನುವುದು ಗಂಡ-ಹೆಂಡತಿ ಇಬ್ಬರೂ ಅರಿತುಕೊಂಡು ಮಾಡುವ ಕೆಲಸ. ಹೆಂಡತಿಯೇ ಎಲ್ಲ ಕೆಲಸ ಮಾಡಬೇಕೆಂದೇನೂ ಇಲ್ಲ. ಗಂಡನಷ್ಟೇ ಹೆಂಡತಿಗೂ ಘನತೆ, ಗೌರವ ಇರುತ್ತದೆ. ದುಡಿಮೆ ಅನ್ನೋದು ಕೇವಲ ಆಚೆಕಡೆಗೆ ಹೋಗಿ ಅಂದರೆ ಆಫೀಸು, ಕಂಪನಿಗೆ, ಹೊಲಕ್ಕೆ ಹೋಗಿ ದುಡಿಯುವುದು ಮಾತ್ರವಲ್ಲ. ಮನೆಗೆಲಸವೂ ಕೆಲಸವೇ” ಎಂದು ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಮದುವೆ ಎನ್ನುವುದು ಇಬ್ಬರು ಸಮಾನ ಮನಸ್ಕರ ಸಂಬಂಧವೇ ಹೊರತು ಅಸಮಾನತೆಯ ಸಂಬಂಧವಲ್ಲ ಎಂಬ ವಿಚಾರಕ್ಕೂ ಪ್ರತಿಕ್ರಿಯೆ ನೀಡಿರುವ ಭಾಗ್ಯಲಕ್ಷ್ಮೀಯವರು, “ಮದುವೆ ಎನ್ನುವುದು ಪರಸ್ಪರ ಇಬ್ಬರೂ ಒಪ್ಪಿಕೊಂಡು ಸಮಾನವಾಗಿ ಬದುಕುವುದು. ಇಬ್ಬರಲ್ಲಿ ಯಾರೂ ಮೇಲಲ್ಲ ಕೀಳಲ್ಲ. ಜಾತಿ, ವಯಸ್ಸು, ಬಣ್ಣ, ದಪ್ಪ, ಸಣ್ಣ, ಎತ್ತರ ಇವುಗಳಿಂದ ಯಾರೂ ಅಸಮಾನರು ಅಂತಾ ಅನ್ನಿಸಬಾರದು. ಗಂಡ ಹೆಂಡತಿಯ ಜೀವನವನ್ನು ನಾವು ಕಂಪ್ಯಾನಿಯನ್ ಶಿಪ್ ಅಂತ ನೋಡ್ತಿವಿ. ಕಂಪ್ಯಾನಿಯನ್ ಶಿಪ್‌ ಎನ್ನುವುದು ಇಲ್ಲದೇ ಹೋದರೆ ಅದು ಸಂಬಂಧವೇ ಅಲ್ಲ” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ‌ಧಾರವಾಡ | ಎಸ್‌ಐಆರ್ ಪ್ರಕ್ರಿಯೆ ʼಅವೈಜ್ಞಾನಿಕʼ ಮತ್ತು ʼಪ್ರಜಾಪ್ರಭುತ್ವ ವಿರೋಧಿʼಯಾಗಿ ನಡೆದಿದೆ: ಪ್ರಕಾಶ್‌ ರಾಜ್

“ಅಲ್ಲದೇ, ಇಲ್ಲಿನ ವ್ಯವಸ್ಥೆಯಲ್ಲಿ ಗಂಡ ಹೆಂಡತಿ ಸಂಬಂಧದ ಮಧ್ಯೆ ಹತ್ತು ಹಲವು ಕಟ್ಟುಪಾಡುಗಳನ್ನು ತುಂಬಲಾಗಿದೆ. ಹೆಂಡತಿಯಾದವಳು ಹೀಗೆಯೇ ಬದುಕಬೇಕು. ಗಂಡನಾದವನು ಯಾವಾಗಲೂ ಅಧಿಕಾರ ನಡೆಸಬೇಕು. ಗಂಡ ಕೆಲಸ ಮಾಡಿಬಿಟ್ಟರೆ ಅವಮಾನ ಎಂದು ಭಾವಿಸುವುದು ಎಂಬ ಇತ್ಯಾದಿ ಅಸಮಾನತೆಯ ವಿಚಾರಗಳನ್ನು ಬಲವಂತವಾಗಿ ಹೇರಲಾಗಿದೆ. ಹುಟ್ಟಿನಿಂದಲೇ ಭೇದಭಾವ ಮಾಡುವ ವ್ಯವಸ್ಥೆ ಇದೆ. ಭೂಮಿ ಮೇಲೆ ಹೆಣ್ಣು, ಗಂಡು ಸಮಾನರು. ಇಲ್ಲಿ ಹೆಂಡತಿಯಾದವಳು ತನ್ನ ಜನ್ನದಾತರನ್ನು ನೋಡಲು ಹೋಗಲು ಯಾರ ಅನುಮತಿಯೂ ಕೇಳಬೇಕಿಲ್ಲ. ಮತ್ತು ಇಬ್ಬರ ಮಧ್ಯೆ ಪರ್ಮಿಷನ್ ಎನ್ನುವ ಪ್ರಶ್ನೆಯೇ ಉದ್ಭವಿಸಲ್ಲ. ಅಧಿಕಾರದ ಪ್ರಶ್ನೆಯೂ ಬರುವುದಿಲ್ಲ” ಎಂದು ಹೇಳಿದರು.

ಒಟ್ಟಿನಲ್ಲಿ, ಮನೆಗೆಲಸವು ಮಹಿಳೆಯೊಬ್ಬಳ ಹೊಣೆಗಾರಿಕೆ ಮಾತ್ರವಲ್ಲ; ಕುಟುಂಬದ ಎಲ್ಲ ಜವಾಬ್ದಾರಿಗಳಂತೆಯೇ ಅದನ್ನೂ ಗಂಡ–ಹೆಂಡತಿ ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಹೈಕೋರ್ಟ್‌ನ ಅಭಿಪ್ರಾಯಕ್ಕೆ ಹೊಸಪೇಟೆಯ ಮಹಿಳೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ದಾಂಪತ್ಯ ಜೀವನದಲ್ಲಿ ಸಮಾನತೆ, ಪರಸ್ಪರ ಗೌರವ ಮತ್ತು ಸಹಭಾಗಿತ್ವವೇ ನೆಮ್ಮದಿಯ ಕುಟುಂಬದ ಆಧಾರವಾಗಬೇಕು ಎಂಬ ಸಂದೇಶ ಶ್ಲಾಘನೀಯ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ ಎಸಿಪಿ ವಿವೇಕ್ ಭಗತ್ FIR!

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ...

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...