ಮಂಗಳೂರು ವಿವಿಯಲ್ಲಿ ಪದವಿ ತರಗತಿ ಪುನರಾರಂಭ; ಒಂದು ವಾರ ವಿಳಂಬ

Date:

  • ವಾಣಿಜ್ಯ ವಿಭಾಗದ ಮೌಲ್ಯಮಾಪನಕ್ಕೆ 750 ಮೌಲ್ಯಮಾಪಕರ ಅಗತ್ಯವಿದೆ
  • ಬಹುತೇಕ ಅರ್ಹ ಸಿಬ್ಬಂದಿ ಮೌಲ್ಯಮಾಪನ ಕೇಂದ್ರಕ್ಕೆ ಬಂದಿಲ್ಲ

ಪ್ರಸ್ತುತ ನಡೆಯುತ್ತಿರುವ ಯುಜಿ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನಕ್ಕೆ ಮೌಲ್ಯಮಾಪಕರ ಕೊರತೆ ಇರುವುದರಿಂದ ಪದವಿ (ಯುಜಿ) ತರಗತಿಗಳ ಪುನರಾರಂಭವನ್ನು ಒಂದು ವಾರ ಮುಂದೂಡಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಮುಂದಿನ ಸೆಮಿಸ್ಟರ್‌ ತರಗತಿಗಳಿಗೆ ಮಾರ್ಚ್ 23ರಿಂದ ತರಗತಿಗಳ ಪುನರಾರಂಭಕ್ಕೆ ನಿರ್ಧರಿಸಲಾಗಿತ್ತು. ಇದೀಗ ಮೌಲ್ಯಮಾಪನದಲ್ಲಿ ವಿಳಂಬವಾಗುತ್ತಿರುವುದರಿಂದ ತರಗತಿಗಳ ಪುನರಾರಂಭವನ್ನು ಮುಂದೂಡಲು ವಿಶ್ವವಿದ್ಯಾಲಯ ಯೋಜಿಸಿದೆ.

“ವಾಣಿಜ್ಯ ವಿಭಾಗದ ಮೌಲ್ಯಮಾಪನಕ್ಕೆ 750 ಮೌಲ್ಯಮಾಪಕರ ಅಗತ್ಯವಿದೆ. ಪ್ರಸ್ತುತದಲ್ಲಿ ಕೇವಲ 450 ಮಂದಿ ಮೌಲ್ಯಮಾಪಕರು ಲಭ್ಯವಿದ್ದಾರೆ. ಮೌಲ್ಯಮಾಪಕರ ಕೊರತೆಯಿಂದಾಗಿ, ಕನಿಷ್ಠ ಒಂದು ವಾರದವರೆಗೆ ತರಗತಿಗಳ ಪುನರಾರಂಭವನ್ನು ಮುಂದೂಡಲು ನಾವು ನಿರ್ಧರಿಸಿದ್ದೇವೆ” ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದ್ದಾರೆ.

ಬಹುತೇಕ ಅರ್ಹ ಸಿಬ್ಬಂದಿ ಮೌಲ್ಯಮಾಪನ ಕೇಂದ್ರಕ್ಕೆ ಬಂದಿಲ್ಲವೆಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

“ಮೌಲ್ಯಮಾಪನ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಇರುವುದು ನಿಜ. ಅದರ ಹೊರತಾಗಿಯೂ, ನಾವು ಇಡೀ ಪ್ರಕ್ರಿಯೆಯನ್ನು ವೇಗಗೊಳಿಸುತ್ತಿದ್ದೇವೆ. ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವರಿಗೆ ಈ ಬಾರಿ ಸ್ಥಳದಲ್ಲೇ ಸಂಭಾವನೆ ನೀಡಿದ್ದೇವೆ. ಸಾಧ್ಯವಾದಷ್ಟು ಬೇಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ಆದಷ್ಟು ಬೇಗ ಫಲಿತಾಂಶ ಪ್ರಕಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಕುಲಸಚಿವ (ಮೌಲ್ಯಮಾಪನ) ರಾಜು ಕೃಷ್ಣ ಚಲಣ್ಣವರ್ ಹೇಳಿದರು.

“ನಿಯಮ ಪುಸ್ತಕದ ಪ್ರಕಾರ, ಅತಿಥಿ ಬೋಧಕರನ್ನು ಐದು ದಿನಗಳವರೆಗೆ ಮಾತ್ರ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಬಹುದು. ಕೆಲವು ಕಾಲೇಜು ಪ್ರಾಂಶುಪಾಲರು ಮೌಲ್ಯಮಾಪನ ಕೇಂದ್ರಗಳಲ್ಲಿ ಹೆಚ್ಚಿನ ದಿನ ಮೌಲ್ಯಮಾಪನ ಕಾರ್ಯ ಮಾಡಿದರೆ, ಇತರರು ನಿಯಮ ಪುಸ್ತಕದಂತೆ ಸೀಮಿತ ದಿನಗಳವರೆಗೆ ಮೌಲ್ಯಮಾಪನ ಕಾರ್ಯದಲ್ಲಿ ತೊಡಗುತ್ತಾರೆ. ಕೆಲವು ಖಾಯಂ ಬೋಧಕ ಸಿಬ್ಬಂದಿ ಕೂಡ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಿಲ್ಲ. ಹಾಗಾಗಿ ಅವರ ಗೈರು ಹಾಜರಿಗೆ ವಿವರಣೆ ನೀಡುವಂತೆ ಅವರಿಗೆ ನೋಟಿಸ್ ಕಳುಹಿಸಲಾಗಿದೆ” ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕನ್ನಡ ನಾಡು-ನುಡಿ ರಕ್ಷಣೆ ಎಲ್ಲರ ಹೊಣೆ : ಡಾ. ಎಸ್.ಎಸ್ ಮೈನಾಳೆ

ಕನ್ನಡ ಪುರಾತನ ಭಾಷೆಯಾಗಿದ್ದು, ದ್ರಾವಿಡ ಭಾಷೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕ್ರಿ.ಶ.450...

ರಾಯಚೂರು | ಸ್ಲಂ ನಿವಾಸಿಗಳ ನಿವೇಶನ ಅಭಿವೃದ್ಧಿಪಡಿಸಲು ಅಧಿಕಾರಿಗಳ ನಿರ್ಲಕ್ಷ್ಯ; ಜಿಲ್ಲಾಧಿಕಾರಿ ಕಿಡಿ

ಸ್ಲಂ ನಿವಾಸಿಗಳಿಗೆ ನಿವೇಶನಕ್ಕಾಗಿ ಭೂಮಿ ಮಂಜೂರು ಮಾಡಿದ್ದು, ಹಕ್ಕುಪತ್ರಗಳನ್ನು ವಿತರಣೆ ಮಾಡಿದೆ,...

ಜೀವ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಎರಡೇ ದಿನ ಬಾಕಿ

ಕೇಂದ್ರ ಸರ್ಕಾರ ಹಾಗೂ ನಾನಾ ರಾಜ್ಯಗಳಲ್ಲಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿ...

ಹುಬ್ಬಳ್ಳಿ | ಕಸದ ರಾಶಿಯಿಂದ ಸೂಸುವ ದಟ್ಟ ಹೊಗೆ; ಜನರ ಪರದಾಟ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ದಶಕಗಳಷ್ಟು ಹಳೆಯದಾದ ಕಸದ ರಾಶಿಗಳಿದ್ದು, ಸಾಕಷ್ಟು ಸಮಸ್ಯೆಗಳನ್ನು...