ಕೋಲಾರ|ಜಿ.ಹೆಚ್.ನಾಗರಾಜ್ ಕೆಪಿಸಿಸಿಯ ನೂತನ ಖಜಾಂಚಿಯಾಗಿ ರುವುದು ಕಾಂಗ್ರೆಸ್ ವಲಯದಲ್ಲಿ ಒಂದು ಉತ್ಸಾಹ ತುಂಬಿದೆ : ಅನ್ವರ್ ಪಾಷ

Date:

ಹಿಂದುಳಿದ ಈಡಿಗ ಜನಾಂಗಕ್ಕೆ ಸೇರಿದ ಜಿ.ಹೆಚ್.ನಾಗರಾಜ್ ರವರು ಅವಿಭಾಜಿತ ಕೋಲಾರ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದು, ಕೇಂದ್ರದ ಮಾಜಿ ಸಚಿವರೂ, ರಾಜ್ಯದ ಮಾಜಿ ಸಚಿವರೂ, ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರೂ ಆಗಿದ್ದ ದಿವಂಗತ ಆರ್.ಎಲ್.ಜಾಲಪ್ಪನವರ ಹತ್ತಿರದ ಸಂಬಂಧಿಯಾಗಿದ್ದಾರೆ. ದಿವಂಗತ ಶ್ರೀ.ಆರ್.ಎಲ್.ಜಾಲಪ್ಪನವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವಧಿಯಲ್ಲಿ ಅವರ ನೆರಳಲ್ಲೇ ರಾಜಕೀಯದ ಎಲ್ಲಾ ನಾಡಿ -ಮಿಡಿತಗಳನ್ನು ಕರಗತ ಮಾಡಿಕೊಂಡಿರುವ ಜಿ.ಹೆಚ್.ನಾಗರಾಜ್ ರವರು ಸದಾಕಾಲ ಪರೋಕ್ಷವಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಈಗ ದಿವಂಗತ ಆರ್.ಎಲ್.ಜಾಲಪ್ಪನವರ ಅನುಪಸ್ಥಿತಿಯಲ್ಲಿ , ಅವರ ದೊಡ್ಡ ಕುಟುಂಬದ ವಾರಸುದಾರನಂತೆ ಪ್ರತ್ಯಕ್ಷವಾಗಿ ರಾಜಕಾರಣದಲ್ಲಿ ಸಕ್ರಿಯವಾಗಲು ಕೆಪಿಸಿಸಿಯ ಖಜಾಂಚಿಯಾಗಿರುವುದು ಜಿ.ಹೆಚ್.ನಾಗರಾಜ್ ರವರಿಗೆ ಒಂದು ಅವಕಾಶವನ್ನು ಕಲ್ಪಿಸಿದೆ.

ಒಬ್ಬ ಉದ್ಯಮಿಯಾಗಿ, ಶಿಕ್ಷಣ ತಜ್ಞರಾಗಿ ಪ್ರಸ್ತುತ ಶ್ರೀ.ದೇವರಾಜ್ ಅರಸ್ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾಗಿ, ಶ್ರೀ.ದೇವರಾಜ್ ಅರಸ್ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾಗಿ, ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಮುಖ್ಯಸ್ಥರಾಗಿ, ಶ್ರೀ.ದೇವರಾಜ್ ಅರಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (SRI DEVARAJ URS ACADEMY OF HIGHER EDUCATION AND RESEARCH -SDUAHER) ಯ ಕುಲಾಧಿಪತಿಗಳಾಗಿ ಹಾಗೂ ಇವೆಲ್ಲಾ ಜವಾಬ್ದಾರಿಗಳ ಹೊರತಾಗಿಯೂ, ಸಮಾಜ ಸೇವೆಯಲ್ಲೂ ಸಹ ತೊಡಗಿಸಿಕೊಂಡಿರುವ ಶ್ರೀ.ಜಿ.ಹೆಚ್.ನಾಗರಾಜ್ ರವರನ್ನು ಕೆಪಿಸಿಸಿಯ ಖಜಾಂಚಿಯಾಗಿ ನೇಮಕ ಮಾಡಿರುವ ಈ ಶುಭ ಸಂದರ್ಭದಲ್ಲಿ, ಶ್ರೀ.ಜಿ.ಹೆಚ್.ನಾಗರಾಜ್ ರವರಿಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಹಾಗೂ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

- Advertisement -

ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಪ್ರಭಾವಿ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿರುವ ಶ್ರೀ.ಜಿ.ಹೆಚ್.ನಾಗರಾಜ್ ರವರು ದಿವಂಗತ ಆರ್.ಎಲ್.ಜಾಲಪ್ಪನವರ ಕಾರ್ಯವೈಖರಿಯಿಂದ ಪ್ರೇರಣೆ ಪಡೆದು ಈ ನೂತನ ಜವಾಬ್ದಾರಿಯಲ್ಲಿ ಅಮೋಘವಾದ ಯಶಸ್ಸು ಗಳಿಸಿ ಕಾಂಗ್ರೆಸ್ ಪಕ್ಷದ ಹಾಗೂ ಅಹಿಂದ ವರ್ಗಗಳ ಬಲವರ್ಧನೆಗೆ ತಮ್ಮ ಶಕ್ತಿಯನ್ನು ಧಾರೆಯೆರೆದು ರಾಜ್ಯ ಮಟ್ಟದ ಒಬ್ಬ ಪ್ರಭಾವಿ ಮುಖಂಡರಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಜ್ಜಳನ ಆಸ್ಥಾನದಲ್ಲಿದ್ದ ಕೊಂಡಿ ಮಂಚಣ್ಣ ಯಾರು? ಆತ ‘ಬಸವ’...

ಬಸವಣ್ಣನವರ ವಿರೋಧಿಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ‘ಕೊಂಡಿ ಮಂಚಣ್ಣ’ ಈಗ ಮತ್ತೆ ಕರ್ನಾಟಕದ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾನೆ. ಸಚಿವ ಎಂ.ಬಿ. ಪಾಟೀಲ್ ಅವರು ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಅವರನ್ನು ‘21ನೇ...

ರಾಹುಲ್ ವಿರುದ್ಧ ಮೊಕದ್ದಮೆ, ಸೋನಿಯಾಗೆ ಕಾನೂನು ನೋಟಿಸ್: ಸಾವರ್ಕರ್–ಗೋಡ್ಸೆ...

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ಮೂಲಕ ವಿವಾದ ಸೃಷ್ಟಿಸಿದ್ದ ಪುಣೆಯ ಸಾತ್ಯಕಿ ಸಾವರ್ಕರ್, ಇದೀಗ ಸೋನಿಯಾ ಗಾಂಧಿ ಅವರ ಪುಸ್ತಕದ ಐತಿಹಾಸಿಕ ಉಲ್ಲೇಖಗಳನ್ನು ಸಹಿಸದೆ ಕಾನೂನು ನೋಟಿಸ್ ನೀಡಿ ಮತ್ತೆ ಪ್ರಚಾರಕ್ಕಿಳಿದಿದ್ದಾನೆ....

ಉತ್ತರ ಕನ್ನಡ: ಬೇಡ್ತಿ ಹೋರಾಟ ಮತ್ತು ಸಂಸದ-ಶಾಸಕರ ಸೋಗಲಾಡಿತನ

ಬೇಡ್ತಿ ಸತ್ಯಾಗ್ರಹ ಎಷ್ಟು ಯೋಜನಾ ಬದ್ದವಾಗಿರುತ್ತದೆಂದರೆ, ಬೇಡ್ತಿ ನದಿ ಬಳಸುವ ಯಾವ ಯೋಜನೆಯೂ ಕಾರ್ಯಗತವಾಗದಂತೆ ಹಿಮ್ಮೆಟ್ಟಿಸಲಾಗುತ್ತಿದೆ. ಆದರೆ ಜಿಲ್ಲೆಯ ಹಿಂದುಳಿದವರು-ದುರ್ಬಲರು ಬಾಧಿತವಾಗುವ ಹಲವು ಯೋಜನೆಗಳನ್ನು ಪ್ರಭುತ್ವ ಹಠದಿಂದ ಅನುಷ್ಠಾನಗೊಳಿಸಿದೆ. ಸುಪಾ, ತಟ್ಟಿಹಳ್ಳ, ಕೊಡಸಳ್ಳಿ,...

ಕೆಪಿಸಿಸಿ ಪದಾಧಿಕಾರಿಗಳ ಪೈಕಿ ಒಂದು ಪ್ರಮುಖ ಹುದ್ದೆಯಾಗಿರುವ ಖಜಾಂಚಿಯ ಸ್ಥಾನವನ್ನು ಅವಿಭಾಜಿತ ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ.ಜಿ.ಹೆಚ್. ನಾಗರಾಜ್ ರವರು ಅಲಂಕರಿಸಲು ಅವಕಾಶ ಮಾಡಿಕೊಟ್ಟ ಎಐಸಿಸಿ ಅಧ್ಯಕ್ಷರಾದ ಶ್ರೀ. ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ.ರಾಹುಲ್ ಗಾಂಧಿ, ಕರ್ನಾಟಕ ರಾಜ್ಯಕ್ಕೆ ಎಐಸಿಸಿ ಉಸ್ತುವಾರಿಯಾದ ಶ್ರೀ. ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರಾದ ಶ್ರೀ. ಬಿ.ಕೆ.ಹರಿಪ್ರಸಾದ್, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಡಿಕೆ. ಶಿವಕುಮಾರ್, ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯ ಹಾಗೂ ಎಲ್ಲಾ ಹಿರಿಯ ಮುಖಂಡರಿಗೂ ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರವಾಗಿ, ಅವಿಭಾಜಿತ ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪರವಾಗಿ ಹಾಗೂ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಕೋಲಾರ ಕಾಂಗ್ರೆಸ್ ಮುಖಂಡ ಅನ್ವರ್ ಪಾಷ ರವರು ಪ್ರತಿಕ್ರಿಯೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ, ರೈತರ ಬೇಡಿಕೆ ಚರ್ಚೆಗೆ ಬರಲಿವೆ: ಸಲೀಂ ಅಹ್ಮದ್

ಆಶಾ ಕಾರ್ಯಕರ್ತೆಯರ ಬೇಡಿಕೆಗಳು, ಕಬ್ಬು ಬೆಳೆಗಾರರ ಸಮಸ್ಯೆಗಳು, ವಿಕಲಚೇತನರ ಸವಾಲುಗಳು ಹಾಗೂ...

ಚಿಕ್ಕಮಗಳೂರು | ‘ನಾಟಕ ನಿಲ್ಲಿಸಿ ನಯನ ಮೋಟಮ್ಮ’ ; ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ 

ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು...

ಕೋಲಾರ | ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಜಾರಿಗೆ ಹೋರಾಟ ತೀವ್ರ: ಸುನಂದಾ

ಐದು ದಶಕಗಳಿಂದಲೂ ಗೌರವಧನದ ಆಧಾರದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರನ್ನು ಕನಿಷ್ಠ ವೇತನದ...

ಜನಪರ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿ: ಸಚಿವ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ...