ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲ್ ಹತ್ಯೆ: ‘ಗಡ್ಡ ನೋಡಿ ಗುಂಡಿಟ್ಟು ಸಾಯಿಸಲಾಗಿದೆ’ ಎಂದ ಸಹೋದರ

Date:

  • ಬೀದರ್ ತಾಲೂಕಿನ ಹಮಿಲಾಪುರ್ ಗ್ರಾಮದ ಸೈಯದ್ ಸೈಫುದ್ದೀನ್
  • ‘ಗಡ್ಡ ನೋಡಿ ಗುಂಡಿಟ್ಟು ಸಾಯಿಸಲಾಗಿದೆ’ ಎಂದ ಸಹೋದರ ಯೂನುಸ್

ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲಲ್ಲಿ ಕಳೆದ ಸೋಮವಾರ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಆರ್‌ಪಿಎಫ್ ಕಾನ್‌ಸ್ಟೆಬಲ್ ತನ್ನ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿ, ನಾಲ್ವರನ್ನು ಕೊಂದಿರುವ ಘಟನೆಯಲ್ಲಿ ಮೃತಪಟ್ಟವರಲ್ಲಿ ಓರ್ವರು ಬೀದರ್ ಜಿಲ್ಲೆಯವರು ಎಂದು ತಿಳಿದುಬಂದಿದೆ.

- Advertisement -

ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಚೇತನ್ ಸಿಂಗ್‌ನಿಂದ ಕೊಲ್ಲಲ್ಪಟ್ಟ ನಾಲ್ವರ ಪೈಕಿ ಓರ್ವರು ಆರ್‌ಪಿಎಫ್ ಸಹೋದ್ಯೋಗಿ ಎಎಸ್‌ಐ ಟಿಕಾ ರಾಮ್ ಮೀನಾ ಹಾಗೂ ಉಳಿದ ಮೂವರು ಮುಸ್ಲಿಮ್ ಪ್ರಯಾಣಿಕರು ಎಂದು ತಿಳಿದು ಬಂದಿತ್ತು. ಈ ಪೈಕಿ ಇಬ್ಬರನ್ನು ಅಬ್ದುಲ್ ಕದಿರ್, ಅಸ್ಗರ್ ಕೈ ಎಂದು ಗುರುತಿಸಲಾಗಿತ್ತು. ಇನ್ನೊಬ್ಬರ ಪ್ರಯಾಣಿಕನ ವಿವರ ತಿಳಿದು ಬಂದಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ...

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ನಾಲ್ಕನೇಯ ವ್ಯಕ್ತಿಯ ವಿವರವನ್ನು ಪತ್ತೆಹಚ್ಚಲಾಗಿದ್ದು, ಬೀದರ್ ತಾಲೂಕಿನ ಹಮಿಲಾಪುರ್ ಗ್ರಾಮದ ಸೈಯದ್ ಸೈಫುದ್ದೀನ್ ಎಂದು ತಿಳಿದುಬಂದಿದೆ. ಇವರು ಹೈದರಾಬಾದ್‌ನಲ್ಲಿ ನೆಲೆಸಿದ್ದರು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮೃತನ ಸಹೋದರ ಸೈಯದ್ ಯೂನುಸ್, ‘ಹೈದರಾಬಾದ್‌ನ ಮೊಬೈಲ್ ಸರ್ವಿಸ್ ಅಂಗಡಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅಂಗಡಿಯ ಮಾಲೀಕರ ಜೊತೆಗೆ ಅಜ್ಮೀರ್‌ಗೆ ತೆರಳಿ ವಾಪಸ್ ಮುಂಬೈಗೆ ಬರುವ ವೇಳೆ ಈ ದುರ್ಘಟನೆ ನಡೆದಿದೆ. ಸೈಫುದ್ದೀನ್ ಅವರು ಗಡ್ಡ ಇಟ್ಟುಕೊಂಡಿದ್ದರು. ಆದರೆ ಅವರ ಜೊತೆಗಿದ್ದ ಮಾಲೀಕರಿಗೆ ಗಡ್ಡ ಇರಲಿಲ್ಲ. ಹೀಗಾಗಿ ಗಡ್ಡ ಇಟ್ಟಿರುವುದನ್ನು ಗಮನಿಸಿ ಸೈಫುದ್ದೀನ್ ಮೇಲೆ ಆರ್‌ಪಿಎಫ್‌ನ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಅಂತ ನಮಗೆ ಮಾಹಿತಿ ಬಂದಿದೆ. ಇವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಇನ್ನು ಯಾರು ಗತಿ?’ ಎಂದು ನೋವು ತೋಡಿಕೊಂಡರು.

ಇದನ್ನು ಓದಿದ್ದೀರಾ? ಮುಸ್ಲಿಮರು ಭಾರತದಲ್ಲಿರಬೇಕಾದರೆ ಮೋದಿ-ಯೋಗಿ ಹೇಳಿದಂತೆ ಕೇಳಬೇಕು : ನಾಲ್ವರನ್ನು ಕೊಂದ ಕಾನ್‌ಸ್ಟೆಬಲ್

‘ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದರೂ ಮನೆಗೆ ಯಾರೂ ಭೇಟಿ ನೀಡಲಿಲ್ಲ. ಸದ್ಯ ಮೃತದೇಹವು ಮುಂಬೈನಿಂದ ಹೊರಟಿದೆ. ರಾತ್ರಿ 8ಕ್ಕೆ ಸ್ವಗ್ರಾಮಕ್ಕೆ ಬರುತ್ತದೆ’ ಎಂದು ಯೂನುಸ್ ಮಾಹಿತಿ ನೀಡಿದರು.

ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸೈಫುದ್ದೀನ್ ಅವರ ಸ್ನೇಹಿತ ಅಸದುಲ್ಲಾ ಖಾನ್, ‘ಸರ್ಕಾರ ಸೈಫುದ್ದೀನ್ ಕುಟುಂಬಕ್ಕೆ ₹5 ಕೋಟಿ ಪರಿಹಾರ ನೀಡಬೇಕು, ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಬೇಕು, ಕುಟುಂಬಕ್ಕೆ ಮನೆ ನಿರ್ಮಿಸಿಕೊಡಬೇಕು, ಪತ್ನಿಗೆ ಸರ್ಕಾರಿ ನೌಕರಿ ಸಿಗುವಂತೆ ಮಾಡಬೇಕು ಎಂಬುದು ನಮ್ಮೆಲ್ಲರ ಬೇಡಿಕೆ’ ಎಂದು ತಿಳಿಸಿದರು.

25 ಲಕ್ಷ ರೂ. ಪರಿಹಾರ ನೀಡಿ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಸೈಯದ್ ಸೈಫುದ್ದೀನ್ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಘಟನೆಯ ಸುದ್ದಿ ಕೇಳಿ ದುಃಖವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗುಂಡಿನ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನಮ್ಮ ಜಿಲ್ಲೆಯ ಹಮಿಲಾಪೂರ್ ಗ್ರಾಮದ ಸೈಯದ್ ಸೈಫುದ್ದೀನ್ ರವರ ಸಹೋದರ ಯೂನುಸ್ ರವರೊಂದಿಗೆ ನಾನು ಈಗಾಗಲೇ ಮಾತನಾಡಿ ಸಾಂತ್ವನ ಹೇಳಿದ್ದೇನೆ ಎಂದು ಖಾಶೆಂಪುರ್ ತಿಳಿಸಿದ್ದಾರೆ.

ಸೈಫುದ್ದೀನ್ ಕುಟುಂಬಕ್ಕೆ ರೈಲ್ವೆ ಇಲಾಖೆ (ಕೇಂದ್ರ ಸರ್ಕಾರ) ಹಾಗೂ ಅಲ್ಲಿನ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದ್ದಾರೆ.

ಮಾಹಿತಿ : ಬಾಲಾಜಿ ಕುಂಬಾರ್, ಬೀದರ್
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​ಚಿಂತಾಮಣಿ | ಅನಾಥನೆಂದು ಹೇಳಿ ಟಿಕೆಟ್ ಪಡೆದು ಗೆದ್ದರು, ಅಭಿವೃದ್ಧಿಗೆ ಕೊಡುಗೆಯೇ ಇಲ್ಲ:ಪ್ರದೀಪ್ ಈಶ್ವರ್ ವಿರುದ್ಧ ಹರಿದಾಯ್ದ ಜಿ.ಎಲ್. ಶಂಕರ್

ಚಿಂತಾಮಣಿ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್...

ಕೋಲಾರ | ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ: ಆರ್. ಶ್ರೀನಿವಾಸನ್

ರೈತರು ನಿದ್ದೆ ಮಾಡುವ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಪೊಲೀಸ್ ಬೆಂಗಾವಲಿನಲ್ಲಿ...

OBC ವಿದ್ಯಾವಂತ ನಿರುದ್ಯೋಗಿಗಳ ಕುರಿತು ಅಧ್ಯಯನ; ಪ್ರವೀಣ ಪತ್ತಾರಗೆ ಕವಿವಿ ಪಿಎಚ್‌ಡಿ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಮಾಜಶಾಸ್ತ್ರ ವಿಭಾಗದ ಸಂಶೋಧಕರಾದ ಪ್ರವೀಣ ಪತ್ತಾರ ಅವರು...

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ...