ರಾಯಚೂರು | ಜಾಗತಿಕ ಮಟ್ಟದಲ್ಲಿಯೇ ದೇಶದ ಕೃಷಿ ವಿಶ್ವವಿದ್ಯಾಲಯಗಳು ಗುಣಮಟ್ಟದ ಕೃಷಿ ಶಿಕ್ಷಣ ನೀಡುತ್ತಿವೆ; ಕುಲಪತಿ ಡಾ. ಆರ್.ಸಿ.ಜಗದೀಶ್

Date:

ಜಾಗತಿಕ ಮಟ್ಟದಲ್ಲಿಯೇ ದೇಶದ ಕೃಷಿ ವಿಶ್ವವಿದ್ಯಾಲಯಗಳು ಗುಣಮಟ್ಟದ ಕೃಷಿ ಶಿಕ್ಷಣ ನೀಡುತ್ತಿವೆ. ದೊರೆಯುತ್ತಿರುವ ವಿಫುಲ ಅವಕಾಶಗಳನ್ನು ಕೃಷಿ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 8ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ದೇಶದ ಕೃಷಿ ವಿಶ್ವವಿದ್ಯಾಲಯಗಳು ಗುಣಮಟ್ಟ ಕೃಷಿ ಶಿಕ್ಷಣ ನೀಡುತ್ತಿವೆ. ಪ್ರತಿವರ್ಷ ಹತ್ತು ಸಾವಿರ ಕೃಷಿ ವಿದ್ಯಾರ್ಥಿಗಳ ಹೊರಬರುತ್ತಿದ್ದಾರೆ. ಸಂಶೋಧನೆ ಹಾಗೂ ಕೃಷಿ ಜ್ಞಾನ ಮಾದರಿಯಾಗಿದೆ. ಕೃಷಿ ಶಿಕ್ಷಣ ಆನ್‌ಲೈನ್ ಶಿಕ್ಷಣವಲ್ಲ.

ಕೌಶಲ್ಯವೃದ್ಧಿಯ ಮೇಲೆ ಕೃಷಿ ಪ್ರಾತ್ಯಕ್ಷಿತೆಯ ಮೂಲಕವೇ ಕಲಿಯಬೇಕಿದೆ. ಸುಸ್ಥಿರ ಕೃಷಿಯನ್ನು ಹೆಚ್ಚಿಸಲು ಇರುವ ಅವಕಾಶಗಳನ್ನು ಕೃಷಿ ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕಿದೆ. ಶೇ.50ರಷ್ಟು ವಿದ್ಯಾರ್ಥಿಗಳು ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಕೃಷಿ ವಿಸ್ತರಣಾ ಕೇಂದ್ರಗಳ ಮೂಲಕ ಕೃಷಿಯನ್ನು ಮತ್ತಷ್ಟು ಉತ್ತೇಜಿಸಲು ಅನೇಕ ಅವಕಾಶಗಳಿವೆ. ಜೈವಿಕ, ತೋಟಗಾರಿಕೆ, ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಕೆ ಮೂಲಕ ಕೃಷಿ ಲಾಭದಾಯಕದತ್ತ ಕೊಂಡ್ಯೊಯುವ ಅವಕಾಶಗಳು ರೈತರಿಗೆ ತಲುಪಿಸಬೇಕಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಾತಾವರಣದ ಬದಲಾವಣೆ, ಇಳುವರಿ ಹೆಚ್ಚಳ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಬೇಕಿದೆ. ಗ್ರಾಮೀಣ ಪ್ರದೇಶದಿಂದ ಕೃಷಿ ಪದವೀಧರರು ಈ ನಿಟ್ಟಿನಲ್ಲಿ ಚಿಂತಿಸಬೇಕಾದ ಅವಶ್ಯಕತೆಯಿದೆ. ಜಾಗತಿಕ ಸಂಶೋಧನಾ ಬೆಳವಣಿಗೆಗಳೊಂದಿಗೆ ಬದಲಾದ ಕೃಷಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕಿದೆ. ಹತ್ತಾರು ವರ್ಷದಿಂದ ನಡೆದುಕೊಂಡಿರುವ ಕೃಷಿ ಪದ್ಧತಿಯನ್ನು ಉಳಿಸಿಕೊಂಡು ಹೊಸತನವನ್ನು ರೂಢಿಸಿಕೊಳ್ಳಬೇಕಿದೆ ಎಂದರು. ಕೃಷಿ ಬೆಳವಣಿಗೆ ಇರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಕೃಷಿಯನ್ನು ಸುಸ್ಥಿರತೆಯನ್ನು ಹೆಚ್ಚಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ. ಹನುಮಂತಪ್ಪವಹಿಸಿದ್ದರು, ಅತಿಥಿಗಳಾಗಿ ವಿಶ್ರಾಂತ ಕುಲಪತಿ ಡಾ. ಬಿ.ವಿ. ಪಾಟೀಲ್, ಕೊಪ್ಪಳ ಅರಣ್ಯಾಧಿಕಾರಿ ಡಾ.ಎ. ಚಂದ್ರಶೇಖರ, ನೇಪಾಳ ಕೃಷಿ ಇಲಾಖೆ ನಿರ್ದೇಶಕ ಡಾ. ದಿಲೀಪ್ ಕುಮಾರ ಝಾ, ಬಾಂಗ್ಲಾದೇಶದ ಕೃಷಿ ನಿರ್ದೆಶಕ ಡಾ.ಬಿ.ಕೆ ಚಕ್ರವರ್ತಿ, ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ಮಲ್ಲಿಕಾರ್ಜುನ, ಡಾ. ಶ್ರೀನಿವಾಸ ರಾವ, ಕೃಷಿ ಸಂಶೋಧನಾ ನಿರ್ದೆಶಕ ಡಾ. ಎಂ.ಜಿ.ಪಾಟೀಲ್, ರಜಿಸ್ಟಾçರ್ ಡಾ. ಎಂ.ವೀರನಗೌಡ, ಡಾ. ಗುರುರಾಜ ಸುಂಕದ, ಡಾ. ಬಿ.ವಿ.ತೆಬುರೇನ್, ಡಾ. ಎಸ್.ಪಿ.ಸಿಂಗ್, ಡಾ. ಮಹೇಂದ್ರ ಸಿಂಗ್ ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭಾರೀ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಡೆ; ಜೀಪಿನಲ್ಲಿ ಹುಚ್ಚಾಟ ಮೆರೆದ ವ್ಯಕ್ತಿಯ ಬಂಧನ

ಭಾರೀ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ...

2028ರೊಳಗೆ ಜಿಲ್ಲೆಗೆ ಮತ್ತೆ ರಾಮನಗರ ಹೆಸರು ಬರುತ್ತದೆ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ

ರಾಮನಗರ ಜಿಲ್ಲೆಯಲ್ಲಿ ರಾಮನ ಹೆಸರಿದೆ. ಭೂಮಿ ಇರುವವರೆಗೂ ರಾಮನಗರ ಹೆಸರನ್ನು ತೆಗೆಯಲು...

ಹುಣಸೂರು | ಸೋರುತ್ತಿದೆ ಆರ್‌ಟಿಓ ಕಚೇರಿ ಮಾಳಿಗೆ; ಅಧಿಕಾರಿಗಳಿಗೇ ಇಲ್ಲ ಮೂಲ ಸೌಕರ್ಯ!

ಮೈಸೂರು ಜಿಲ್ಲೆ ಹುಣಸೂರಿನ ಆರ್‌ಟಿಓ ಕಚೇರಿ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,...

ಬೆಂಗಳೂರು | 2 ವರ್ಷಗಳ ಬಳಿಕ ಪೀಣ್ಯ ಫ್ಲೈಓವರ್‌ನಲ್ಲಿ ಭಾರೀ ವಾಹನ ಸಂಚಾರ ಅವಕಾಶ; ಷರತ್ತೂ ಅನ್ವಯ

ಬೆಂಗಳೂರಿನಿಂದ ಕರ್ನಾಟಕದ ಉತ್ತರ ಭಾಗಕ್ಕೆ ಸಂಪರ್ಕ ಒದಗಿರುವ ತುಮಕೂರು ರಸ್ತೆಯಲ್ಲಿರುವ ಪೀಣ್ಯ...