ಜಮೀನಿನಲ್ಲಿ ಮಲಗಿದ್ದ ರೈತ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಗೇರಹಳ್ಳಿ ಗ್ರಾಮದ ರೈತ ಪುಟ್ನಂಜ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಜಮೀನಿನಲ್ಲಿ ರಾಗಿ ಬೆಳದಿದ್ದ ರೈತ, ಕಣದಲ್ಲಿ ರಾಗಿ ಒಕ್ಕಣೆ ಮಾಡಿದ್ದರು. ಅದರ ಕಾವಲು ಕಾಯಲು ಬುಧವಾರ ರಾತ್ರಿ ಕಣದಲ್ಲಿ ಮಲಗಿದ್ದರು. ಈ ವೇಳೆ, ಕಾಡಾನೆ ದಾಳಿ ಮಾಡಿದ್ದು, ರೈತ ಮೃತಪಟ್ಟಿದ್ದಾರೆ.
ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಳೆದ ಮೂರು ತಿಂಗಳಲ್ಲಿ ಎಂಟು ಬಾರಿ ಕಾಡಾನೆಗಳು ದಾಳಿ ಮಾಡಿವೆ. ಪರಿಣಾಮ, ಮೂವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಲು ಶಾಶ್ವತ ಪರಿಹಾರ ಕ್ರಮಕ್ಕಾಗಿ ರೈತರು ಆಗ್ರಹಿಸಿದ್ದಾರೆ.