ಸೆಟ್ಟೇರಿದ ಸಿದ್ದರಾಮಯ್ಯ ಸಿನಿಮಾ: ಚಿತ್ರದ ಫಸ್ಟ್ ಲುಕ್ ಜೊತೆಗೆ ಟೈಟಲ್ ಬಿಡುಗಡೆ

Date:

  • ಸತ್ಯರತ್ನಮ್ ನಿರ್ದೇಶನದಲ್ಲಿ ಮೂಡಿಬರಲಿದೆ ಸಿದ್ದರಾಮಯ್ಯ ಸಿನಿಮಾ
  • ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲು ಸತ್ಯರತ್ನಮ್ ಪ್ಲ್ಯಾನ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ಆಧರಿತ ಸಿನಿಮಾ ನಿರ್ಮಾಣಕ್ಕೆ ತಯಾರಿ ನಡೆದಿದೆ. ಶ್ರೀರಾಮನವಮಿ ದಿನದಂದೇ ಚಿತ್ರದ ಫಸ್ಟ್ ಲುಕ್ ಜೊತೆಗೆ ಟೈಟಲ್ ಬಿಡುಗಡೆಯಾಗಿದೆ.

ನಿರ್ದೇಶಕ ಸತ್ಯರತ್ನಮ್ ನಿರ್ದೇಶನದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವನ ಆಧರಿತ ಸಿನಿಮಾ ತಯಾರಾಗುತ್ತಿದೆ. ʼಲೀಡರ್ ರಾಮಯ್ಯʼ ಹೆಸರಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಸಿದ್ದರಾಮಯ್ಯ ಕುರಿತು ಚಲನಚಿತ್ರ ಮಾಡಲಾಗುತ್ತಿದೆ ಎಂಬ ವಿಚಾರ ಅಧಿಕೃತವಾಗಿ ಘೋಷಣೆಯಾಗಿದ್ದು, ʼಲೀಡರ್‌ ರಾಮಯ್ಯʼ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಸತ್ಯ ರತ್ನಮ್‌, ʼಲೀಡರ್‌ ರಾಮಯ್ಯʼ ಭಾಗ-1 ಸಿನಿಮಾ ಆರಂಭಿಸಿದ್ದೇವೆ.

ಅದರಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ದಿನಗಳು, ಕಾಲೇಜು ಜೀವನ, ವಕೀಲರಾಗಿ ಕಾರ್ಯ ನಿರ್ವಹಿಸಿದ್ದ ದಿನಗಳು, ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು, ರಾಜಕೀಯಕ್ಕೆ ಅವರು ಪ್ರವೇಶ ಪಡೆದಿರುವ ಬಗ್ಗೆ ಚಿತ್ರೀಕರಣ ಮಾಡಲಾಗುತ್ತೆ” ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಿನಿಮಾ

ಸಿದ್ದರಾಮಯ್ಯ ಪಾತ್ರ ಯಾರು ಮಾಡುತ್ತಿದ್ದಾರೆ?

ಭಾಗ-1 ರಲ್ಲಿ ಕನ್ನಡದ ಹೊಸ ನಟರೊಬ್ಬರು ಸಿದ್ದರಾಮಯ್ಯ ಅವರ ಪಾತ್ರ ಮಾಡಲಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಅವರು ಭಾಗ 2ರಲ್ಲಿ ನಟರಾಗಿ ಅಭಿನಯಿಸಲಿದ್ದಾರೆ.

ಶ್ರೀರಾಮನವಮಿ ಪ್ರಯುಕ್ತ ಈಗ ಟೈಟಲ್ ಬಿಡುಗಡೆ ಮಾಡಿದ್ದೇವೆ. ಭಾಗ-1ರಲ್ಲೂ ವಿಜಯ್ ಸೇತುಪತಿ ನಟನೆ ಇರುತ್ತದೆ. ಆ ಬಗ್ಗೆ ಕುತೂಹಲ ಇರಲಿದೆ ಎಂದು ಹೇಳಿದ್ದಾರೆ.

“ಸಿದ್ದರಾಮಯ್ಯ ಅವರು ಒಬ್ಬ ಮಾಸ್‌ ಲೀಡರ್‌. ಒಬ್ಬ ಮಾಸ್‌ ಲೀಡರ್ ಜನರ ಮಧ್ಯೆ ಹೇಗೆ ಹುಟ್ಟುತ್ತಾನೆ ಎಂಬುದು ಕಥೆಯ ಹಂದರ. ಈ ಕಾರಣಕ್ಕೆ ʼಲೀಡರ್ ರಾಮಯ್ಯʼ ಎಂದು ಟೈಟಲ್ ಇಟ್ಟಿದ್ದೇವೆ. ಮುಂದಿನ ವಾರವೇ ಚಿತ್ರದ ನಾಯಕ ನಟನ ಬಗ್ಗೆ ಮಾಹಿತಿ ನೀಡಲಿದ್ದೇವೆ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ಶ್ರೀರಾಮ ‘ಅಸ್ಪೃಶ್ಯ’ರ ಮೈಮೇಲೆ ಹಚ್ಚೆಯಾದ- ಸ್ಥಾವರ ಇಳಿದು ಜಂಗಮನಾದ

‘ಇದೆಲ್ಲ ಯಾಕೆ’ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ಬಳಿ ಲೀಡರ್‌ ರಾಮಯ್ಯ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿದಾಗ ‘ಇದೆಲ್ಲ ಯಾಕೆ’ ಅಂತ ಹೇಳಿದರು. ಯಾವುದೇ ವಿವಾದ ಇಲ್ಲ ಎಂದು ಅವರಿಗೆ ಮನವರಿಕೆ ಮಾಡಿ, ಅವರ ಒಪ್ಪಿಗೆಯಿಂದ ಈ ಸಿನಿಮಾ ಮಾಡುತ್ತಿದ್ದೇವೆ. ಈ ಸಿನಿಮಾ ಟ್ರೇಲರ್ ಅನ್ನು ಅರಮನೆ ಮೈದಾನದಲ್ಲೇ ದೊಡ್ಡ ಕಾರ್ಯಕ್ರಮ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ಸತ್ಯ ರತ್ನಮ್‌ ತಿಳಿಸಿದ್ದಾರೆ.

ಕಮರ್ಷಿಯಲ್ ಸಿನಿಮಾ

‘ಲೀಡರ್‌ ರಾಮಯ್ಯʼ ಸಿನಿಮಾ ಒಂದು ಮಾಸ್ ಕಮರ್ಷಿಯಲ್ ಸಿನಿಮಾ ಆಗಿರಲಿದೆ. ಸಿದ್ದರಾಮಯ್ಯ ಅವರಿನ್ನೂ ಈ ಪೋಸ್ಟರ್‌ ಲುಕ್ ನೋಡಿಲ್ಲ. ಅವರು ಬಂದ ಮೇಲೆ ಅವರಿಗೆ ತೋರಿಸಿ, ಇನ್ನೊಮ್ಮೆ ಫಸ್ಟ್ ಲುಕ್ ರಿಲೀಸ್ ಮಾಡುತ್ತೇವೆ. ಚಿತ್ರದಲ್ಲಿ ಆಕ್ಷನ್ ಇದೆ, ಲವ್ ಇದೆ ಹಾಗೂ ತಂದೆ ಮಗನ ಭಾವನಾತ್ಮಕ ಸಂಬಂಧ ಇದ್ದು, ಚಿತ್ರ ರಸಿಕರು ಬಯಸುವ ಎಲ್ಲ ಎಳೆ ಸಿನಿಮಾದಲ್ಲಿ ಇರಲಿದೆ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬದಂದು (ಆಗಸ್ಟ್ 3) ʼಲೀಡರ್‌ ರಾಮಯ್ಯʼ ಸಿನಿಮಾ ಐದು ಭಾಷೆಯಲ್ಲಿ ತೆರೆ ಕಾಣಲಿದೆ” ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಡಕಟ್ಟು ಸಂಶೋಧನಾ ಸಂಸ್ಥೆ’ಯ ನಿರ್ದೇಶಕನ ಬಿಡುಗಡೆ ಒತ್ತಾಯ

ʼಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆʼಯನ್ನು ಅಮಾಯಕ ಆದಿವಾಸಿಗಳಿಗಾಗಿ ಉಳಿಸಬೇಕು. ಆದರೆ,...

ಚೀನಾದಲ್ಲಿ ಹೊಸ ಮಾದರಿಯ ಸೋಂಕು ಪತ್ತೆ : ಕರ್ನಾಟಕ ಸೇರಿ 5 ರಾಜ್ಯಗಳಿಗೆ ಎಚ್ಚರಿಕೆ

ಈಗಷ್ಟೇ, ಕೊರೊನಾ ಸೋಂಕಿನ ಅಬ್ಬರದಿಂದ ನಿರಾಳರಾಗಿರುವ ಜನತೆಗೆ ಇದೀಗ ಮತ್ತೊಂದು ಸಂಕಷ್ಟ...

ಬಾಗಲಕೋಟೆ | ಬ್ಯಾರೇಜಿಗೆ ನೀರು ತುಂಬಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಧರಣಿ

ಬ್ಯಾರೇಜಿಗೆ ನೀರು ತುಂಬಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು...

ಹಾವೇರಿ | ಎಸ್ಎಫ್ಐ ಜಿಲ್ಲಾ ಸಮಿತಿಯಿಂದ ʼವಿದ್ಯಾರ್ಥಿನಿಯರ ಸಮಾವೇಶʼ

ಪ್ರತಿ ವಿದ್ಯಾರ್ಥಿಯೂ ಸಮಾಜದ ಪ್ರಗತಿಗಾಗಿ ಚಿಂತಿಸಬೇಕು. ಸಮಾಜದಲ್ಲಿನ ಅನೇಕ ಸವಾಲುಗಳನ್ನು ಎದುರಿಸಲು...