ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಎಂದೇ ಹೇಳಲಾಗುವ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19ರಿಂದ 27ರವರೆಗೆ ನಡೆಯಲಿದೆ.
ಭಾನುವಾರ (ಜ.14) ಶಿರಸಿಯ ದೇವಾಲಯದ ಸಭಾಂಗಣದಲ್ಲಿ ಜರುಗಿದ ಜಾತ್ರಾ ಮಹೋತ್ಸವ ದಿನಾಂಕ ಘೋಷಣಾ ಸಭೆಯಲ್ಲಿ ಗೋಪಾಲಕೃಷ್ಣ ದೇವಾಲಯದ ಪ್ರಧಾನ ಅರ್ಚಕ ಶರಣ ಆಚಾರ್ಯ ಅವರು ಮಾತನಾಡಿ, ಜಾತ್ರೆಯ ದಿನಾಂಕವನ್ನು ಘೋಷಣೆ ಮಾಡಿದರು. ಮಾರ್ಚ್ 19ರಿಂದ 27ರವರೆಗೆ ಒಟ್ಟು 9ದಿನಗಳ ಕಾಲ ಈ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಜನವರಿ 31ರಿಂದ ಜಾತ್ರೆ ಪೂರ್ವದ ಉತ್ತರಂಗ ಮೊದಲನೇ ಕಾರ್ಯಕ್ರಮ ಆರಂಭವಾಗುತ್ತದೆ. ಮಾರ್ಚ್ 19ರಂದು ರಥಕ್ಕೆ ಕಲಶ ಪ್ರತಿಷ್ಠೆ, ಕಲ್ಯಾಣ ಪ್ರತಿಷ್ಠೆ, ಜ. 20ರಂದು ಬೆಳಗ್ಗೆ ದೇವಿಯ ರಥೋತ್ಸವ, ಜ. 21ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವಾ ಸ್ವೀಕಾರ, ಜ. 27ರಂದು ಜಾತ್ರಾ ವಿಧಿ ವಿಧಾನಗಳು ಮುಗಿಯಲಿದೆ. ಯುಗಾದಿಗೆ ದೇವಾಲಯದಲ್ಲಿ ಮಾರಿಕಾಂಬ ದೇವಿ ಪುನರ್ ಪ್ರತಿಷ್ಠೆ ನಡೆಯಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.