ಶಿವಮೊಗ್ಗ | ಶಿಕ್ಷಣ ಸಚಿವರ ತವರಲ್ಲೇ ಪುಟ್ಟ ಕಂದನ ಮೇಲೆ ಹಲ್ಲೆ; ಶಾಲೆ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವರೇ?

Date:

ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಅಮಾನುಷ ಘಟನೆ ನಡೆದಿದ್ದು, ಶಿವಮೊಗ್ಗ ಗ್ರಾಮಾಂತರ ಭಾಗದ ಕುಂಸಿಯ ಖಾಸಗಿ ಶಾಲೆಯೊಂದರಲ್ಲಿ ಎರಡೂವರೆ ವರ್ಷದ ಪುಟ್ಟ ಕಂದನ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಈ ಕುರಿತಾಗಿ ಶಿಕ್ಷಣ ಇಲಾಖೆಯಲ್ಲೇ ಮಾಹಿತಿ ಇಲ್ಲದಾಗಿದ್ದು, ಹಣದ ಹಪಾಹಪಿಗೆ ಖಾಸಗಿ ಶಾಲೆಗಳು ಕಾನೂನು ಉಲ್ಲಂಘನೆಗೂ ಸಿದ್ದವಾಗಿರುತ್ತಾರ? ಎಂಬುದು ಕಂಡುಬರುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಚಿಗುರು ಎಂಬ ಖಾಸಗಿ ಶಾಲಾ ಆಡಳಿತ ಮಂಡಳಿ ಎರಡುವರೆ ವರ್ಷದ ಮಗುವನ್ನು ದಾಖಲಾತಿ ಮಾಡಿಕೊಂಡಿದ್ದು, ಬಳಿಕ ಆ ಮಗುವಿಗೆ ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆ ಮಾಡಿರುವುದು ಕಂಡುಬಂದಿದೆ.

ಶಾಲೆಯಲ್ಲಿ ಮಗುವಿನ ಮೇಲೆ ಹಲ್ಲೆ ಮಾಡಿರುವುದಲ್ಲದೆ ಆಡಳಿತ ಮಂಡಳಿಯವರು ಪೋಷಕರಿಗೆ ಧಮ್ಕಿ ಹಾಕಿ, ʼಮುಂದೆ ನಿಮ್ಮ ಮಗುವಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಎಲ್ಲಿಯೂ ಕೂಡ ಈ ವಿಚಾರ ಬಾಯಿ ಬಿಡಬಾರದುʼ ಎಂದು ತಾಕಿತು ಮಾಡಿದ್ದಾರೆಂದು ಸ್ಥಳೀಯರೊಬ್ಬರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.

1001720062

ಘಟನೆಗೆ ಸಂಬಂಧಿಸಿದಂತಡ ಈ ದಿನ.ಕಾಮ್‌ ಶಿವಮೊಗ್ಗ ಡಿಡಿಪಿಐ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, ಪ್ರಕರಣವನ್ನು ಬಿಇಒ ಗಮನಕ್ಕೆ ತರುವಂತೆ ತಿಳಿಸಿದರು.

ಶಿವಮೊಗ್ಗ ಬಿಇಒ ರಮೇಶ್ ನಾಯ್ಕ್ ಮಾತನಾಡಿ, “ಮಗುವನ್ನು ಮುಟ್ಟಿದರೆ, ಮುಟ್ಟಿದ ಭಾಗದಲ್ಲಿ ಕೆಂಪಾಗತ್ತೆ. ಹಾಗಾಗಿ ಮಗುವಿನ ತೋಳನ್ನು ಹಿಡಿದ ಕಡೆ ಕೆಂಪಾಗಿದೆ” ಎಂದು ಮಾಹಿತಿ ನೀಡಿದರು.

ಎರಡೂವರೆ ವರ್ಷದ ಮಗುವನ್ನು ಶಾಲೆಗೆ ದಾಖಲಾತಿ ಮಾಡಿಕೊಂಡಿರುವುದು ಕಾನೂನು ಬಾಹಿರವಲ್ಲವೇ ಎಂಬ ಪ್ರಶ್ನೆಗೆ, ʼಇಂದು ಬಕ್ರೀದ್ ಹಬ್ಬದ ರಜೆ ಇರುವ ಕಾರಣ ಮಾಹಿತಿ ಪಡೆಯುವುದು ಕಷ್ಟ. ಶಾಲಾದಿನದಲ್ಲಿ ಘಟನೆ ಕುರಿತು ಸಂಪೂರ್ಣ ಮಾಹಿತಿ ಶೀಘ್ರದಲ್ಲಿ ನೀಡಲಾಗುವುದುʼ ಎಂದು ಉತ್ತರಿಸಿದರು.

1001720282

ಚಿಗುರು ಶಾಲೆಯ ಮುಖ್ಯ ಶಿಕ್ಷಕಿಯನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ ವರದಿಗಾರರ ಮೇಲೆ ರೆಗಾಡಿ, ದರ್ಪ ತೋರಿದ್ದು, ಬಳಿಕ ʼಘಟನೆ ಆಗೋಗಿದೆ ಇದನ್ನು ದೊಡ್ಡದಾಗಿ ನ್ಯೂಸ್ ಮಾಡಬೇಡಿ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ನಾವು ಪೋಷಕರಿಗೂ ತಿಳಿಸಿದ್ದೇವೆ” ಎಂದರು.

“ಮಗುವಿಗೆ ಎಷ್ಟು ವರ್ಷ ಎಂಬುದೇ ನನಗೆ ಮಾಹಿತಿ ಇಲ್ಲ. ರಜೆ ಮುಗಿದ ನಂತರ ಶಾಲೆಗೆ ಬಂದಾಗ ನೋಡುತ್ತೇನೆ” ಎಂದು ತಿಳಿಸಿದರು.

ಘಟನೆ ನಡೆದಿರುವುದಾಗಿ ಶಾಲೆ ಶಿಕ್ಷಕಿಯವರೇ ತಿಳಿಸುತ್ತಿರುವಾಗ, ಶಿವಮೊಗ್ಗ ಜಿಲ್ಲೆಯವರೇ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ತಮ್ಮ ತವರೂರಲ್ಲಿ ನಡೆದಿರುವ ಈ ರೀತಿಯ ಘಟನೆ ಕುರಿತು ಏನು ಪ್ರತಿಕ್ರಿಯೆ ನೀಡುತ್ತಾರೆ?. ಈ ಶಾಲೆ ಬಗ್ಗೆ ಏನು ಸೂಕ್ತ ಕ್ರಮ ತೆಗೆದುಕೊಳ್ಳಲ್ಲಿದ್ದಾರೆ. ಕಾನೂನು ಉಲ್ಲಂಘನೆ ಹಾಗೂ ಮಗುವಿನ ದೌರ್ಜನ್ಯ ಕುರಿತು ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಜರುಗಿಸಲಿದೆ ಎಂಬುದನ್ನು ಕಾದು ನೋಡಬೇಕು.

ಮಗುವಿಗೆ ಹಲ್ಲೆ

ಪೋಷಕರಿಗೆ ಸೂಕ್ತ ರಕ್ಷಣೆ ಹಾಗೂ ಧೈರ್ಯ ನೀಡಬೇಕು ಹಾಗೆಯೆ ಘಟನೆ ಆದಾಗ ಮಗುವಿನ ಜೀವಕ್ಕೆ ಏನಾದರೂ ಅಪಾಯವಾಗಿದ್ದಲ್ಲಿ ಯಾರು ಹೊಣೆಗಾರರಗುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ ಹಾಗೂ ಇಂತಃ ಶಾಲೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಾಗಿರುವುದು ಅತ್ಯವಶ್ಯವಾಗಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಅವೈಜ್ಞಾನಿಕ ಬರ ಪರಿಹಾರ ಖಂಡಿಸಿ ರೈತ ಸಂಘ ಪ್ರತಿಭಟನೆ

ರಾಜ್ಯ ಸರ್ಕಾರ ಘೋಷಿಸಿರುವ ಬರ ಪರಿಹಾರ ಅವೈಜ್ಞಾನಿಕವಾಗಿದ್ದು, ರೈತರ ಸಂಕಷ್ಟಕ್ಕೆ ತಕ್ಕ...

ಕಲಬುರಗಿ | ಭೀಕರ ಬರಕ್ಕೆ ಶಾಶ್ವತ ಪರಿಹಾರ ನೀಡಿ: ರೈತ ಸಂಘದ ಆಗ್ರಹ

ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ...

ರಾಯಚೂರು | ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಯುವಕ ಸಾವು

ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ...

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...