ಶಿವಮೊಗ್ಗದ ಬಸವೇಶ್ವರ ನಗರ ಪಶ್ಟಿಮದ ಮೆಹೋಜಿರಾವ್ ಲೇ ಔಟ್ ನಲ್ಲಿರುವ ಶಿವಾಲಯದಲ್ಲಿ ಭಾನುವಾರ ಮಧ್ಯರಾತ್ರಿ ಹುಂಡಿ ಕಳ್ಳತನವಾಗಿದ್ದು ವಿಷಯ ತಡವಾಗಿ ಬೆಳಕಿಗೆ ಬಂದಿದೆ.
- Advertisement -
ದೇವಾಲಯದ ಎರಡು ಬಾಗಿಲುಗಳನ್ನು ಮುರಿದು ಒಳ ಪ್ರವೇಶಿಸಿದ ಕಳ್ಳ ಹುಂಡಿಯನ್ನು ಒಡೆದಿದ್ದಿದ್ದಾನೆ.
ಆದರೆ ಹಿಂದಿನ ದಿನವೇ ಹುಂಡಿಯಲ್ಲಿದ್ದ ಹಣವನ್ನು ದೇವಸ್ಥಾನದ ಮುಖ್ಯಸ್ಥರು ತೆಗೆದಿದ್ದರು. ಬಂದದಾರಿಗೆ ಸುಂಕವಿಲ್ಲ ಎಂಬಂತೆ ಕಳ್ಳ ವಾಪಸ್ಸಾಗಿದ್ದಾನೆ. ಮಧ್ಯರಾತ್ರಿ 3 :30 ರ ಸುಮಾರಿಗೆ ಈ ಘಟನೆ ನಡೆದಿದ್ದು, ದೇವಲಾಯದ ಮುಖ್ಯಸ್ಥರು ವಿನೋಬ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಿಮಿಸದ ಪೊಲೀಸರು ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.





