ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಬಸವ ಮಂಟಪ ಕೃತಿಯ ಮೂಲಕ ಅವಮಾನ ಮಾಡಿದ ರವಿ ಹಂಜ್ ಹಾಗೂ ಪ್ರೇರಕರಾದ ವಿಶ್ವವಾಣಿ ಪತ್ರಿಕೆಯ ಸಂಪದಾಕ ವಿಶ್ವೇಶ್ವರ ಭಟ್ ರವರ ಮೇಲೆ ಸೂಕ್ತ ಕಾನೂನು ಕ್ರಮ ನೀಡುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗದಗ ಪಟ್ಟಣದ ಗಾಂಧಿ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ವೃತ್ತದ ಸುತ್ತ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿ, ಬಸವಣ್ಣನವರ ವಿರುದ್ಧ ಬರೆದ ರವಿ ಹಂಜ್ ಮತ್ತು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮತನಾಡಿದ ಮುಖಂಡರು, “ರವಿ ಹಂಜ್ ಮಹಾಶಯ ಬಸವಣ್ಣನವರು ಬಂಡಾರವನ್ನು ಕದ್ದರು ಎಂಬ ಆರೋಪವನ್ನು ಹೊರಿಸುತ್ತಾನೆ. ಇದಕ್ಕಿಂತ ಹೇಯ ದೃಷ್ಟಿಕೋನ ಇಲ್ಲ. ರಾಜ ಭಂಡಾರಕ್ಕೂ, ರಾಜ್ಯ ಭಂಡಾರಕ್ಕೂ ವ್ಯತ್ಯಾಸ ಗೊತ್ತಿರದ ಮಹಾಶಯ. ರಾಜ್ಯ ಭಂಡಾರ ಇರುವುದೇ ಪ್ರಜೆಗಳ ಹಿತಕ್ಕಾಗಿ. ಬಸವಣ್ಣ ಉಪಯೋಗಿಸಿದ್ದು, ಕಲ್ಯಾಣದ ರಾಜ್ಯ ಭಂಡಾರವನ್ನ, ಬಿಜ್ಜಳನಿಗೆ ಸಂಬಂಧಿಸಿದ್ದು ಅಲ್ಲ. ಕಲ್ಯಾಣ ರಾಜ್ಯದ ಪ್ರಜೆಗಳು ಶ್ರಮಿಸಿದ ಹಣ ಅದು. ಅದನ್ನ ಜನರಿಗಾಗಿ ಉಪಯೊಗಿಸುವುದು ಬಸವಣ್ಣನವರ ಕಾಯಕವಾಗಿತ್ತು. ಇದನ್ನು ಅಪಪ್ರಚಾರಗೊಳಿಸುವ ದುಷ್ಟರು ಪತ್ರಿಕೆ ರಾಜಕೀಯ, ಸಾಮಾಜಿಕ, ಧಾರ್ಮಿಕ ರಂಗಳಲ್ಲಿ ಒಳ-ಹೊರ ವೈರಿಗಳು ಪ್ರಜಾ ಧರ್ಮವನ್ನ, ಬಸವಣ್ಣ, ಬುದ್ಧ, ಬಸವ ಮಾಡಿದ ಕಾರಗಯವನ್ನು ಹತ್ತಿಕ್ಕುವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು” ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಸವರಾಜ ಸೂಳಿಬಾವಿ ಮಾತನಾಡಿ, “ಹಂಜ್ ಅಲ್ಲ ಹಂಜಮಠ ಅವನೊಳಗೆ ವಿಷ, ಧ್ವೇಷ, ಅಹಂ ತುಂಬಿಕೊಂಡಾಗ ಬಸವಣ್ಣನವರ ಸಮಾನತೆಯನ್ನು ಹೇಗೆ ಒಪ್ಪಕೊಳ್ಳಲು ಸಾಧ್ಯ. ನಾಲ್ಕೈದು ವರ್ಷಗಳಿಂದ ದ್ವೇಷದಲ್ಲಿ ಬರೆಯುತ್ತಿದ್ದಾನೆ. ಅಂತವನಿಗೆ ಸನ್ಮಾನ ಮಾಡುವವರ ಜಾಡನ್ನು ಅರಿಯಬೇಕಿದೆ. ರವಿ ಹಂಜ್ ಹಾಗೂ ಪ್ರಕಟಿಸಿದ ವಿಶ್ವವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ ಶಿಕ್ಷಿಸದರೇ ಸಾಲದು, ಇವರ ಹಿಂದಿರುವ ಎಲ್ಲ ಶಕ್ತಿಗಳನ್ನು ಶಿಕ್ಷಿಸಬೇಕು. ಶಿಕ್ಷಿಸಬೇಕಾದರೆ ಎಸ್ಐಟಿ ರಚಿಸಬೇಕು. ಎಂದು ಒತ್ತಾಯಿಸಿದರು.
ತೋಂಟದ ಸಿದ್ದರಾಮ ಸ್ವಾಮಿಗಳು ಮಾತನಾಡಿ, ಬಸವಣ್ಣನವರ ಬಗ್ಗೆ ಅವಹೇಳನ ಮಾಡಿದ ಬರೆದ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಕಠಿಣ ಶಿಕ್ಷೆ ಕೊಡಬೇಕು. ಈ ಶಿಕ್ಷೆಯಿಂದ ಭವಿಷ್ಯದಲ್ಲಿ ಯಾರು ಈ ರೀತಿ ಮಾಡಲು ಮುಂದೆ ಬರಬಾರದು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಇಳಕಲ್ಲ ಮಹಾಂತ ಸ್ವಾಮೀಗಳು, ಎಸ್.ಎನ್. ಬಳ್ಳಾರಿ, ಶೇಖನ್ನ ಕವಳಿಕಾಯಿ, ಎ.ವಾಯ್ ನವಲಗುಂದ, ಶರೀಫ್ ಬಿಳಿಯಲಿ, ಚಂದ್ರಶೇಖರ ವಸ್ತ್ರದ, ಗೌರಕ್ಕ ಬಡಿಗನ್ನವರ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.



