ತುಮಕೂರು | ಪೊಲೀಸ್ ಠಾಣೆಯಿಂದ ಕಳ್ಳ ಪರಾರಿ; ಪಿಎಸ್‌ಐ ಸೇರಿ ಐವರ ಅಮಾನತು

Date:

ಪೊಲೀಸ್ ಠಾಣೆಯಿಂದ ಕಳ್ಳತನ ಆರೋಪಿ ತಪ್ಪಿಸಿಕೊಂಡಿದ್ದ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಪಿಎಸ್‌ಐ ದೇವಿಕಾದೇವಿ ಸೇರಿದಂತೆ ಮೂವರು ಹೆಡ್ ಕಾನ್ಸ್‌ಟೆಬಲ್‌, ಓರ್ವ ಕಾನ್ಸ್‌ಟೆಬಲ್ ಸೇರಿ ಒಟ್ಟು ಐವರನ್ನು ಅಮಾನತು ಮಾಡಲಾಗಿದೆ. ಐವರನ್ನು ಅಮಾನತು ಮಾಡಿ ಎಸ್‌ಪಿ ಕೆ.ವಿ ಅಶೋಕ್ ಆದೇಶ ಹೊರಡಿಸಿದ್ದಾರೆ.

ಗುಬ್ಬಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದ ಆರೋಪಿ ಸೈಯದ್ ಖಾನ್ ನದಾಫ್ ಎಂಬಾತ ಸಿಆರ್ ನಂ. 13/2024ರ ಪ್ರಕರಣದಲ್ಲಿ ಆರೋಪಿಯಾಗಿದ್ದ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು ಬೆಂಗಳೂರಿನಲ್ಲಿ ಬಂಧಿಸಿ ವಿಚಾರಣೆಗೆ ಗುಬ್ಬಿಗೆ ಕರೆತಂದಿದ್ದು, ವಿಚಾರಣೆಗೆ ಒಳಪಡಿಸಲಾಗಿತ್ತು. ಕಳೆದ ಗುರುವಾರ ತಡರಾತ್ರಿ ಠಾಣೆಯಿಂದ ಪೊಲೀಸರ ಕಣ್ಣು ತಪ್ಪಿಸಿ ಆರೋಪಿ ಸೈಯದ್ ಪರಾರಿಯಾಗಿದ್ದ. ಈ ಹಿನ್ನಲೆಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಸಿಬ್ಬಂದಿ ಹಾಗೂ ಪಿಎಸ್‌ಐ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆ ಜಾಗ ಒತ್ತುವರಿ ತೆರವುಗೊಳಿಸಲು ಒತ್ತಾಯ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗುಬ್ಬಿ ಪೊಲೀಸ್ ಠಾಣೆಯಿಂದ ಪರಾರಿಯಾದ ಆರೋಪಿ ಹುಡುಕಾಟ ನಡೆಸಿದ್ದ ಪೊಲೀಸರು, ಮೂರು ತಂಡವಾಗಿ ತೀವ್ರ ಶೋಧ ನಡೆಸಿದ್ದ ವೇಳೆ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ತುಮಕೂರು ಬಳಿ ಆತನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೂರು ವರ್ಷದಲ್ಲಿ ಮೂವರು ಪಿಎಸ್‌ಐ ಅಮಾನತು

ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರತ ಪಿಎಸ್‌ಐ ಅಮಾನತುಗೊಂಡ ಮೂರನೇ ಪ್ರಕರಣ ಇದಾಗಿದೆ. ಕಳೆದ ಮೂರು ವರ್ಷದಲ್ಲಿ ಪಿಎಸ್‌ಐಗಳಾದ ಜ್ಞಾನಮೂರ್ತಿ, ನಟರಾಜ್ ಹಾಗೂ ದೇವಿಕಾದೇವಿ ಕರ್ತವ್ಯ ಲೋಪದಡಿ ಅಮಾನತುಗೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಹಾಳಾಗಿದೆ ಆರೋಗ್ಯ ಉಪಕೇಂದ್ರ; ಗ್ರಾಮಸ್ಥರಿಗೆ ಆರೋಗ್ಯ ಸೇವೆಯೂ ದೂರ

ಚಿಕ್ಕಂದವಾಡಿಯಲ್ಲಿ ಒಂದು ಪ್ರಾಥಮಿಕ ಆರೋಗ್ಯ ಉಪ ಕೇಂದ್ರವಿದೆ. ಆದರೆ, ಅದು ನಿಜಕ್ಕೂ...

ಗದಗ | ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಹೊಸ ಕಾನೂನು ಜಾರಿ: ಸಚಿವ ಎಚ್‌.ಕೆ ಪಾಟೀಲ್

ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಮಾರ್ಚ್ 4ರಂದು ರಾಜ್ಯಾದ್ಯಂತ ನೂತನ...

ವಿಜಯಪುರ | ಭಾರತೀಯರು ಸಹಬಾಳ್ವೆಯಿಂದ ಜೀವನ ಸಾಗಿಸಬೇಕು: ಡಾ. ಅಸಂಗ ವಾಂಖೇಡೆ

ಭಾರತೀಯರಾದ ಎಲ್ಲರೂ ಸಮಭಾವ ಸಹಬಾಳ್ವೆಯಿಂದ ಜೀವನವನ್ನು ಸಾಗಿಸಬೇಕು ಎಂದು ಅಮೇರಿಕದ ಆಕ್ಸ್‌ಫರ್ಡ್...

ಗದಗ | ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ

ಪ್ರತೀ ತಿಂಗಳು ಪಂಚ ಗ್ಯಾರಂಟಿಗಳಾದ ಅನ್ನಭಾಗ್ಯ ಯೋಜನೆಯಡಿ 12ಕೋಟಿ, ಗೃಹಲಕ್ಷ್ಮಿ ಯೋಜನೆಗೆ...