ಗುಬ್ಬಿ | ವರುಣನ ಕೃಪೆಗೆ ಕತ್ತೆಗಳ ಕಲ್ಯಾಣ : ಮಳೆಯ ನಿರೀಕ್ಷೆಯಲ್ಲಿ ರೈತರ ಅಪರೂಪದ ಆಚರಣೆ

Date:

 ಮುಂಗಾರು ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗುಬ್ಬಿ ತಾಲೂಕಿನ ಎರಡು ಗ್ರಾಮಗಳಲ್ಲಿ ರೈತರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಜನಪದ ನಂಬಿಕೆಯನ್ನು ಆಚರಣೆಗೆ ತಂದಿದ್ದಾರೆ. ಮಳೆಗಾಗಿ ವರುಣ ದೇವರನ್ನು ಒಲಿಸಲೆಂದು ಚೇಳೂರು ಹೋಬಳಿಯ ಕಚ್ಚೇನಹಳ್ಳಿ ಹಾಗೂ ಹಾಗಲವಾಡಿ ಹೋಬಳಿಯ ಯರಬಳ್ಳಿ ಗ್ರಾಮಸ್ಥರು ಕತ್ತೆಗಳ ಅದ್ದೂರಿ ಮದುವೆ ನೆರವೇರಿಸಿ ವಿಶೇಷವಾಗಿ ಪ್ರಾರ್ಥಿಸಿದ್ದಾರೆ.

- Advertisement -

ಮಳೆ ಇಲ್ಲದೆ ಬಿತ್ತನೆ ಕಾರ್ಯ ವಿಳಂಬವಾಗಿರುವುದು, ಈಗಾಗಲೇ ಬಿತ್ತಿದ ಬೆಳೆಗಳು ಒಣಗುವ ಆತಂಕ ಎದುರಾಗಿರುವುದು ರೈತರಲ್ಲಿ ತೀವ್ರ ಕಳವಳ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಂದು ವಾರದ ಹಿಂದೆಯೇ ಕತ್ತೆಗಳ ಮದುವೆಗೆ ಸಕಲ ಸಿದ್ಧತೆ ನಡೆಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಗಂಡು ಕತ್ತೆಗೆ ಹೊಸ ಪಂಚೆ ಹಾಗೂ ಟವೆಲ್, ಹೆಣ್ಣು ಕತ್ತೆಗೆ ಹಸಿರು ಸೀರೆ, ಬಳೆ ತೊಡಿಸಿ ವಧು-ವರರಂತೆ ಸಿಂಗಾರ ಮಾಡಲಾಯಿತು. ಬಾಸಿಂಗ ಕಟ್ಟಿ ಸಂಪ್ರದಾಯಬದ್ಧವಾಗಿ ಅಲಂಕರಿಸಿದ ಬಳಿಕ ಗ್ರಾಮದ ಹಿರಿಯರು ಎರಡು ಗುಂಪುಗಳಾಗಿ ವಿಭಜನೆಗೊಂಡು ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರ ಪಾತ್ರವಹಿಸಿ ಮದುವೆಯ ಎಲ್ಲ ಶಾಸ್ತ್ರಗಳನ್ನು ನೆರವೇರಿಸಿದರು.

ಮದುವೆ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಾಗಿತು. ಗ್ರಾಮವನ್ನು ಹಬ್ಬದ ವಾತಾವರಣದಲ್ಲಿ ಅಲಂಕರಿಸಲಾಗಿದ್ದು, ಚಪ್ಪರ, ಗಟ್ಟಿಮೇಳ, ಮಂಗಳ ವಾದ್ಯಗಳ ನಡುವೆ ಮದುವೆ ವಿಜೃಂಭಣೆಯಿಂದ ನಡೆಯಿತು. ಮಾಂಗಲ್ಯ ಧಾರಣೆ ನಡೆದ ಕ್ಷಣದಲ್ಲಿ ಗ್ರಾಮಸ್ಥರೆಲ್ಲ ಅಕ್ಷತೆ ಎರಚಿ ಶುಭ ಹಾರೈಸಿದರು. ಮಹಿಳೆಯರು ಆರತಿ ಬೆಳಗಿ ಸೋಬಾನೆ ಹಾಡುಗಳನ್ನು ಹಾಡಿದರೆ, ಮಕ್ಕಳು ಹಾಗೂ ಯುವಕರು ಕುಣಿದು ಸಂಭ್ರಮಿಸಿದರು.

ಮದುವೆಯ ನಂತರ ಗ್ರಾಮಸ್ಥರಿಗೆ ಸಾಮೂಹಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಊರಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಉತ್ತಮ ಮಳೆಯಾಗಿ ರೈತರ ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಲಾಯಿತು.

ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ, ಮದುವೆಯ ಎಲ್ಲ ವೆಚ್ಚವನ್ನು ಗ್ರಾಮದ ಎಲ್ಲಾ ಸಮುದಾಯದ ಜನರು ಸ್ವಯಂಪ್ರೇರಿತವಾಗಿ ಕಾಣಿಕೆ ಸಂಗ್ರಹಿಸಿ ಭರಿಸಿದ್ದು. ಮಳೆಯ ನಿರೀಕ್ಷೆಯಲ್ಲಿ ಗ್ರಾಮಸ್ಥರ ಒಗ್ಗಟ್ಟು ಹಾಗೂ ಜನಪದ ಸಂಪ್ರದಾಯದ ಮೇಲಿನ ನಂಬಿಕೆ ಈ ಆಚರಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಗ್ರಾಮಸ್ಥ ಮೇಲೇಗೌಡ ಮಾತನಾಡಿ, “ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಮ್ಮ ಹಿರಿಯರ ನಂಬಿಕೆಯನ್ನು ಮುಂದುವರಿಸಿದ್ದೇವೆ. ಊರಿನ ಎಲ್ಲರೂ ಚಂದಾ ಹಾಕಿ ಈ ಮದುವೆ ಮಾಡಿದ್ದೇವೆ. ಈಗ ವರುಣನ ಕೃಪೆಗಾಗಿ ಕಾದಿದ್ದೇವೆ” ಎಂದು ಹೇಳಿದರು.

ಹವಾಮಾನ ಮುನ್ಸೂಚನೆಗಳು, ವೈಜ್ಞಾನಿಕ ವಿಧಾನಗಳು ಒಂದು ಕಡೆ ಇದ್ದರೂ, ಪ್ರಕೃತಿಯ ಮೇಲಿನ ಭರವಸೆ ಮತ್ತು ಜನಪದ ಆಚರಣೆಗಳ ಮೇಲಿನ ನಂಬಿಕೆ ಇನ್ನೂ ಗ್ರಾಮೀಣ ಬದುಕಿನಲ್ಲಿ ಜೀವಂತವಾಗಿರುವುದಕ್ಕೆ ಗುಬ್ಬಿ ತಾಲೂಕಿನ ಈ ಕತ್ತೆಗಳ ಮದುವೆಯೇ ಮತ್ತೊಂದು ಉದಾಹರಣೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಪತ್ರಿಕೋದ್ಯಮದಲ್ಲಿ ಸತ್ಯನಿಷ್ಠೆಯೇ ಅಡಿಪಾಯ: ಕಾವ್ಯ ಎನ್

 ಪತ್ರಿಕೋದ್ಯಮದಲ್ಲಿ ಯಶಸ್ಸು ಸಾಧಿಸಲು ಭಾಷೆಯ ಮೇಲಿನ ಹಿಡಿತ, ಪರಿಣಾಮಕಾರಿ ಬರವಣಿಗೆ ಹಾಗೂ...

ತುಮಕೂರು | ಜಾಗತೀಕರಣದ ನಡುವೆ ಪ್ರಾದೇಶಿಕ ಅಸ್ಮಿತೆ ಉಳಿಸುವ ಶಕ್ತಿ ರಂಗಭೂಮಿಗಿದೆ : ರಂಗನಿರ್ದೇಶಕ ಲಕ್ಷ್ಮಣ್ ಕೆ.ಪಿ.

 ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಗಳು ಅಳಿಸಿಹೋಗುವ ಆತಂಕ...

ತುಮಕೂರು | ಸ್ಟಿಂಗ್ ಪ್ರಕರಣದ ಕುರಿತು ತನಿಖೆಯಾಗಲಿ : ಕೆ.ಎನ್. ರಾಜಣ್ಣ

 ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಅವರ...

ತುಮಕೂರು | ಸಚಿವ ಸೋಮಣ್ಣ ಭಾಷಣದ ವೇಳೆ ಚುನಾವಣಾ ಪ್ರಚಾರಕ್ಕೆ ಆಕ್ಷೇಪ; ಸಭೆಯಲ್ಲಿ ವಾಗ್ವಾದ

ತುಮಕೂರು ನಗರದ ಶ್ರೀ ಮುರುಘ ರಾಜೇಂದ್ರ ಸಭಾಂಗಣದಲ್ಲಿ ವೀರಶೈವ ಲಿಂಗಾಯತ  ಸಮಾಜದ...