ತುಮಕೂರು | ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಜು.26ರಂದು ‘ತುಮಕೂರು ಲೇಕ್ ರನ್–2026’ : ಪ್ರೊ. ರವಿ

Date:

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ತುಮಕೂರು ರನ್ನರ್ ಕ್ಲಬ್ ಟ್ರಸ್ಟ್ (ರಿ.) ವತಿಯಿಂದ ‘ತುಮಕೂರು ಲೇಕ್ ರನ್–2026’ ಅನ್ನು ಜುಲೈ 26ರಂದು (ಭಾನುವಾರ) ನಗರದ ಅಮಾನಿಕೆರೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಪ್ರೊ. ರವಿ ತಿಳಿಸಿದ್ದಾರೆ.

- Advertisement -

ತುಮಕೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಟಿ-ಶರ್ಟ್ ಹಾಗೂ ಫಿನಿಷರ್ ಮೆಡಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಪ್ರೋತ್ಸಾಹದಿಂದ ತುಮಕೂರನ್ನು ಶೈಕ್ಷಣಿಕ ನಗರಿಯ ಜೊತೆಗೆ ಕ್ರೀಡಾ ನಗರಿಯನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಅದರ ಭಾಗವಾಗಿ ನಾಲ್ಕನೇ ವರ್ಷದ ಈ ಓಟವನ್ನು ಆಯೋಜಿಸಲಾಗಿದ್ದು, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವುದು ಹಾಗೂ ಯುವಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವುದು ಕಾರ್ಯಕ್ರಮದ ಉದ್ದೇಶ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಅಮಾನಿಕೆರೆಯ ಸುತ್ತಲಿನ ವಾಕಿಂಗ್ ಪಾಥ್‌ನಲ್ಲಿ ನಡೆಯಲಿರುವ ಈ ಓಟಕ್ಕೆ ಈಗಾಗಲೇ ಸುಮಾರು 800 ಮಂದಿ ನೋಂದಾಯಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ 5.5 ಕಿ.ಮೀ. ದೂರದ ಓಟದಲ್ಲಿ ಯುವಕರು ಹಾಗೂ ವಾಕರ್ಸ್ ಭಾಗವಹಿಸಲಿದ್ದು, ನಂತರ ಮ್ಯಾರಥಾನ್ ಓಟಗಾರರಿಗಾಗಿ ಎರಡು ಸುತ್ತಿನ ವೇಗದ ಓಟ ಏರ್ಪಡಿಸಲಾಗಿದೆ. ನೋಂದಾಯಿತ ಸ್ಪರ್ಧಿಗಳಿಗೆ ಜುಲೈ 25ರಂದು ಬೆಳಗ್ಗೆ 10 ಗಂಟೆಯಿಂದ ಟಿ-ಶರ್ಟ್, ಚೆಸ್ಟ್ ನಂಬರ್ ಹಾಗೂ ಸ್ಪರ್ಧೆಯ ನಿಯಮಗಳನ್ನು ವಿತರಿಸಲಾಗುವುದು. ಜುಲೈ 26ರಂದು ಬೆಳಗ್ಗೆ 8 ಗಂಟೆಗೆ ಓಟಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರೊ. ರವಿ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎನ್.ಎಸ್. ಜಯಕುಮಾರ್, ಶ್ರೀ ಆಟೋ ಮತ್ತು ಟಾಟಾ ಮೋಟಾರ್ಸ್‌ನ ಶ್ರೀನಿವಾಸ್ ದಿವಾಕರ್, ದೀಕ್ಷಾ ಬಿಲ್ಡರ್ಸ್ ಅಂಡ್ ಡೆವಲಪರ್ಸ್‌ನ ಎ.ಎಸ್. ಕಾಂತರಾಜು, ಪೋರ್ಟಿಸ್ ಆಸ್ಪತ್ರೆಯ ಮಂಜುನಾಥ್, ಕೆಪಿಸಿಸಿ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೆ. ಮಲ್ಲಣ್ಣ ಸೇರಿದಂತೆ ಹಲವು ದಾನಿಗಳು ಹಾಗೂ ಕ್ರೀಡಾ ಸಂಘಟನೆಗಳು ಸಹಕಾರ ನೀಡಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎಂ.ಸಿ.ಸಿ. ಅಧ್ಯಕ್ಷ ಡಾ. ಎನ್.ಎಸ್. ಜಯಕುಮಾರ್, ಕಾರ್ಗಿಲ್ ವಿಜಯ ದಿವಸ್ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಗಳ ನೆರವಿಗೂ ಸಮಾಜ ಮುಂದಾಗಬೇಕು ಎಂದು ಹೇಳಿದರು. ಮಾಜಿ ಸೈನಿಕರು ಹಾಗೂ ಹುತಾತ್ಮರ ಕುಟುಂಬಗಳ ಮಾಹಿತಿ ನೀಡಿದರೆ, ಅವರ ಆರ್ಥಿಕ ನೆರವಿಗೆ ಟಿ.ಎಂ.ಸಿ.ಸಿ. ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎ.ಎಸ್. ಕಾಂತರಾಜು, ಶ್ರೀನಿವಾಸ್ ದಿವಾಕರ್, ಅನಿಲ್ ಪೂರ್ವೆಲ್, ಮಂಜುನಾಥ್ ಹಾಗೂ ಸತೀಶ್ ಕೆ. ಮಲ್ಲಣ್ಣ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ವೈಭವಕ್ಕೆ ತುಮಕೂರಿನ ಸಾಂಸ್ಕೃತಿಕ ಸ್ಪರ್ಶ

ನಾಡಿನ ಸುಭಿಕ್ಷ, ಜನರ ಶಾಂತಿ, ನೆಮ್ಮದಿ ಹಾಗೂ ಮಳೆ-ಬೆಳೆ ಸಮೃದ್ಧಿಗಾಗಿ ತಾಯಿ...

ತುಮಕೂರು ದಸರಾ: ಹತ್ತು ದಿನಗಳ ಸಾಂಸ್ಕೃತಿಕ ಸಂಭ್ರಮ ನಾಳೆಯಿಂದ : ಡಾ. ಜಿ. ಪರಮೇಶ್ವರ್

ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲೇ ದಸರಾ ನೋಡೋಣ ಎಂಬ ಮಾತು ಜನರ...

ತುಮಕೂರು | 10 ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ : 196 ಕ್ಷೇತ್ರಗಳಿಗೆ ಮೀಸಲಾತಿ

ತುಮಕೂರು ಗ್ರಾಮೀಣ ರಾಜಕಾರಣದ ಮುಂದಿನ ಹಂತಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬರುವ ತಾಲ್ಲೂಕು...

ತುಮಕೂರು | ಜಿಪಂ ಚುನಾವಣೆಯ 57 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ: ಸೆ.19ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ತುಮಕೂರು ಜಿಲ್ಲಾ ಪಂಚಾಯಿತಿ ಚುನಾವಣೆಯ ರಾಜಕೀಯ ಲೆಕ್ಕಾಚಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜಿಲ್ಲೆಯ...