ತುಮಕೂರು | ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿದೆ ತುಮಕೂರು ವಿವಿ : ಎಂ. ವೆಂಕಟೇಶ್ವರಲು

Date:

ಇಪ್ಪತ್ತೆರಡು ವರ್ಷಗಳನ್ನು ಪೂರೈಸಿರುವ ತುಮಕೂರು ವಿಶ್ವವಿದ್ಯಾನಿಲಯವು ಬೋಧನೆ, ಸಂಶೋಧನೆ, ವಿಸ್ತರಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. 91 ಸಂಯೋಜಿತ ಕಾಲೇಜುಗಳು, ಎರಡು ಘಟಕ ಕಾಲೇಜುಗಳು, 32 ಸ್ನಾತಕೋತ್ತರ ಕೋರ್ಸುಗಳು, 19 ಪಿಎಚ್‌ಡಿ ಅಧ್ಯಯನ ವಿಭಾಗಗಳು, ಹೊಸಕಾಲದ ಅಗತ್ಯಗಳಿಗೆ ಅನುಗುಣವಾದ ಡಿಪ್ಲೊಮಾ ಕೋರ್ಸುಗಳಿಂದ ಕೂಡಿರುವ ತುಮಕೂರು ವಿಶ್ವವಿದ್ಯಾನಿಲಯ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು

- Advertisement -

ತುಮಕೂರು ವಿವಿಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ 19 ನೇ ಘಟಿಕೋತ್ಸವ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 35,523 ವಿದ್ಯಾರ್ಥಿಗಳು ಸ್ನಾತಕ ಪದವಿಗಳಿಗೆ ಹಾಗೂ 3,742 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದಿದ್ದಾರೆ ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸಂಶೋಧನ ನೀತಿ: ಬೋಧಕವರ್ಗದಲ್ಲಿ ಸಂಶೋಧನ ಪ್ರವೃತ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು ತನ್ನದೇ ಆದ ಸಂಶೋಧನ ನೀತಿಯನ್ನು 2023ರಲ್ಲಿ ಜಾರಿಗೊಳಿಸಿದೆ. ಗುಣಮಟ್ಟದ ಸಂಶೋಧನ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು, ರಾಷ್ಟ್ರಯ ಮತ್ತು ಅಂತಾರಾಷ್ಟ್ರೀಯ  ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸುವುದು, ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ವಿದ್ವತ್ ಲೇಖನಗಳನ್ನು ಪ್ರಕಟಿಸುವುದು ಇತ್ಯಾದಿಗಳಿಗಾಗಿ ವಿಶ್ವವಿದ್ಯಾನಿಲಯವು ವಿಶೇಷ ಅನುದಾನಗಳನ್ನು ಘೋಷಿಸಿದೆ. ಉದಾಹರಣೆಗೆ, ದೇಶ-ವಿದೇಶಗಳಲ್ಲಿ ನಡೆಯುವ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸುವ ಬೋಧಕರ ಪ್ರಯಾಣ ವೆಚ್ಚದ ಶೇ. 50ನ್ನು ವಿವಿಯು ಭರಿಸುತ್ತದೆ; ಅಂತಾರಾಷ್ಟ್ರೀಯ ಪ್ರಕಾಶಕರಿಂದ ಪುಸ್ತಕ ಪ್ರಕಟಿಸಲ್ಪಟ್ಟರೆ ಅದಕ್ಕೆ ವಿವಿಯು ರೂ. 10,000ಗಳ ಬಹುಮಾನ ನೀಡುತ್ತದೆ; ‘ನೇಚರ್’ ಮತ್ತು ‘ಸೈನ್ಸ್’ನಂತಹ ಅತ್ಯುನ್ನತ ನಿಯತಕಾಲಿಕಗಳಲ್ಲಿ ಪ್ರಬಂಧ ಪ್ರಕಟಿಸಿದವರಿಗೆ ಒಂದು ಲಕ್ಷ ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡುವುದಾಗಿ ವಿವಿ ಪ್ರಕಟಿಸಿದೆ ಎಂದು ಹೇಳಿದರು

ಸಂಶೋಧನ ಯೋಜನೆಗಳು: ತುಮಕೂರು ವಿವಿ ಅಧ್ಯಾಪಕರು ಪ್ರತಿಷ್ಠಿತ ಸಂಸ್ಥೆಗಳಿಂದ ಸಂಶೋಧನ ಅನುದಾನಗಳನ್ನು ಪಡೆಯುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತೀಯ ಸಮಾಜ ವಿಜ್ಞಾನ ಸಂಶೋಧನ ಪರಿಷತ್ , ಭಾರತೀಯ ಜ್ಞಾನ ಪರಂಪರೆ ವಿಭಾಗ, ಕೇಂದ್ರ ಶಿಕ್ಷಣ ಸಚಿವಾಲಯ, ಕರ್ನಾಟಕ ಸರ್ಕಾರದ ವಿಜಿಎಸ್‌ಟಿ, ಡಾ. ದೇವರಾಜ ಅರಸು ಸಂಶೋಧನ ಕೇಂದ್ರ ಮುಂತಾದ ಸಂಸ್ಥೆಗಳು ರೂ. 2.13 ಕೋಟಿಗಳಷ್ಟು ಸಂಶೋಧನ ಅನುದಾನ ನೀಡಿವೆ. ನಮ್ಮ ಬೋಧಕರು ಈ ವರ್ಷ 179 ಸ್ಕೋಪಸ್ ಸೂಚ್ಯಂಕ ಹೊಂದಿರುವ ಹಾಗೂ 173 ವೆಬ್ ಆಫ್ ಸೈನ್ಸ್ ಸೂಚ್ಯಂಕ ಹೊಂದಿರುವ ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ 361 ಅಭ್ಯರ್ಥಿಗಳು ವಿವಿಯಲ್ಲಿ ಪಿಹೆಚ್.ಡಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು

ನೂತನ ಜ್ಞಾನಸಿರಿ ಕ್ಯಾಂಪಸ್: ವಿಶ್ವವಿದ್ಯಾನಿಲಯದ ಅನೇಕ ವರ್ಷಗಳ ಕನಸಾದ ಸ್ವತಂತ್ರ ಕ್ಯಾಂಪಸ್ ಬಿದರಕಟ್ಟೆಯಲ್ಲಿ ರೂಪುಗೊಂಡಿದೆ. 241 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್ ಅಂತಾರಾಷ್ಟ್ರೀಯ  ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದ್ದು, ಸುಸಜ್ಜಿತ ತರಗತಿ ಕೊಠಡಿಗಳು, ಬೋಧನೋಪಕರಣಗಳು, ಪ್ರಯೋಗಾಲಯ, ಸಭಾಂಗಣ, ಕಲಾಭವನ, ವಿದ್ಯಾರ್ಥಿನಿಲಯಗಳು, ಕೇಂದ್ರೀಕೃತ ಅಡುಗೆ ವ್ಯವಸ್ಥೆ, ಪರೀಕ್ಷಾಪೂರ್ವ ತರಬೇತಿ ಕೇಂದ್ರ, ಸೆಂಟ್ರಲ್ ಇನ್‌ಸ್ಟು ಮೆಂಟೇಶನ್ ಫೆಸಿಲಿಟಿ ಮುಂತಾದವುಗಳಿಂದ ಸಜ್ಜುಗೊಂಡಿದೆ. ಈಗಾಗಲೇ 13 ಸ್ನಾತಕೋತ್ತರ ವಿಭಾಗಗಳು, 1000 ವಿದ್ಯಾರ್ಥಿಗಳು ಹಾಗೂ 100 ಸಂಶೋಧನಾರ್ಥಿಗಳು ಹೊಸ ಕ್ಯಾಂಪಸ್‌ನಲ್ಲಿ ಕ್ರಿಯಾಶೀಲರಾಗಿದ್ದಾರೆ. ವಿಪ್ರೊ ಕಂಪೆನಿಯ ಸಿಎಸ್‌ಆರ್ ಉಪಕ್ರಮದಲ್ಲಿ ಸ್ಥಾಪನೆಯಾಗಿರುವ 20 ಎಕರೆ ವಿಸ್ತೀರ್ಣದ ಜೀವವೈವಿಧ್ಯ ಉದ್ಯಾನವನವು 600 ಪ್ರಭೇದಗಳ 4500 ವಿಶಿಷ್ಟ ಗಿಡಮರಗಳನ್ನು ಹೊಂದಿ ಕಂಗೊಳಿಸಲಿದೆ. ಉದ್ಯಾನವನ ನಿರ್ಮಾಣದ ಶೇ.50ರಷ್ಟು ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಬೆಂಗಳೂರಿನ ಹಾಲಧಾರಿ ಖೇತಿವಾಲಾ ಪ್ರತಿಷ್ಠಾನದ ಸಹಯೋಗದಲ್ಲಿ ಹೊಸ ಕ್ಯಾಂಪಸ್‌ನಲ್ಲಿ ಸ್ಥಳೀಯ ಕೃಷಿಕರಿಗಾಗಿ ‘ಖೇತಿಕೇಂದ್ರ’ವನ್ನು ಸ್ಥಾಪಿಸಲಾಗುತ್ತಿದೆ. ನೂತನ ಗ್ರಂಥಾಲಯ ಕಟ್ಟಡ, ಕೇಂದ್ರೀಕೃತ ಅಡುಗೆ ವ್ಯವಸ್ಥೆಗಳ ನಿರ್ಮಾಣಕಾರ್ಯ ಪೂರ್ಣಗೊಂಡಿದ್ದು ಸದ್ಯದಲ್ಲೇ ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು

ಸ್ನಾತಕೋತ್ತರ ಕೇಂದ್ರಗಳು: ಹೆಚ್ಚಿನ ಗ್ರಾಮೀಣ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶದಿಂದ ತಿಪಟೂರು (15 ಎಕರೆ) ಹಾಗೂ ಶಿರಾಗಳಲ್ಲಿ (28 ಎಕರೆ) ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಲಾಗಿದ್ದು ಅವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು

ಪಿಎಂ-ಉಷಾ ಅನುದಾನ: ಪಿಎಂ-ಉಷಾ ಯೋಜನೆಯಡಿ ವಿಶ್ವವಿದ್ಯಾನಿಲಯಕ್ಕೆ ರೂ. 20 ಕೋಟಿ ಅನುದಾನ ಮಂಜೂರಾಗಿದ್ದು, ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಎರಡನೆಯ ಶೈಕ್ಷಣಿಕ ಭವನದ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಇದಲ್ಲದೆ ನವೀಕರಣ ಕಾಮಗಾರಿಗಳು, ವೈಜ್ಞಾನಿಕ ಉಪಕರಣಗಳ ಖರೀದಿ, ವಿದ್ಯಾರ್ಥಿಗಳ ಸಾಮರ್ಥ್ಯವರ್ಧನಾ ಕಾರ್ಯಕ್ರಮಗಳನ್ನು ಇದೇ ಅನುದಾನದಡಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಮಧ್ಯಾಹ್ನದ ಭೋಜನ ಯೋಜನೆ: ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ 2023ರಲ್ಲಿ ತುಮಕೂರು ವಿವಿಯಲ್ಲಿ ಮಧ್ಯಾಹ್ನದ ಭೋಜನ ಯೋಜನೆಯನ್ನು ಆರಂಭಿಸಲಾಗಿದೆ. ದೇಶದ ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲೇ ಇದು ಪ್ರಪ್ರಥಮ ಪ್ರಯತ್ನ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಶ್ರೀ ಜಪಾನಂದಜೀಯವರ ಮಾರ್ಗದರ್ಶನದಲ್ಲಿ ಅನ್ನಪೂರ್ಣೇಶ್ವರಿ ಆಹಾರ ವಿತರಣ ಸಮಿತಿ ಹಾಗೂ ದಾನಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತಿರುವ ಈ ಯೋಜನೆಯ ಮೂಲಕ ಪ್ರತಿದಿನ 4000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ರಿಯಾಯಿತಿ ದರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸ್ವೀಕರಿಸುತ್ತಿದ್ದಾರೆ. ಯುನಿಸೆಫ್ ತಂಡವು ಈ ಯೋಜನೆಯನ್ನು ವೀಕ್ಷಿಸಿ ಇದು ಅತ್ಯಂತ ಅಪರೂಪದ ಕಾರ್ಯಕ್ರಮ ಎಂದು ಶ್ಲಾಘಿಸಿದೆ ಎಂದು ಹೇಳಿದರು

ಪ್ರೇರಣಾ ಉಪನ್ಯಾಸ: ಪಾಠ-ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ‘ಪ್ರೇರಣಾ ಉಪನ್ಯಾಸ ಮಾಲಿಕೆ’ಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರೂ, ವಿಶ್ರಾಂತ ಲೋಕಾಯುಕ್ತರೂ ಆದ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ, ಇನ್ಫೋಸಿಸ್ ಸಹಸಂಸ್ಥಾಪಕರಾದ ಶ್ರೀ ಎನ್. ಆರ್. ನಾರಾಯಣಮೂರ್ತಿ, ಪ್ರಸಿದ್ಧ ಶಿಕ್ಷಣತಜ್ಞರಾದ ಡಾ. ಗುರುರಾಜ ಕರ್ಜಗಿ, ಶ್ರೀ ಎಸ್. ಷಡಕ್ಷರಿ, ಡಾ. ವಿ. ಬಿ. ಆರತಿ, ಡಾ. ವೂಡೇ ಪಿ. ಕೃಷ್ಣ, ಡಾ. ಕೆ. ಪಿ. ಪುತ್ತೂರಾಯ, ಹಿರಿಯ ಐಪಿಎಸ್ ಅಧಿಕಾರಿ ಶ್ರೀ ಬಿ.ಆರ್. ರವಿಕಾಂತೇಗೌಡ, ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್, ಪ್ರಸಿದ್ಧ ಮನೋರೋಗ ತಜ್ಞ ಡಾ. ಸಿ. ಆರ್. ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ಡಾ. ಸಿ. ಸೋಮಶೇಖರ್, ಡಾ. ಚಿಂತಾಮಣಿ ಕೊಡ್ಲೆಕೆರೆ ಮೊದಲಾದ ಗಣ್ಯರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ ಎಂದರು.

ಉದ್ಯಮಶೀಲತೆಗೆ ಪ್ರೋತ್ಸಾಹ: ಯುವ ಉತ್ಸಾಹಿಗಳಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತುಮಕೂರು ವಿವಿಯಲ್ಲಿ ‘ತುಮಕೂರು ಇನ್ನೋವೇಶನ್ ಇನ್‌ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್’ಅನ್ನು ಸ್ಥಾಪಿಸಲಾಗಿದೆ. ಸ್ಟಾರ್ಟಪ್‌ಗಳ ಮೂಲಕ ತುಮಕೂರಿನ ಯುವಜನರ ವಿನೂತನ ಆವಿಷ್ಕಾರಗಳನ್ನು ಬೆಂಬಲಿಸುವ ಉದ್ದೇಶ ಹೊಂದಿರುವ ಈ ಸಂಸ್ಥೆಯು ತುಮಕೂರಿನ ಕಾಪ್ರಾಡ್ ಕಂಪೆನಿಯ ಉದಾರ ಧನಸಹಾಯದಿಂದ ಕಾರ್ಯರೂಪಕ್ಕೆ ಬಂದಿದೆ. ಇದರ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ಉದ್ದೇಶದಿಂದ ಅನಂತಪುರದ ಎಸ್‌ಕೆ ಯೂನಿವರ್ಸಿಟಿ, ಇಂಗ್ಲೆಂಡಿನ ಸೌತ್‌ವೇಲ್ಸ್ ಯೂನಿವರ್ಸಿಟಿ ಮುಂತಾದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಹೊಸ ಕೋರ್ಸುಗಳು: ಹೊಸ ಕಾಲದ ಅಗತ್ಯಗಳನ್ನು ಮನಗಂಡು ತುಮಕೂರು ವಿಶ್ವವಿದ್ಯಾನಿಲಯವು ಅನೇಕ ಹೊಸ ಕೋರ್ಸುಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಆರಂಭಿಸಿದೆ ಎಂದರು

ಸ್ನಾತಕೋತ್ತರ ಕಾನೂನು ಅಧ್ಯಯನ (ಎಲ್‌ಎಲ್‌ಎಂ), ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಫುಡ್ & ನ್ಯೂಟ್ರಿಶನ್, ಫುಡ್ ಟೆಕ್ನಾಲಜಿ, ಎಂಕಾಂ (ಫಿನ್‌ಟೆಕ್ & ಇನ್ಶೂರೆನ್ಸ್), ಎಂಬಿಎ ಫೈನಾನ್ಸ್, ಅಲ್ಲದೆ ಜೈನ ಅಧ್ಯಯನ, ಕೋಕೊನಟ್ ಪ್ಲಾಂಟೇಶನ್ ಮ್ಯಾನೇಜ್ಮೆಂಟ್ & ಪ್ರೋಸೆಸಿಂಗ್‌ಗಳಲ್ಲಿ ಪಿಜಿ ಡಿಪ್ಲೊಮಾ, ಎಪಿಗ್ರಫಿ ಡಿಪ್ಲೊಮಾ ಹಾಗೂ ಯೋಗ ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸಲಾಗಿದೆ.

ಕೌಶಲ್ಯಾಭಿವೃದ್ಧಿ: ತುಮಕೂರು ವಿಶ್ವವಿದ್ಯಾನಿಲಯವು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 4.0 (ಪಿಎಂಕೆವಿವೈ) ಯೋಜನೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಸರ್ಕಾರಿ ವಿಶ್ವವಿದ್ಯಾನಿಲಯವಾಗಿದೆ ಎಂದು ಹೇಳಿದರು

 ಜೂನಿಯರ್ ಸಾಫ್ಟ್ವೇರ್ ಇಂಜಿನಿಯರ್, ಡಿಜಿಟಲ್ ಮಾರ್ಕೆಟಿಂಗ್ ಎಕ್ಸೆಕ್ಯುಟಿವ್, ನೆಟ್ವರ್ಕಿಂಗ್ ಎಕ್ಸೆಕ್ಯುಟಿವ್ ಮೊದಲಾದ ಕೌಶಲ್ಯಾಧಾರಿತ ಕೋರ್ಸುಗಳನ್ನು ಇದರಡಿಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ.

ಉದ್ಯೋಗ ಮೇಳಗಳು: ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವುದು ತುಮಕೂರು ವಿವಿಯ ಆದ್ಯತೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ವಿವಿಯು ಅನೇಕ ಉದ್ಯೋಗ ಮೇಳಗಳನ್ನು ಆಯೋಜಿಸಿದ್ದು 9000 ಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ಭಾಗವಹಿಸಿದ್ದಾರೆ. 2025ರಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 125ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದು 1500 ಮಂದಿ ಉದ್ಯೋಗದ ಅವಕಾಶ ಪಡೆದಿದ್ದಾರೆ.

ಯೋಗ ತರಬೇತಿ: ಸಾರ್ವಜನಿಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ದೈಹಿಮ ಮತ್ತು ಮಾನಸಿಕ ಆರೋಗ್ಯವನ್ನು ಪೋಷಿಸುವುದಕ್ಕಾಗಿ ವಿಶ್ವವಿದ್ಯಾನಿಲಯದಲ್ಲಿ ಉಚಿತ ಯೋಗ ತರಗತಿಗಳನ್ನು ಹಾಗೂ ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸಲಾಗಿದೆ ಎಂದು ಕುಲಪತಿ ಎಂ. ವೆಂಕಟೇಶ್ವರಲು ಹೇಳಿದರು

ಪರಿಸರ ಸ್ನೇಹಿ ಕ್ಯಾಂಪಸ್: ಪರಿಸರ ಸ್ನೇಹಿ ಯೋಜನೆಯನ್ನು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಲಾಗಿದ್ದು, ಕ್ಯಾಂಪಸ್‌ನಲ್ಲಿ ಉತ್ಪಾದನೆಯಾಗುವ ನಿರುಪಯುಕ್ತ ವಸ್ತುಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಇದನ್ನು ವಿವಿಯ ಉದ್ಯಾನವನ ಹಾಗೂ ಜೀವವೈವಿಧ್ಯ ಪಾರ್ಕ್ಗಳಿಗಾಗಿ ಬಳಸಲಾಗುತ್ತಿದೆ ಎಂದರು

ಸಿಎಸ್‌ಆರ್ ಪ್ರಾಯೋಜನೆಗಳು:

ಕಾಪ್ರಾಡ್ ಇಂಡಸ್ಟ್ರೀಸ್  ಮಾಲೀಕರಾದ ಡಾ. ಹೆಚ್. ಜಿ. ಚಂದ್ರಶೇಖರ್ ಅವರು ರೂ. 1 ಕೋಟಿ ವೆಚ್ಚದ ತುಮಕೂರು ಇನ್ನೋವೇಶನ್ ಇನ್‌ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್ ಸ್ಥಾಪನೆಯನ್ನು ಪ್ರಾಯೋಜಿಸಿರುತ್ತಾರೆ.

ವಿಪ್ರೋ ಕಂಪೆನಿಯ ಪ್ರಾಯೋಜಕತ್ವದಲ್ಲಿ ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಜೀವವೈವಿಧ್ಯ ಪಾರ್ಕ್ ನಿರ್ಮಾಣ ನಡೆಯುತ್ತಿದೆ. ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ನೀರಿನ ಮರುಬಳಕೆ, ಅಂತರ್ಜಲ ಮರುಪೂರಣ, ಹಾಗೂ ಡಿಜಿಟಲ್ ಮೂಲಸೌಕರ್ಯ ವರ್ಧನೆಗಾಗಿ ಗೋಕಲ್‌ದಾಸ್ ಫೌಂಡೇಶನ್ ರೂ. 1 ಕೋಟಿಗೂ ಹೆಚ್ಚಿನ ಪ್ರಾಯೋಜಕತ್ವ ನೀಡಿದೆ ಎಂದರು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓಯಸಿಸ್ ಫೌಂಡೇಶನ್ ಸಹಯೋಗದಲ್ಲಿ ರೂ. 1 ಕೋಟಿಯಷ್ಟು ಪ್ರಾಯೋಜಕತ್ವದ ನೆರವಿನಿಂದ ಜ್ಞಾನಸಿರಿ ಕ್ಯಾಂಪಸ್‌ನ ಹಸಿರೀಕರಣ ಹಾಗೂ ಪರಿಸರ ಸ್ನೇಹಿ ಗ್ರೀನ್ ಫೆನ್ಸಿಂಗ್ ನಡೆಸಲಾಗಿದೆ. ಸುಜನ ಸಮಾಜ ಸಂಸ್ಥೆಯು ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ರೂ. 1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೇಂದ್ರೀಕೃತ ಪ್ರಯೋಗಾಲಯ ‘ಮಹಾನಂದಿ ಲ್ಯಾಬ್’ ಅನ್ನು ಸ್ಥಾಪಿಸಲಾಗಿದೆ ಎಂದರು

ಬೆಂಗಳೂರಿನ ಶ್ರೀ ಕೆ.ಆರ್. ಪ್ರದೀಪ್ ಅವರ ಪ್ರಾಯೋಜಕತ್ವದಲ್ಲಿ ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ರೂ. 1 ಕೋಟಿ ವೆಚ್ಚದ 700-ಆಸನಗಳುಳ್ಳ ಬಯಲುರಂಗಮಂದಿರವನ್ನು ನಿರ್ಮಿಸಲಾಗುತ್ತಿದೆ.

ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಡಾ. ಹೆಚ್. ಜಿ. ಚಂದ್ರಶೇಖರ್ ಅವರ ರೂ. 3.5 ಕೋಟಿ ಪ್ರಾಯೋಜಕತ್ವದಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸೆಂಟರ್ ಫಾರ್ ಡೆವ¯ಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿAಗ್ (ಸಿ-ಡಾಕ್) ಶೈಕ್ಷಣಿಕ ನೆರವು ನೀಡಲಿದೆ.

ಜ್ಞಾನಸಿರಿ ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಓಡಾಟಕ್ಕಾಗಿ 250 ಸೈಕಲ್‌ಗಳನ್ನು ದೇಣಿಗೆ ಮೂಲಕ ಪಡೆದು ‘ಗೋ ಗ್ರೀನ್ ಇನೀಶಿಯೇಟಿವ್’ ಅನ್ನು ಆರಂಭಿಸಲಾಗುತ್ತಿದೆ. ದಾನಿಗಳ ಸಹಾಯದಿಂದ ಜ್ಞಾನಸಿರಿ ಕ್ಯಾಂಪಸ್ ಆವರಣದಲ್ಲಿ ಸೌರಶಕ್ತಿಯ ಸಂಪೂರ್ಣ ಬಳಕೆಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು 

ಸುದ್ದಿಗೋಷ್ಠಿಯಲ್ಲಿ ಪರೀಕ್ಷಾಂಗ ಕುಲಸಚಿವ ಮೋಹನ್ ಇದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ವೈಭವಕ್ಕೆ ತುಮಕೂರಿನ ಸಾಂಸ್ಕೃತಿಕ ಸ್ಪರ್ಶ

ನಾಡಿನ ಸುಭಿಕ್ಷ, ಜನರ ಶಾಂತಿ, ನೆಮ್ಮದಿ ಹಾಗೂ ಮಳೆ-ಬೆಳೆ ಸಮೃದ್ಧಿಗಾಗಿ ತಾಯಿ...

ತುಮಕೂರು ದಸರಾ: ಹತ್ತು ದಿನಗಳ ಸಾಂಸ್ಕೃತಿಕ ಸಂಭ್ರಮ ನಾಳೆಯಿಂದ : ಡಾ. ಜಿ. ಪರಮೇಶ್ವರ್

ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲೇ ದಸರಾ ನೋಡೋಣ ಎಂಬ ಮಾತು ಜನರ...

ತುಮಕೂರು | 10 ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ : 196 ಕ್ಷೇತ್ರಗಳಿಗೆ ಮೀಸಲಾತಿ

ತುಮಕೂರು ಗ್ರಾಮೀಣ ರಾಜಕಾರಣದ ಮುಂದಿನ ಹಂತಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬರುವ ತಾಲ್ಲೂಕು...

ತುಮಕೂರು | ಜಿಪಂ ಚುನಾವಣೆಯ 57 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ: ಸೆ.19ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ತುಮಕೂರು ಜಿಲ್ಲಾ ಪಂಚಾಯಿತಿ ಚುನಾವಣೆಯ ರಾಜಕೀಯ ಲೆಕ್ಕಾಚಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜಿಲ್ಲೆಯ...