ತುಮಕೂರು | ನುಡಿದಂತೆ ನಡೆದ ಜಿಲ್ಲಾಡಳಿತ : ಮೆದುಳು ಕ್ಯಾನ್ಸರ್ ಬಾಲಕಿಗೆ ಆಧಾರ್ ಮತ್ತು ಬಿಪಿಎಲ್ ಕಾರ್ಡ್

Date:

 ಆಧಾರ್ ಕಾರ್ಡ್ ತಿದ್ದುಪಡಿ ತಾಂತ್ರಿಕ ಸಮಸ್ಯೆಯಿಂದ ಪರದಾಡಿದ್ದ ಮೆದುಳು ಕ್ಯಾನ್ಸರ್ ಪೀಡಿತ ಯೋಗಿತಾ ಎಂಬ ಬಾಲಕಿಯ ಚಿಂತಾಜನಕ ಸ್ಥಿತಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಾಲ್ಕು ದಿನದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಬಿಪಿಎಲ್ ಕಾರ್ಡ್ ಗೆ ಬಾಲಕಿ ಹೆಸರು ಸೇರ್ಪಡೆ ಮಾಡಿ ಜಿಲ್ಲಾ ಮಂತ್ರಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಹಸ್ತದಿಂದ ಬಾಲಕಿಯ ಕುಟುಂಬಕ್ಕೆ ವಿತರಣೆ ಮಾಡಿದರು.

- Advertisement -

ಕಳೆದ ವಾರದಲ್ಲಿ ಮೆದುಳು ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಗುಬ್ಬಿ ಪಟ್ಟಣದ ಸಮೀಪದ ಜಿ.ಹರಿವೇಸಂದ್ರ ಗ್ರಾಮದ ಮಂಜುನಾಥ್ ನೇತ್ರಾವತಿ ದಂಪತಿಯ ಹತ್ತು ವರ್ಷದ ಮಗಳು ಯೋಗಿತಾ ಐದು ತಿಂಗಳ ಹಿಂದೆ ಜ್ವರದಿಂದ ಬಳಲಿ ನಂತರ ಕೈ ಕಾಲು ಸ್ವಾಧೀನ ಇಲ್ಲದಂತಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿದಾಗ ಮೆದುಳು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ವಿಚಾರ ತಿಳಿದು ಆಘಾತಕ್ಕೆ ಒಳಗಾಗಿದ್ದರು. ಬಡ ಕುಟುಂಬ ಮಗಳ ಚಿಕಿತ್ಸೆಗೆ ತೆರಳಿದಾಗ ಬಾಲಕಿಯ ಆಧಾರ್ ಕಾರ್ಡ್ ಸರಿ ಇಲ್ಲದ ಬಗ್ಗೆ ತಿಳಿದು ತಿದ್ದುಪಡಿಗೆ ನಿರಂತರ ಪ್ರಯತ್ನ ಪಟ್ಟಿದ್ದರೂ ಪ್ರಯೋಜನ ಆಗಿರಲಿಲ್ಲ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಈ ವಿಷಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಸ್ಪಂದಿಸಿದ ಜಿಲ್ಲಾಡಳಿತ ಉಪವಿಭಾಗಾಧಿಕಾರಿಗಳು ಬಾಲಕಿಯ ಮನೆಗೆ ಸಿಬ್ಬಂದಿಗಳ ಜೊತೆ ಬಂದು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವಲ್ಲಿ ಯಶಸ್ವಿಯಾದರು. ನಂತರ ಬಿಪಿಎಲ್ ಕಾರ್ಡ್ ಗೆ ಬಾಲಕಿ ಹೆಸರು ಸೇರ್ಪಡೆ ಮಾಡಿದ ತಾಲ್ಲೂಕು ಆಡಳಿತ ಪಡಿತರ ಚೀಟಿ ಸಿದ್ಧಪಡಿಸಿ ಜಿಲ್ಲಾ ಮಂತ್ರಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರ ಮಾಡಿದರು.

ಸ್ಥಳದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ, ತಹಶೀಲ್ದಾರ್ ಆರತಿ.ಬಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ದೇಶದ ವಿವಿಧೆಡೆ ಪೊಲೀಸ್ ದಬ್ಬಾಳಿಕೆ, ನಾಯಕರ ಬಂಧನ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ

 ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ನಡೆಯುತ್ತಿದೆ ಎನ್ನಲಾದ ಪೊಲೀಸ್ ದಬ್ಬಾಳಿಕೆ...

ಮೈಸೂರು ದಸರಾ ವೈಭವಕ್ಕೆ ತುಮಕೂರಿನ ಸಾಂಸ್ಕೃತಿಕ ಸ್ಪರ್ಶ

ನಾಡಿನ ಸುಭಿಕ್ಷ, ಜನರ ಶಾಂತಿ, ನೆಮ್ಮದಿ ಹಾಗೂ ಮಳೆ-ಬೆಳೆ ಸಮೃದ್ಧಿಗಾಗಿ ತಾಯಿ...

ಗುಬ್ಬಿ | ಕೆರೆಗೆ ಬಿದ್ದು 14 ವರ್ಷದ ಬಾಲಕ ಸಾವು: ದನಗಳಿಗೆ ನೀರು ಕುಡಿಸಲು ಹೋದಾಗ ದುರ್ಘಟನೆ

ದನಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ 14 ವರ್ಷದ ಬಾಲಕನೊಬ್ಬ ಕಾಲು...

ತುಮಕೂರು ದಸರಾ: ಹತ್ತು ದಿನಗಳ ಸಾಂಸ್ಕೃತಿಕ ಸಂಭ್ರಮ ನಾಳೆಯಿಂದ : ಡಾ. ಜಿ. ಪರಮೇಶ್ವರ್

ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲೇ ದಸರಾ ನೋಡೋಣ ಎಂಬ ಮಾತು ಜನರ...