ನಾವೂ ಹಿಂದುಗಳೇ, ಹಿಂದುತ್ವ ವಾದಿಗಳೇ: ಸಚಿವ ಕೆ.ಎನ್ ರಾಜಣ್ಣ

Date:

ಶ್ರೀರಾಮ ಮಂದಿರ ಉದ್ಘಾಟನೆಯ ಆಹ್ವಾನ ನೀಡುವುದರಲ್ಲಿ ತಾರತಮ್ಯ ಆಗಿದೆ. ನಿಜಕ್ಕೂ ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಶ್ರೀರಾಮನನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ. ನಾವೂ ಹಿಂದುಗಳೇ, ಹಿಂದುತ್ವ ವಾದಿಗಳೇ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.

- Advertisement -

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಿಂದೆ ಅಂಬೇಡ್ಕರ್ ಹಿಂದು ಧರ್ಮ ತ್ಯಜಿಸುವಂತೆ ಮಾಡಲಾಗಿತ್ತು. ಈಗ ದೇಶದಲ್ಲಿ ಆದೇ ರೀತಿಯ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಬಿಜೆಪಿಯವರಿಗೆ ಯಾರು ಹಿಂದುತ್ವದ ಪವರ್ ಆಫ್ ಅಟಾರ್ನಿ ಕೊಟ್ಟಿಲ್ಲ. ಆದರೆ, ಬಿಜೆಪಿ ಅನಗತ್ಯವಾಗಿ ಈ ವಿಚಾರವಾಗಿ ಗೊಂದಲ ಸೃಷ್ಟಿಯಾಗುತ್ತಿದೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ರಾಜಕಾರಣಕೋಸ್ಕರ, ಓಟಿಗೋಸ್ಕರ ಕಾಂಗ್ರೆಸ್ ಸರ್ಕಾರವನ್ನು ಹಿಂದು ವಿರೋಧಿ ಸರ್ಕಾರವೆಂದು ಹೇಳುವುದನ್ನು ನಾವು ಖಂಡಿಸಬೇಕು. ಹಿಂದುತ್ವವನ್ನು ಬಂಡವಾಳ ಮಾಡಿಕೊಂಡು ಬೇರೆ ಹಿಂದುಗಳಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ರೀತಿಯ ಹಿಂದುತ್ವದ ದುರುಪಯೋಗವನ್ನು ನೋಡಿಯೇ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಹೋಗಿದ್ದು” ಎಂದರು.

“ಹುಬ್ಬಳ್ಳಿ ಕರಸೇವಕನ ಬಂಧಿಸಲು ಆತನ ಮೇಲಿನ ಪ್ರಕರಣಗಳು ಕಾರಣ. ಹದಿಮೂರು ಕೇಸ್‌ಗಳು ಆತನ ಮೇಲಿದೆ. ಅವನೊಬ್ಬನನ್ನು ಬಂಧಿಸಿದ ತಕ್ಷಣ ಎಲ್ಲ ಕರಾಸೇವಕರನ್ನು ಬಂಧಿಸುತ್ತಾರೆ ಎನ್ನುವುದು ಸರಿ ಅಲ್ಲ. ಪೆಂಡಿಂಗ್ ಕೇಸುಗಳನ್ನು ಪರಿಶೀಲನೆ ಮಾಡುವ ವೇಳೆ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಹಿಂದೂಗಳೊಬ್ಬರಿಂದಲೇ ದೇಶ ಕಟ್ಟಲು ಆಗುವುದಿಲ್ಲ. ಎಲ್ಲ ಧರ್ಮದ ಜನರನ್ನ ಸೇರಿಸಿಕೊಂಡು ದೇಶ ಕಟ್ಟಿರುವುದು. ಈಗ ಪ್ರಸ್ತುತ ಇರುವ ರಾಕೇಟ್ ಟೆಕ್ನಾಲಜಿ ಟಿಪ್ಪು ಟೆಕ್ನಾಲಜಿ ಅಂತಾನೆ ಫೇಮಸ್ ಆಗಿದೆ. ಟಿಪ್ಪುವಿನಿಂದಾಗಿ ರಾಕೇಟ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದೇವೆ. ಅಬ್ದುಲ್ ಕಲಾಂ ಕೂಡ ರಾಕೇಟ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದಾರೆ” ಎಂದರು.

“ಗಾಂಧೀಜಿ ಕೊಂದ ಗೋಡ್ಸೆನೂ ಕೂಡ ಹಿಂದುನೇ. ಶ್ರೀರಾಮನ ಜಪ ಮಾಡುತ್ತಿದ್ದ ಗಾಂಧಿನ ಗೋಡ್ಸೆ ಕೊಂದ.
ಮೋದಿ ಹೋಗಿ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಮಾಡಿದ ತಕ್ಷಣ ನಾವೆಲ್ಲ ನಮ್ಮ ಊರಿನ ರಾಮನನ್ನು ಬಿಟ್ಟು ಅಲ್ಲಿಗೆ ಹೋಗಲ್ಲ. ಬಿಜೆಪಿಯವರ ಶ್ರೀರಾಮ ಎಂದು ಬರೆದುಕೊಳ್ಳಲಿ ನಮಗೇನೂ ಅಡ್ಡಿಯಿಲ್ಲ.
ಶ್ರೀ ರಾಮನನ್ನು ಪರಿಚಯಿಸಿದಂತಹ ವಾಲ್ಮೀಕಿಯ ದೇವಸ್ಥಾನ ಕಟ್ಟಬೇಕೆಂದು ಒತ್ತಾಯ ಮಾಡುತ್ತೇವೆ.
ಈ ಒತ್ತಾಯಕ್ಕೆ ಮೋದಿ ಅವರು ಸ್ಪಂದಿಸಬೇಕು. ಇಲ್ಲದಿದ್ದರೆ ಇಡೀ ದೇಶದಲ್ಲಿ ಹೋರಾಟ ಮಾಡುತ್ತೇವೆ” ಎಂದರು.

“ಗೋಡ್ಸೆ ಹಿಂದೂಗಳು ಮತ್ತು ಮಹಾತ್ಮ ಗಾಂಧಿ ಹಿಂದೂಗಳು ಎಂದು ನಾವು ಬದಲಾವಣೆ ಮಾಡಬೇಕಾಗುತ್ತದೆ.
ಮಹಾತ್ಮ ಗಾಂಧಿ ಅವರ ಪ್ರತಿಪಾದನೆಯ ಹಿಂದುತ್ವ ಬೇರೆ. ಗೋಡ್ಸೆ ಹಿಂದುತ್ವ ಬೇರೆ. ನಾವೆಲ್ಲ ಮಹಾತ್ಮ ಗಾಂಧಿ ಅವರ ಹಿಂದುತ್ವದ ಪ್ರತಿಪಾದಕರು” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಕೋಲಾರ | ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರ ಆಪ್ತ ಸಹಾಯಕರಿಗೆ ಮನವಿ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು, ತಡೆಹಿಡಿದಿರುವ ಕನಿಷ್ಠ ವೇತನ ಜಾರಿಗೊಳಿಸುವುದು, ಗುತ್ತಿಗೆ...