ಉಡುಪಿ | ನಗರ ಕುಟುಂಬ ಕಲ್ಯಾಣ ಕೇಂದ್ರ ಸ್ಥಗಿತ; ಪುನರಾರಂಭಿಸಲು ಆಗ್ರಹ

Date:

ಉಡುಪಿ ನಗರದ ಕುಕ್ಕಿಕಟ್ಟೆ ಡಯಾನ ಚಿತ್ರಮಂದಿರದ ಎದುರು, ಸುಮಾರು ಇಪ್ಪತ್ತು ವರ್ಷಗಳಿಂದ ಸೇವಾ ನಿರತವಾಗಿದ್ದ ನಗರ ಕುಟುಂಬ ಕಲ್ಯಾಣ ಕೇಂದ್ರವು ಸೇವೆಯನ್ನು ಸ್ಥಗಿತಗೊಳಿಸಿದ್ದು, ಬಾಗಿಲಿಗೆ ಬೀಗ ಜಡಿಯಲಾಗಿದೆ. ಕಾರಣ ಎನೆಂದು ತಿಳಿದುಬಂದಿಲ್ಲ.

- Advertisement -

ಪರಿಸರದ ಸುತ್ತಮುತ್ತಲಿನ ನಾಗರಿಕರು ಚಿಕಿತ್ಸೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಶಿಶುಗಳಿಗೆ ಲಸಿಕೆ, ಚುಚ್ಚುಮದ್ದು ಹಾಗೂ ಗರ್ಭಿಣಿಯರಿಗೆ ತಪಾಸಣೆ, ಅಗತ್ಯ ಚಿಕಿತ್ಸೆಗಳು ಕ್ಲಪ್ತ ಸಮಯದಲ್ಲಿ ದೊರೆಯುತಿತ್ತು. ಅಲ್ಲದೆ ಜ್ವರಬಾಧೆ, ಶೀತ, ಕೆಮ್ಮು‌ ಮೊದಲಾದ ವ್ಯಾಧಿಗಳಿಂದ ಬಳಲುವ ರೋಗಿಗಳು ಚಿಕಿತ್ಸೆ ಪಡೆಯಲು ಅವಕಾಶವಿತ್ತು. ಎದುರಾಗಿರುವ‌ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹಣತೆತ್ತು ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಬಡ ಕುಟುಂಬಗಳ ಶಿಶುಗಳಿಗೆ, ಗರ್ಭಿಣಿಯರಿಗೆ, ರೋಗಿಗಳಿಗೆ ಎದುರಾಗಿದೆ. ಸರಕಾರದ ಉಚಿತ ಚಿಕಿತ್ಸಾ ಸೇವೆಯನ್ನು ಪಡೆಯಲು, ನಾಗರೀಕ ಸಮಾಜವು ವಂಚಿತವಾಗದಂತೆ ತಡೆಯಬೇಕಾಗಿದ್ದು ಆಡಳಿತ ವ್ಯವಸ್ಥೆಗಳ ಕರ್ತವ್ಯವಾಗಿದೆ. ತಕ್ಷಣ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯು, ಕರ್ತವ್ಯ ನಿಲ್ಲಿಸಿರುವ ಕುಕ್ಕಿಕಟ್ಟೆಯ ನಗರ ಕುಟುಂಬ ಕಲ್ಯಾಣ ಕೇಂದ್ರವನ್ನು ಪುನಾರಂಭಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಗಾಂಜಾ ಸೇವನೆ ದೃಢ: 26 ವರ್ಷದ ಯುವಕನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿರುವ ಆರೋಪದ ಮೇರೆಗೆ 26 ವರ್ಷದ...

ಉಡುಪಿ | ನಿವೇಶನ ರಹಿತರು ಶೀಘ್ರ ಅರ್ಜಿ ಸಲ್ಲಿಸಿ : ನವೀನ್ ಸಾಲಿಯಾನ್ ಮನವಿ

ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ನಿವೇಶನವಿಲ್ಲದೆ ವಾಸಿಸುತ್ತಿರುವ...

ಹಾವೇರಿ | ರೈತರ ಆಕ್ರೋಶ ಸ್ಫೋಟ: ಡಿಸಿ ಕಚೇರಿಗೆ ದಿಗ್ಬಂಧನ, ಕಬ್ಬಿನ ದರ ಘೋಷಣೆ ಆಗುವವರೆಗೂ ಗೇಟ್ ತೆರೆಯಲ್ಲ!

ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಹಾವೇರಿಯಲ್ಲಿ ರೈತರ ಆಕ್ರೋಶ ತೀವ್ರಗೊಂಡಿದ್ದು, ಜಿಲ್ಲಾಧಿಕಾರಿ...