ಚಿಕ್ಕಬಳ್ಳಾಪುರ : ಕೆಪಿಸಿಸಿ ಖಜಾಂಚಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಿ. ಹೆಚ್ ನಾಗರಾಜ್

Date:

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ದಶಕಗಳ ಕಾಲದಿಂದ ಕಟ್ಟಿ ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಜಿ.ಹೆಚ್.ನಾಗರಾಜ್ ರವರ ಪಾತ್ರ ಹೆಚ್ಚಿನ ಮಹತ್ವ ಪಡೆದಿದ್ದು ಅವರು ಪಕ್ಷದ ಹಿರಿಯ ನಾಯಕರಾಗಿದ್ದು ಈ ದಿನ ಅವರು ಕೆಪಿಸಿಸಿ ಖಜಾಂಚಿ ಆಗಿ ಅಧಿಕಾರ ತೆಗೆದುಕೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.

ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಜಿ.ಹೆಚ್.ನಾಗರಾಜ್ ರವರಿಗೆ ಖಜಾಂಚಿಯಾಗಿ ಅಧಿಕಾರವನ್ನು ಹಸ್ತಾಂತರಿಸಿ ಮಾತನಾಡಿದರು.
ಜಿ.ಹೆಚ್.ನಾಗರಾಜ್ ರವರು ಹಿರಿಯ ರಾಜಕಾರಣಿ ಜಾಲಪ್ಪ ರವರ ಸಮೀಪದ ಬಂದುವಾಗಿದ್ದು ಇವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿ ಬೆಳೆಸುವರು ಎಂಬ ವಿಶ್ವಾಸ ನನಗಿದೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ನಿಶಾನೆಯಾಗಿ ಅವರಿಗೆ ಲೆಕ್ಕಪತ್ರವನ್ನು ಹಸ್ತಾಂತರಿಸಿ ಮಾತನಾಡಿ ಶುಭ ಹಾರೈಸಿದರು.

ಕೆಪಿಸಿಸಿ ಖಜಾಂಚಿಯಾಗಿ ನೂತನವಾಗಿ ಅಧಿಕಾರ ಹಸ್ತಾಂತರ ಪಡೆದ ನಂತರ ಮಾತನಾಡಿದ ಜಿ.ಹೆಚ್.ನಾಗರಾಜ್ ರವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಯುತವಾಗಿ ಸಂಘಟನಾತ್ಮಕವಾಗಿ ಬೇರು ಮಟ್ಟದಿಂದ ಕಟ್ಟಲು ನಾನು ಹಗಲಿರುಳು ದುಡಿಯುತ್ತೇನೆ ನನ್ನ ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಇದಕ್ಕೆ ಎಲ್ಲರೂ ಸಹಕಾರಬೇಕು ಎಂದು

ಕೆಪಿಸಿಸಿ ನೂತನ ಖಜಾಂಚಿಯಾಗಿ ಪದಗ್ರಹಣ ಮಾಡಿ ತಿಳಿಸಿದರು. ಈ ಸಮಾರಂಭದಲ್ಲಿ ರಾಜ್ಯ ಸರ್ಕಾರದ ವಸತಿ ಇಲಾಖೆ ಸಚಿವ ಜಮೀರ್ ಅಹಮದ್,ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ ಹಾಗೂ ನಂದಿ ಅಂಜನಪ್ಪ ಮಾಜಿ ಸಚಿವರಾದ ಶಿವಶಂಕರ ರೆಡ್ಡಿ ಕೆ.ಎನ್. ರಾಜಣ್ಣ ಮತ್ತಿತರರು ಮಾತನಾಡಿದರು.

ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಜೆ.ಹೆಚ್.ಎನ್ ಫೌಂಡೇಶನ್ ಅಧ್ಯಕ್ಷ ಎನ್.ವಿನಯ್ ಶಾಮ್ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಫಿ ಉಲ್ಲಾ, ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷ ಮೊಹಮ್ಮದ್ ದಾವೂದ್, ನಗರಸಭೆ ಮಾಜಿ ಸದಸ್ಯರುಗಳಾದ ಅಂಬರೀಶ್ ನರಸಿಂಹಮೂರ್ತಿ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಕುಬೇರ ಅಚ್ಚು, ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಡ್ಡಗಲ್ ಶ್ರೀಧರ್, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕೊಡೇಶ್ ವೆಂಕಟೇಶ್, ಮುದಾಸಿರ್ ದಾವೂದ್ ಹೆಚ್. ಎಸ್. ಗಾರ್ಡನ್ ಡಾನ್ಸ್ ಶ್ರೀನಿವಾಸ್, ಮಂಡಿಕಲ್ ಬ್ಲಾಕ್ ಮಾಜಿ ಅಧ್ಯಕ್ಷ ಲಾಯರ್ ನಾರಾಯಣಸ್ವಾಮಿ, ಕುಪೇಂದ್ರ ವಕೀಲ ನಾಗೇಶ್, ಎಸ್. ಎಂ. ಜಗದೀಶ್, ಮರಸನಹಳ್ಳಿ ಪ್ರಕಾಶ್, ಮಂಗಳಪ್ರಕಾಶ್ ಪಟ್ರೇನಹಳ್ಳಿ ಕೃಷ್ಣ, ಸತೀಶ್ ಒಳಗೊಂಡಂತೆ ಮತ್ತಿತರರು ಹಾಜರಿದ್ದು ನೂತನ ಕೆಪಿಸಿಸಿ ಖಜಾಂಚಿ ಜಿ.ಹೆಚ್. ನಾಗರಾಜ್ ರವರನ್ನು ಅಭಿನಂದಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಎಸ್‌ಸಿಪಿ–ಟಿಎಸ್‌ಪಿ ಯೋಜನೆಗಳ ಪ್ರಗತಿಗೆ ಚುರುಕು ನೀಡಿ; ಜೆ.ಟಿ.ಪಾಟೀಲ

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ...

ಉಡುಪಿ | ಕೊರಗರ ಭೂಮಿ ಸಮಸ್ಯೆ ಪರಿಹಾರಕ್ಕೆ ಆಗ್ರಹ: ಆದಿವಾಸಿ ಭವನ ದುರಸ್ತಿಗೂ ಒತ್ತಾಯ

ಉಡುಪಿಯ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಉಡುಪಿ ಮತ್ತು ಬ್ರಹ್ಮಾವರ ತಾಲೂಕು...

ಕುಮಟಾ | ರೈಲು ನಿಲ್ದಾಣದಲ್ಲಿ ಮೊಬೈಲ್‌ ಕಳ್ಳತನ: ಕೇರಳದ ವ್ಯಕ್ತಿಯಿಂದ ದೂರು

ಗೋವಾದಿಂದ ಕೇರಳಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಫೋನ್‌ನ್ನು ಕುಮಟಾ...

ಉಡುಪಿ | ಕಾರು–ಬೈಕ್ ಡಿಕ್ಕಿ: ತೀರ್ಥಹಳ್ಳಿಯ 35 ವರ್ಷದ ಯುವಕ ಸ್ಥಳದಲ್ಲೇ ಸಾವು

ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್...