ಈ ನೆಲದ ತಳ ಸಮುದಾಯಗಳ ಪರವಾದ ಎಲ್ಲ ಜೀವಪರ ಧ್ವನಿಗಳನ್ನು ಒಂದಾಗಿಸಿಕೊಂಡು, ತನ್ನ ಓದು, ವಿವೇಕ ಮತ್ತು ಕರುಣೆಯ ಜೀವದ್ರವದಿಂದ ಸಾಮಾನ್ಯರ ಬದುಕಿನ ಕತ್ತಲೆಗೆ ಬೆಳಕಾಗುವ ಅಪೂರ್ವ ಸಂವಿಧಾನವನ್ನು ನೀಡಿದ ಮಹಾಮಾನವತಾವಾದಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನ ದಮನಿತರ ಪಾಲಿನ ಬಿಡುಗಡೆಯ ದಿನವೂ ಹೌದು ಎಂದು ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಹೇಳಿದರು.
ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಅವರ 135ನೇ ಜನ್ಮದಿನೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸೊರಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಶ್ರೀಮತಿ ಗಿರಿಜಮ್ಮ, ಹೊನ್ನಾಳಿ ವಿಜಯ ಪದವಿಪೂರ್ವ ಕಾಲೇಜಿನ ವಸಂತ್, ಅರುಣ್ ಹಾಗೂ ಇತರರು ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಈರಬಸು ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸಿತೀಕ್ಷಾ ವಂದಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥ ನಿಶ್ಚಿತ ಎಸ್. ಹೋಬಳಿದಾರ್ ಕಾರ್ಯಕ್ರಮವನ್ನು ನಿರೂಪಿಸಿದರು.






