ಜಾಮಿಯಾ ಸಾಲಿಹಾತ್ ಮಹಿಳಾ ಅರಬಿಕ್ ಕಾಲೇಜು, ತೋನ್ಸೆ-ಹೂಡೆ ವತಿಯಿಂದ ನೂತನ ಶೈಕ್ಷಣಿಕ ವರ್ಷದ ಉದ್ಘಾಟನೆ ಹಾಗೂ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ (BIE) ವಿದ್ಯಾರ್ಥಿಗಳ ಸನ್ಮಾನ ಸಮಾರಂಭವು ಸೋಮವಾರ ಸಾಲಿಹಾತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಮುಹಮ್ಮದಿಯಾ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಜನಾಬ್ ಇದ್ರೀಸ್ ಹೂಡೆ ಭಾಗವಹಿಸಿ ಮಾತನಾಡುತ್ತಾ, “ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಕೇವಲ ಲೌಕಿಕ ಶಿಕ್ಷಣವನ್ನಷ್ಟೇ ಅಲ್ಲ, ಮೌಲ್ಯಾಧಾರಿತ ಮತ್ತು ಧಾರ್ಮಿಕ ಶಿಕ್ಷಣವನ್ನೂ ಒದಗಿಸುವ ಕೇಂದ್ರ ವಾಗಿದೆ. ಇಲ್ಲಿ ಕಲಿಯುವ ಪ್ರತಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು”
ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಗಳಾದ ಜನಾಬ್ ಮೌಲ್ವಿ ಲಬೀದ್ ಶಾಫಿ ಅಲಿಯಾ ಮಾತನಾಡಿ “ಈ ಜಗತ್ತಿಗೆ ಬಂದ ಎಲ್ಲಾ ಪ್ರವಾದಿಗಳು ಎರಡು ವಿಶೇಷ ಶಕ್ತಿಗಳನ್ನು ಹೊಂದಿದ್ದರು. ಮೊದಲನೆಯದು ಉಜ್ವಲವಾದ ಜೀವನದ ಉದ್ದೇಶ ಮತ್ತು ಎರಡನೆಯದು ಅತ್ಯುತ್ತಮ ಕೌಶಲ್ಯ. ಇಂದಿನ ವಿದ್ಯಾರ್ಥಿಗಳು ಕೂಡ ತಮ್ಮ ಜೀವನದಲ್ಲಿ ಈ ಎರಡೂ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಬುನಾದಿ ಯಾಗ ಬೇಕು ಎಂದು ಕರೆ ನೀಡಿದರು.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಫಿಸಿಕ್ಸ್, MAHE ನ ಸಹ ಪ್ರಾಧ್ಯಾಪಕರಾದ ಡಾ. ಅಬ್ದುಲ್ ಅಜೀಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರತಿಭಾವಂತ BIE ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ತಮ್ಮ ಅಭಿನಂದನಾ ಭಾಷಣದಲ್ಲಿ, “ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನು ಸಂಗ್ರಹಿಸುವುದಲ್ಲ; ಅದು ನಮ್ಮ ಜೀವನವನ್ನು ಪರಿವರ್ತಿಸಿ ಮಾನವಕುಲದ ಸೇವೆಗೆ ನಮ್ಮನ್ನು ಸಜ್ಜುಗೊಳಿಸುವ ಪ್ರಕ್ರಿಯೆಯಾಗಿದೆ” ಎಂದು ಹೇಳಿದರು.
ಗೌರವ ಅತಿಥಿಯಾಗಿ, ಶ್ರೀಮತಿ ಹುಮೇರಾ ಕಾರ್ಕಳ (ಸದ್ಯಸರು ಜಮಾತ್ ಇಸ್ಲಾಮಿ ಹಿಂದ್ ಉಡುಪಿ), ಮುಹಮ್ಮದಿಯಾ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಮೌಲಾನಾ ಆದಂ ಸಾಹೇಬ್ ಹಾಗೂ ಜನಾಬ್ ಉಸ್ತಾದ್, ಇಸ್ಲಾಮಿ ಡಿಪಾರ್ಟ್ಮೆಂಟ್ ಮುಖ್ಯಸ್ಥ ಮೌಲಾನಾ ಶಾಹಿದ್ ನದವೀ, ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಶಬಿನಾ ಹಾಗೂ ಜಾಮಿಯಾ ಪ್ರಿನ್ಸಿಪಾಲ್ ಶ್ರೀಮತಿ ತಸ್ನೀಮ್ ಮೇಡಂ ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯ ಪವಿತ್ರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮವನ್ನು ಸುರಯ್ಯ ಮೇಡಂ ಹಾಗೂ ಮುಸ್ರತ್ ಮೇಡಂ ಅವರು ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಜನಾಬ್ ಅಸ್ಲಂ ಹೈಕಾಡಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಅಕಾಡೆಮಿಕ್ ಮುಖ್ಯಸ್ಥ ಜನಾಬ್ ಅಬ್ದುಲ್ ಹಸೀಬ್ ತರಫದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಮಿಯಾ ಶಿಕ್ಷಕಿ ಯಾಸ್ಮಿನ್ ಮೇಡಂ ಅವರು ಧನ್ಯವಾದವಿತ್ತರು.
ಜಾಮಿಯಾ ಮಹಿಳಾ ಕಾಲೇಜ್ ನ ನೂತನ ಶೈಕ್ಷಣಿಕ ವರ್ಷದ ಆರಂಭದ ಅಂಗವಾಗಿ, ಕಳೆದು ವರ್ಷ ಅತ್ಯುತ್ತಮ ಸಾಧನೆ ಮಾಡಿದ ವಿಧ್ಯಾರ್ಥಿ ಗಳನ್ನು ಹಾಗೂ BIE ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಲಿಹಾತ್ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಪೋಷಕರು ಮತ್ತು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.





