ವಿಜಯನಗರ | ದೇವದಾಸಿಯರ ವಿಮೋಚನೆಯ ‘ನೀಲಿ ಹೂವು’ ಪ್ರೇಕ್ಷಕರ ಮನಗೆದ್ದ ನಾಟಕ

Date:

ಯುವರಂಗ 2025 ಉಚಿತ ನಾಟಕ ತರಬೇತಿಯ ಶಿಬಿರಾರ್ಥಿಗಳು ಅಭಿನಯಿಸುತ್ತಿರುವ ದೇವದಾಸಿ ಪದ್ಧತಿಯ ವಿಮೋಚನೆಯ ಕುರಿತಾದ ಶಿಕ್ಷಣದ ಮಹತ್ವವನ್ನು ಸಾರುವ ‘ನೀಲಿ ಹೂವು’ ನಾಟಕ ಡಾ.ಸಹನಾ ಪಿಂಜಾರ ಅವರ ನಿರ್ದೇಶನದಲ್ಲಿ ಪ್ರದರ್ಶನವಾಯಿತು.

- Advertisement -

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಟಿಎಮ್‌ಎಇಎಸ್ ಆಯುರ್ವೇದಿಕ್ ಕಾಲೇಜಿನಲ್ಲಿ ಸ್ನೇಹ ಭಾರತಿ ಹಳೇ ವಿದ್ಯಾರ್ಥಿನಿಯರ ಸಂಘ ಹಾಗೂ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಬಹುತ್ವ ಪ್ರತಿಷ್ಠಾನ ಸಹಯೋಗದೊಂದಿಗೆ ‘ನೀಲಿ ಹೂವು’ ನಾಟಕ ಪ್ರದರ್ಶನ ಪ್ರದರ್ಶನವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ ರಚನೆಯ ದೇವದಾಸಿ ವಿಮೋಚನೆಯ ‘ನೀಲಿ ಹೂವು’ ನಾಟಕವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ಸಹನಾ ಪಿಂಜಾರ ಅವರ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿತು.

ನೀಲಿ ಹೂವು ನಾಟಕ 1

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಬಹುತ್ವ ಪ್ರತಿಷ್ಠಾನದ ಸಹಯೋಗದೊಂದಿಗೆ ಒಂದೂವರೆ ತಿಂಗಳುಗಳ ಕಾಲ ರಾಜ್ಯದ ಬೇರೆಬೇರೆ ಜಿಲ್ಲೆಯ 40ಕ್ಕೂ ಹೆಚ್ಚು ಕಲಾಸಕ್ತರು ಶಿಬಿರದಲ್ಲಿ ಭಾಗವಹಿಸಿ ನಾಟಕ ತರಬೇತಿ ಪಡೆದುಕೊಂಡಿದ್ದಾರೆ.

ಇತ್ತಿಚೆಗೆ ಸಮಾಜ ಕಲ್ಯಾಣ ಇಲಾಖೆಯ ‘ಪ್ರಬುದ್ಧ’ ಯೋಜನೆಯಡಿ ಇಂಗ್ಲೆಂಡಗೆ ಪಿಎಚ್‌ಡಿ ಪಡೆಯಲು ತೆರಳುತ್ತಿರುವ ಹೊಸಪೇಟೆಯ ಮಾಜಿ ದೇವದಾಸಿ ಮಗಳು ಕಾಮಾಕ್ಷಿಯ ಬದುಕಿನ ಎಳೆಹಿಡಿದು, ದೇವದಾಸಿ ಕುಟುಂಬದ ಯುವತಿ ಶಿಕ್ಷಣ ಪಡೆದು ಹೇಗೆ ಉನ್ನತ ಸ್ಥಾನಕ್ಕೇರುತ್ತಾಳೆ ಎಂದು ಆಧರಿಸಿದ ಕಥೆಯಾಗಿದೆ.

ನೀಲಿ ಹೂವು ನಾಟಕ 2

ನಾಟಕದ ಮೂಲಕ ಶಿಕ್ಷಣದ ಮಹತ್ವ, ದೇವದಾಸಿ ಪದ್ಧತಿಯಿಂದ ಮಹಿಳೆ ಮೇಲಾಗುವ ಶೋಷಣೆ, ಅವಳ ಹಕ್ಕುಗಳು, ಸಾಮಾಜಿಕ ನ್ಯಾಯದ ಅರಿವು ಹಾಗೂ ಜಾಗೃತಿ ಮೂಡಿಸುವ ನಾಟಕವಾಗಿದೆ. ಪ್ರತಿಯೊಂದು ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು, ಶಿಕ್ಷಣ ಎಲ್ಲದಕ್ಕೂ ದೊಡ್ಡ ಶಕ್ತಿಯಾಗಿದೆ ಎಂಬ ಸಂದೇಶವನ್ನು ಸಾರುವ ನಾಟಕ, ದೇವದಾಸಿ ಪದ್ಧತಿ ವಿಮೋಚನೆಗೆ ಶಿಕ್ಷಣವೊಂದೆ ಅಸ್ತ್ರ ಎಂಬಂತ ಮಹತ್ವದ ಸಂದೇಶವನ್ನೂ ನೀಡುವುದು ನಾಟಕದ ಉದ್ದೇಶವಾಗಿತ್ತು.

ನೀಲಿ ಹೂವು ನಾಟಕ 3
ನೀಲಿ ಹೂವು ನಾಟಕ 4

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಸ್ತೆ ಗುಂಡಿ ಮುಚ್ಚಿ ಅಪಘಾತ ತಪ್ಪಿಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ

ತಲತಲಾಂತರದಿಂದ ದೇಶದಲ್ಲಿ ದೇವದಾಸಿ ಮಹಿಳೆಯರ ಶೋಷಣೆ ಪದ್ದತಿ ದಲಿತ ಮಹಿಳೆಯರನ್ನು ಶೋಷಿಸುತ್ತ ಬಂದಿದೆ. ಆ ಶೋಷಣೆಯಿಂದ ದೇವದಾಸಿಯಾದ ಸಾವಿತ್ರಮ್ಮ ತನ್ನ ಮೊಮ್ಮಕಳನ್ನು ದೇವದಾಸಿ ಆಚರಣೆಯಿಂದ ವಿಮುಕ್ತಗೊಳಿಸುವುದರ ಕುರಿತು ರಚಿತವಾದ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. 20ಕ್ಕೂ ಹೆಚ್ಚು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

ನೀಲಿ ಹೂವು ನಾಟಕ 5

ಶಿಬಿರದ ಸಂಚಾಲಕ ರಿಯಾಜ್ ಸಿಹಿಮೊಗೆ ಮಾತನಾಡಿ, “ಶಿಬಿರದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ‘ನೀಲಿ ಹೂ’ ನಾಟಕ ಇದು ದೇವದಾಸಿಯರ ಬದುಕು-ಬವಣೆ, ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ತಾರತಮ್ಯದ ಕುರಿತು ಶಿವನಾಯಕ್ ದೊರೆ ರಚಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿಯೂ ಈ ಥರದ ನಾಟಕ ಪ್ರಸ್ತುತ ಅನಿಸುತ್ತದೆ. ಹಾಗಾಗಿ ಆಯ್ಕೆ ಮಾಡಿಕೊಂಡು ಪ್ರದರ್ಶನ ಮಾಡುತ್ತಿದ್ದೆವೆ ಮತ್ತು ಈ ನಾಟಕ ಪ್ರಥಮ ಪ್ರದರ್ಶನ ನಡೆದಿದೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...