ವಿಜಯಪುರ | ಸೀತಮ್ಮನಗುಡ್ಡದ ಕೆಎಸ್‌ಐಎಸ್‌ಎಫ್ ಬಳಿ ಅಪಘಾತ; ಇಬ್ಬರಿಗೆ ಮಂದಿಗೆ ಗಂಭೀರ, ಹದಿನಾಲ್ಕು ಮಂದಿಗೆ ಗಾಯ

Date:

ಆಲಮಟ್ಟಿ ಜಲಾಶಯದ ಬಲಭಾಗದ ಸೀತಮ್ಮನಗುಡ್ಡದ ಹತ್ತಿರದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್) ಪೊಲೀಸರ ವಸಾಹತು ಬಳಿ ಪ್ರವಾಸಿಗರಿದ್ದ ಟೆಂಪೊ ಹಾಗೂ ಕಬ್ಬು ತುಂಬಿದ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ಮಂದಿಗೆ ಗಂಭೀರ ಮತ್ತು ಹದಿನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

- Advertisement -

ಸೀತಮ್ಮನಗುಡ್ಡದಲ್ಲಿನ ಲವಕುಶ ಉದ್ಯಾನ ನೋಡಿಕೊಂಡು ಆಲಮಟ್ಟಿ ಜಲಾಶಯದತ್ತ ಬರುತ್ತಿದ್ದ ಪ್ರವಾಸಿಗರ ಟೆಂಪೊ, ಚಾಲಕನ ನಿಯಂತ್ರಣಕ್ಕೆ ಬಾರದೇ ರಸ್ತೆಯ ಎದುರು ಬರುತ್ತಿದ್ದ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಅಪಘಾತದ ರಭಸಕ್ಕೆ ಟೆಂಪೊ ಸಂಪೂರ್ಣ ನಜ್ಜುಗುಜ್ಜಾಗಿ ಉರುಳಿಬಿದ್ದಿದೆ. ಇದರ ಪರಿಣಾಮ 30 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲರೂ ಟೆಂಪೋ ಪ್ರಯಾಣಿಕರು. ಅವರೆಲ್ಲರೂ ಯಾದಗಿರ ಜಿಲ್ಲೆಯ ಸುರಪುರ ತಾಲೂಕಿನ ಜೈನಾಪುರ ಹಾಗೂ ಕಿರಿದಳ್ಳಿ ಗ್ರಾಮದವರು. ಈ ಎರಡು ಗ್ರಾಮದ 30 ಮಂದಿ ಮೂರು ದಿನದ ಹಿಂದೆ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಟೆಂಪೊದಲ್ಲಿ ಹೋಗಿದ್ದರು. ದೇವಿಯ ದರ್ಶನದ ನಂತರ ಆಲಮಟ್ಟಿಗೆ ಬಂದು, ಉದ್ಯಾನ ವೀಕ್ಷಿಸಿ ಮರಳಿ ತಮ್ಮೂರಿಗೆ ಸೋಮವಾರ ರಾತ್ರಿ ಹೊರಡಬೇಕಿತ್ತು. ಲವಕುಶ ಉದ್ಯಾನದಿಂದ ಆಲಮಟ್ಟಿ ಜಲಾಶಯದತ್ತ ಬರುವಾಗ ಭಾರೀ ಇಳಿಜಾರು ಇದ್ದು, ಅಲ್ಲಿ ಟೆಂಪೊ ನಿಯಂತ್ರಣಕ್ಕೆ ಬಾರದೇ ಈ ಅಪಘಾತ ಸಂಭವಿಸಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಮತ್ತೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಬಂಧನ

ತೀವ್ರವಾಗಿ ಗಾಯಗೊಂಡ ಸರಸ್ವತಿ ಮಲ್ಲಪ್ಪ ದೊಡಮನಿ (35), ಹಣಮವ್ವ ದೇವೇಂದ್ರಪ್ಪ ವಾಲೀಕಾರ (50), ಗೌತಮ ವಾಲೀಕಾರ (10), ಭಾಗಮ್ಮ ವಾಲೀಕಾರ (17) ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ ಸತೀಶಕುಮಾರ ತಿಳಿಸಿದರು.  ಆರು ಜನರಿಗೆ ಮೂಳೆ ಮುರಿತ ಆಗಿದ್ದು, 30 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಮಾನವ ಪ್ರಕೃತಿಯ ಭಾಗ ಎಂಬುದನ್ನು ಮರೆಯಬಾರದು; ಹರೀಶ್ ಎನ್.ಆರ್

ಕಳಸ : ಇಂದಿನ ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರಿತ್ಯ ಸೇರಿದಂತೆ...

ಹಾವೇರಿ | ಪುಸ್ತಕವನ್ನು ಪರಿಚಯಿಸುವ ಸಾಮರ್ಥ್ಯ ಗ್ರಂಥಪಾಲಕರಿಗೆ ಇದೆ: ಡಾ. ರಾಘವೇಂದ್ರ ಪತ್ತೇಪುರ

"ನಾನು ಓದುವ ಕಾಲದಲ್ಲಿ ಗ್ರಂಥಾಲಯದಲ್ಲಿ ಓದುವಾಗ,  ಸಂಶೋದನೆಗೆ ಸಂಬಂಧಿಸಿ ಪುಸ್ತಕಗಳು ಕಡಿಮೆ...

ಮೈಸೂರು | ಬರದ ನಾಡಿನಲ್ಲಿ ದಸರಾ ಸಂಭ್ರಮ! ಕಂಬಳ ಮುಖ್ಯವೋ, ಅನ್ನದಾತನ ಬದುಕೋ?

ಎರಡು ದಿನದ ಕ್ರೀಡೆಗೆ ಕೋಟ್ಯಂತರ ರೂಪಾಯಿ; ಅನ್ನದಾತನಿಗೆ ಅಲ್ಪ ಪರಿಹಾರ! ದಸರಾ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ ಕೆಫೆ’: 44 ಲಕ್ಷ ರೂ. ವಹಿವಾಟು!

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ...