ವಿಜಯಪುರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಅದ್ದೂರಿಯಾಗಿ ಜರುಗಿತು.
ಕರ್ನಾಟಕ ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಸಮಿತಿ ವಿಜಯಪುರ, ಇವರ ಆಶ್ರಯದಲ್ಲಿ 202ನೇ ವಿಜಯೋತ್ಸವ ಹಾಗೂ 248ನೇ ರಾಣಿ ಚೆನ್ನಮ್ಮರ ಜಯಂತೋತ್ಸವದ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು, ಯುವಕರ ಬುಲೆಟ್ ರ್ಯಾಲಿಯೊಂದಿಗೆ ಆರಂಭವಾದ ಮೆರವಣಿಗೆಯಲ್ಲಿ ಚೆನ್ನಮ್ಮರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ಹಲವು ವಾದ್ಯಗಳು ಇದ್ದವು. ನಗರದ ಸಿದ್ದೇಶ್ವರ ದೇವಸ್ಥಾನದಿಂದ, ಗಾಂಧಿ ಚೌಕ ಮೂಲಕ ಸಾಗಿದ ಮೆರವಣಿಗೆ ರಾಣಿ ಚೆನ್ನಮ್ಮಾಜಿ ಸರ್ಕಲ್‌ನಲ್ಲಿ ಕೊನೆಗೊಂಡಿತು.

ಈ ಸಂದರ್ಭದಲ್ಲಿ ಕಿತ್ತೂರರಾಣಿ ಚೆನ್ನಮ್ಮ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಬಿರಾದರ ಮಾತನಾಡಿ, ಚೆನ್ನಮ್ಮ ಕಿತ್ತೂರ ಸಂಸ್ಥಾನದ ವೀರ ಮಹಿಳೆ, ಸ್ವಾತಂತ್ರ್ಯ, ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ಅವರ ಆದರ್ಶವನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಮಠಾದೀಶರು, ಯುವಕರು, ಯುವತಿಯರು, ಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಿಜಯಪುರ ನಗರದ ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.



