ಭಗವಾನ್ ಬುದ್ಧನ ಅಂತಿಮ ಉಪದೇಶಗಳು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಸಂದೇಶ ಪುಸ್ತಕ ಪುಸ್ತಕವನ್ನು ಎಲ್ಲರೂ ಓದಲೇಬೇಕು ಎಂದು ಕವಿ ಹನುಮಂತ್ ಗುಡ್ಡಳ್ಳಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿ ಚಂದ್ರಶೇಖರ ಸಿ ಗುಡ್ಡಳ್ಳಿ ಬರೆದಿರುವ ‘ಭಗವಾನ್ ಬುದ್ಧನ ಅಂತಿಮ ಉಪದೇಶಗಳು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಸಂದೇಶ’ ಪುಸ್ತಕವನ್ನು ಬಿಡುಗಡೆ ಮಾಡಿದರು.
ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಅಧ್ಯಕ್ಷ ಶ್ರೀನಾಥ್ ಪೂಜಾರಿ ಮಾತನಾಡಿ, “ಬುದ್ಧ ಮತ್ತು ಅಂಬೇಡ್ಕರ್ ನಮಗೆ ಬದುಕು ಕಟ್ಟಿ ಕೊಟ್ಟರು. ಅವರ ಭೋದನೆಗಳನ್ನು ತಿಳಿದು ನಾವೆಲ್ಲರೂ ಕ್ರೀಯಾಶೀಲತೆಯನ್ನು ರೂಪಿಸುಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶರಣಪ್ಪ ಸುಣಗಾರ್, ಯುವರಾಜ್ ಎಸ್ ಕಾಂಬಳೆ, ಟಿಬಿ ಭಾಸ್ಕರ್ , ಅಭಿಲಾಶ್ ಎಚ್ ಕೆ, ಸಿದ್ದರಾಮ ಹಿಪ್ಪರಗಿ, ಚಂದ್ರಶೇಖರ್ ಯಲ್ಲ ರೆಡ್ಡಿ ಸಂಗನಗೌಡ ತಗ್ಗಿನಮನಿ, ವೈ ಸಿ ಮಯೂರ್, ಪರಶುರಾಮ್ ದಿಂಡಿವಾರ, ಪ್ರಕಾಶ್ ಗುಡಿಮನಿ,ಪುಸ್ತಕದ ಪ್ರಕಾಶಕರಾಗಿದ್ದ ಚಂದ್ರಶೇಖರ ಕಡಕೋಳಕರ್ ಹಾಗೂ ಇತರರು ಉಪಸ್ಥಿತರಿದ್ದರು.