ವಿಜಯಪುರ | ಲೋಕಸಭಾ ಚುನಾವಣೆಯಲ್ಲಿ ಫ್ಯಾಸಿಸ್ಟ್‌ ಶಕ್ತಿ ಸೋಲಿಸಲು ತಯಾರಿ ಅಗತ್ಯ: ಶ್ರೀನಾಥ್ ಪೂಜಾರಿ

Date:

ಚುನಾವಣಾ ಸಂದರ್ಭ ಎದುರಿಸಿದ್ದೇವೆ. ಅದರ ಅನುಭವವೂ ಇದೆ. ಫ್ಯಾಸಿಸ್ಟ್ ಶಕ್ತಿ ಕುಂದಿಲ್ಲ ಮತ್ತು ಸೋತಿಲ್ಲ. ಅದರ ಶಕ್ತಿ ಹಿಮ್ಮೆಟ್ಟಿಸಲು ಸಾಕಷ್ಟು ತಯಾರಿ ಅಗತ್ಯವಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ ಹೇಳಿದ್ದಾರೆ.

ವಿಜಯಪುರ ನಡೆದ ‘ಎದ್ದೇಳು ಕರ್ನಾಟಕ’ ಆಂದೋಲನದ ಸಭೆಯಲ್ಲಿ ಅವರು ಮಾತನಾಡಿದರು. “ಲೋಕಸಭಾ ಚುನಾವಣೆಯಲ್ಲಿ ಫಾಸಿಸ್ಟ್‌, ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು. ಅದಕ್ಕಾಗಿ ರಾಜ್ಯದಲ್ಲಿ ಮತ್ತೆ ಆಂದೋಲನ ಆರಂಭವಾಗಲಿದೆ: ಎಂದು ಹೇಳಿದರು.

ಎದ್ದೇಳು ಕರ್ನಾಟಕದ ಮುಖಂಡೆ ಗೌರಿ ಮಾತನಾಡಿ, “ನಮ್ಮ ಮುಂದೆ ದೊಡ್ಡ ಸವಾಲಿದೆ. ಎದುರಾಳಿಗಳು ಹಣ ಅಧಿಕಾರ ಇರುವುದರಿಂದ ಬೇಗ ಜನರ ಬೆಂಬಲ ಪಡೆಯುತ್ತಾರೆ. ಇತಿಹಾಸ ನೋಡಿದಾಗ ‘ಸತ್ಯ ಇವತ್ತಲ್ಲ ನಾಳೆ ಗೆದ್ದೇ ಗೆಲ್ಲುತ್ತದೆ’ ಎಂಬುದು ಅರಿವಿಗೆ ಬರುತ್ತದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬದಲಾವಣೆ ಜಗದ ನಿಯಮ ಅಂತ ಸುಮ್ನೆ ಕುಂತರೆ ಆಗುವುದಿಲ್ಲ. ಸೌಹಾರ್ದಯುತ ಪರಂಪರೆ ಉಳಿಸಲು ಪ್ರಯತ್ನ ಮಾಡಲೇಬೇಕು. ಜನಪರ ಒಕ್ಕೂರಿಲಿನಿಂದ ಎದ್ದೇಳು ಕರ್ನಾಟಕ ಹುಟ್ಟಿತು. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಮುಂದೆಯೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ” ಎಂದು ತಿಳಿಸಿದರು.

“ಬೆಲೆ ಏರಿಕೆ, ನಿರುದ್ಯೋಗ, ಕೊರೊನಾ ನಂತರದ ಪರಿಸ್ಥಿತಿ, ಹೊಟ್ಟೆಪಾಡಿನ ವಿಷಯಗಳು ರಾಜಕೀಯದಲ್ಲಿ ಚರ್ಚೆಯಾಗಬೇಕು. ಇಂತಹ ವಿಚಾರಗಳನ್ನು ಸಮಾಜದಲ್ಲಿ ಚರ್ಚೆ ತರಬೇಕು” ಎಂದರು.

ಸಭೆಯಲ್ಲಿ ಅಬ್ದುಲ್ ಅಹಮದ್ ಖದೀರ್, ದಸ್ತಗಿರಿ ಹುಲಿಕಟ್ಟಿ, ಅಕ್ರಮ ಮಸಾಳಕರ, ಡಾ. ಭುವನೇಶ್ವರಿ, ಬಾಳು ಜೇವರು, ಮೀನಾಕ್ಷಿ ಸಿಂಗೆ, ಶಾಂತಾ ದಗಿನಾಳ, ಹಿಂದೂ ಹೊಸಮನಿ, ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಕೋಮುವಾದದ ಮಾತುಗಳನ್ನಾಡುವ ಪ್ರಧಾನಿ ದೇಶಕ್ಕೆ ಬೇಕೆ?: ಸಚಿವ ಎಂ ಸಿ ಸುಧಾಕರ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು...

ಶಿವಮೊಗ್ಗ | ಕ್ಷೇತ್ರದ ರಕ್ಷಣೆಗೆ, ಅಭಿವೃದ್ಧಿಗೆ ಆದ್ಯತೆ: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕಾರವು ರಾಜಕಾರಣಿಗಳ ಬಳಿಯಿದೆ. ಸಮಸ್ಯೆಗಳು ಸಾಕಷ್ಟಿವೆ. ಆದರೂ, ಕೆಲವು...

ಯಾದಗಿರಿ | ಅಂಗಡಿ, ಸಂತೆ ಪ್ರದೇಶದಲ್ಲಿ ಎಸ್‌ಯುಸಿಐ ಚುನಾವಣಾ ಪ್ರಚಾರ

ಯಾದಗಿರಿಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಚುನಾವಣಾ ಪ್ರಚಾರದ ಅಂಗವಾಗಿ ಇಂದು ನಗರದ...

ಉಡುಪಿ‌ | ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಾಯ: ಮಂಜುನಾಥ್ ಗಿಳಿಯಾರ್ 

ಬಿಜೆಪಿ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ವಿರೋಧಿಯಾಗಿದೆ. ದೇಶದಲ್ಲಿ ಮೀಸಲಾತಿ...