ವಿಜಯಪುರ |ಕಳ್ಳರ ಕಾಟ ;ಎರಡು ದಿನಗಳಲ್ಲಿ ಏಳು ಮನೆಗಳಿಗೆ ಕನ್ನ

Date:

ವಿಜಯಪುರ ಜಿಲ್ಲೆಯ ಆಲಮಟ್ಟಿ ಪಟ್ಟಣದಲ್ಲಿ ಕಳ್ಳರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೇವಲ ಎರಡು ದಿನಗಳ ಅವಧಿಯಲ್ಲಿ ಏಳು ಮನೆಗಳನ್ನು ಗುರಿಯಾಗಿಸಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

- Advertisement -

ಮನೆಗಳಲ್ಲಿ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳವಾಗಿದ್ದು, ಇನ್ನೂ ಕೆಲವು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವುದು ನಿವಾಸಿಗಳಲ್ಲಿ ಭೀತಿ ಮೂಡಿಸಿದೆ.ಬುಧವಾರ ರಾತ್ರಿ ಆಲಮಟ್ಟಿ ಆರ್.ಎಸ್. ರೈಲ್ವೆ ನಿಲ್ದಾಣ ರಸ್ತೆಯ ಮಸೀದಿ ಸಮೀಪ ನರಸಯ್ಯ ಹಡಪದ ಅವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆಯಲ್ಲಿದ್ದ ಒಂದು ತೊಲೆ ಚಿನ್ನ, ನಾಲ್ಕು ತೊಲೆ ಬೆಳ್ಳಿ ಹಾಗೂ ₹10 ಸಾವಿರ ನಗದು ಕಳವು ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ ನಮ್ಮದೇ ನೆಲದ ಉದಾಹರಣೆಗಳ ಮೂಲಕ ಕನ್ನಡ ಭಾಷೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಘನತೆಯನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಕವಿ ಕನಕದಾಸರು. ಭಾಷೆಯೊಂದು...

ಕೊರೆಯುವ ಚಳಿಯಲ್ಲೂ ಮೊಳಗಿದ ಗುಲಾಬಿ ಧ್ವನಿ, ಆಶಾ ಕಾರ್ಯಕರ್ತೆಯರ...

ಒಂದೆಡೆ ಭೋರ್ಗರೆಯುವ ಮಳೆ, ಮತ್ತೊಂದೆಡೆ ಮೈಕೊರೆಯುವ ಚಳಿ. ಪ್ರಕೃತಿಯ ಈ ಪ್ರತಿಕೂಲ ಪರಿಸ್ಥಿತಿಯನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗುಲಾಬಿ ಸೀರೆಧಾರಿ ಮಹಿಳೆಯರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟವನ್ನು ನೋಡಿದಾಗ...

ಬಿರುಕು ಬಿಟ್ಟಿದ್ದ ‘ಕೈ’ ಕೋಟೆಗೆ ಒಗ್ಗಟ್ಟಿನ ಶಕ್ತಿ: ರಾಜಸ್ಥಾನ...

ಗೋವಿಂದ್ ಡೋಟಸರ ಮತ್ತು ಟೀಕಾರಾಮ್ ಜುಲ್ಲಿ ಅವರ ನಡುವಣ ಬಾಂಧವ್ಯ ಕೇವಲ ರಾಜಕೀಯ ಅನಿವಾರ್ಯತೆಯಲ್ಲ; ಅದು ಪರಸ್ಪರ ನಂಬಿಕೆ ಮತ್ತು ಪೂರಕ ಸಾಮರ್ಥ್ಯಗಳ ಸಮ್ಮಿಲನವಾಗಿದೆ. ಡೋಟಸರ ಅವರಲ್ಲಿರುವ ಆಕ್ರಮಣಕಾರಿ ಸಂಘಟನಾ ಶೈಲಿ, ಪ್ರಖರ...

ಇದೇ ರಾತ್ರಿ ಆಲಮಟ್ಟಿ ರೈಲ್ವೆ ನಿಲ್ದಾಣದ ಸಮೀಪ ಸಂಗನಗೌಡ ಪಾಟೀಲ ಅವರ ಮನೆಯಲ್ಲಿ ಒಂದು ತೊಲೆ ಚಿನ್ನ ಹಾಗೂ ₹20 ಸಾವಿರ ನಗದು ಕಳವಾಗಿದೆ.ಗುರುವಾರ ರಾತ್ರಿ ನವೋದಯ ವಿದ್ಯಾಲಯದ ಹಿಂಭಾಗದಲ್ಲಿರುವ ಡ್ಯಾಂ ಸೈಟ್‌ನ ಕೃಷ್ಣಾ ಭಾಗ್ಯ ಜಲ ನಿಗಮದ ವಸಾಹತುವಿನಲ್ಲಿಯೂ ಕಳ್ಳರು ಮನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

ಪರಶುರಾಮ ಕಾಂಬಳೆ, ರಾಜು ಬಳಗಾನೂರ, ಡಾ.ಆರ್.ಎಸ್. ಹದ್ದಿ, ಅಯ್ಯಪ್ಪ ಸೇರಿದಂತೆ ಐದು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.ಇದಕ್ಕೂ ಮುನ್ನ ಕಳೆದ ತಿಂಗಳು ಆಲಮಟ್ಟಿಯ ನಾಲ್ಕು ಮನೆಗಳಲ್ಲಿ ಹಣ ಹಾಗೂ ಬೆಳ್ಳಿಯ ಆಭರಣ ಕಳವಾಗಿದ್ದವು. ಪದೇಪದೇ ನಡೆಯುತ್ತಿರುವ ಕಳ್ಳತನದ ಘಟನೆಗಳು ಪಟ್ಟಣದ ನಿವಾಸಿಗಳಲ್ಲಿ ಸುರಕ್ಷತೆಯ ಆತಂಕ ಹೆಚ್ಚಿಸಿವೆ.ಘಟನಾ ಸ್ಥಳಗಳಿಗೆ ಪಿಎಸ್‌ಐ ಎಫ್.ಎಸ್. ಇಂಡಿಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ ಗಸ್ತು ಸ್ಥಗಿತದ ಬಗ್ಗೆ ಆಕ್ರೋಶ

ಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ರಾತ್ರಿ ಪೊಲೀಸ್ ಗಸ್ತು ಸ್ಥಗಿತಗೊಂಡಿರುವುದೇ ಕಳ್ಳತನ ಪ್ರಕರಣಗಳು ಹೆಚ್ಚಲು ಕಾರಣ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ರಾತ್ರಿ ವೇಳೆ ಪೊಲೀಸ್ ಗಸ್ತು ಇಲ್ಲದಿರುವುದರಿಂದ ಕಳ್ಳರಿಗೆ ಅನುಕೂಲವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೂಡಲೇ ರಾತ್ರಿ ಪೊಲೀಸ್ ಗಸ್ತು ಪುನರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳ್ಳತನ ಪ್ರಕರಣಗಳ ಸರಣಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಭದ್ರತೆ ಬಲಪಡಿಸುವ ಅಗತ್ಯವಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ: ಜಮಾಅತೆ ಇಸ್ಲಾಮೀ ಹಿಂದ್ ತೀವ್ರ ಖಂಡನೆ

12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ವಿರುದ್ಧ ಇತ್ತೀಚೆಗೆ ಆಡಿರುವ ಅವಹೇಳನಕಾರಿ...

ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ...

ಚಿಕ್ಕೋಡಿ |ಜಿಲ್ಲೆ ರಚನೆಗೆ ಸಿಎಂ ಭೇಟಿಯಾಗಿ ಮನವಿ; ಪ್ರಿಯಾಂಕ ಜಾರಕಿಹೊಳಿ

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ರಚನೆಯ ಬೇಡಿಕೆಗೆ...