ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

Date:

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ ನಮ್ಮದೇ ನೆಲದ ಉದಾಹರಣೆಗಳ ಮೂಲಕ ಕನ್ನಡ ಭಾಷೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಘನತೆಯನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಕವಿ ಕನಕದಾಸರು.

- Advertisement -

ಭಾಷೆಯೊಂದು ನಿಜವಾಗಿಯೂ ಬೆಳೆಯುವುದು ಪಂಡಿತರ ಗ್ರಂಥಗಳಲ್ಲಿ ಅಲ್ಲ, ಬದಲಾಗಿ ಸಾಮಾನ್ಯ ಜನರ ನಾಲಿಗೆಯಲ್ಲಿ. ಆದರೆ ಹದಿನೈದು ಮತ್ತು ಹದಿನಾರನೇ ಶತಮಾನದ ಕರ್ನಾಟಕದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಅಂದು ದೇವರು, ಧರ್ಮ ಮತ್ತು ಜ್ಞಾನದ ವಿಚಾರಗಳೆಲ್ಲವೂ ಕೇವಲ ಸಂಸ್ಕೃತ ಭಾಷೆಯ ಕೋಟೆಯೊಳಗೆ ಬಂಧಿಯಾಗಿದ್ದವು. ಸಂಸ್ಕೃತ ಬಲ್ಲವರಿಗೆ ಮಾತ್ರ ಶಾಸ್ತ್ರ-ಪುರಾಣಗಳ ಅರ್ಥ ತಿಳಿಯುತ್ತಿತ್ತು. ಸಾಮಾನ್ಯ ಜನರು ಈ ಜ್ಞಾನದ ಬೆಳಕಿನಿಂದ ವಂಚಿತರಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊರೆಯುವ ಚಳಿಯಲ್ಲೂ ಮೊಳಗಿದ ಗುಲಾಬಿ ಧ್ವನಿ, ಆಶಾ ಕಾರ್ಯಕರ್ತೆಯರ...

ಒಂದೆಡೆ ಭೋರ್ಗರೆಯುವ ಮಳೆ, ಮತ್ತೊಂದೆಡೆ ಮೈಕೊರೆಯುವ ಚಳಿ. ಪ್ರಕೃತಿಯ ಈ ಪ್ರತಿಕೂಲ ಪರಿಸ್ಥಿತಿಯನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗುಲಾಬಿ ಸೀರೆಧಾರಿ ಮಹಿಳೆಯರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟವನ್ನು ನೋಡಿದಾಗ...

ಬಿರುಕು ಬಿಟ್ಟಿದ್ದ ‘ಕೈ’ ಕೋಟೆಗೆ ಒಗ್ಗಟ್ಟಿನ ಶಕ್ತಿ: ರಾಜಸ್ಥಾನ...

ಗೋವಿಂದ್ ಡೋಟಸರ ಮತ್ತು ಟೀಕಾರಾಮ್ ಜುಲ್ಲಿ ಅವರ ನಡುವಣ ಬಾಂಧವ್ಯ ಕೇವಲ ರಾಜಕೀಯ ಅನಿವಾರ್ಯತೆಯಲ್ಲ; ಅದು ಪರಸ್ಪರ ನಂಬಿಕೆ ಮತ್ತು ಪೂರಕ ಸಾಮರ್ಥ್ಯಗಳ ಸಮ್ಮಿಲನವಾಗಿದೆ. ಡೋಟಸರ ಅವರಲ್ಲಿರುವ ಆಕ್ರಮಣಕಾರಿ ಸಂಘಟನಾ ಶೈಲಿ, ಪ್ರಖರ...

ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ...

ಬಂಡೀಪುರ-ನಾಗರಹೊಳೆ ಅರಣ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತಡ; ಖಾಸಗಿ ಬಂಡವಾಳ, ಪ್ರವಾಸೋದ್ಯಮ ವಿಸ್ತರಣೆ ಮತ್ತು ಆದಿವಾಸಿಗಳ ಹಕ್ಕುಗಳ ನಡುವೆ ಸಂರಕ್ಷಣೆಯ ಮೂಲ ಆಶಯಕ್ಕೆ ಸವಾಲು. ಮನುಷ್ಯ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರವಿಲ್ಲ; ಅರಣ್ಯಗಳ ಮೇಲಿನ ನಿಯಂತ್ರಣ...

ಇಂತಹ ಕಾಲಘಟ್ಟದಲ್ಲಿ, ಸಂಸ್ಕೃತದ ಸುತ್ತ ಕಟ್ಟಲಾಗಿದ್ದ ಈ ಅಗೋಚರ ಗೋಡೆಯನ್ನು ಕೆಡವಿ, ಆಡುಭಾಷೆಯಾದ ಸರಳ ಕನ್ನಡದಲ್ಲೇ ದೊಡ್ಡ ತತ್ವಗಳನ್ನು ಜನಸಾಮಾನ್ಯರ ಮನೆಯಂಗಳಕ್ಕೆ ತಂದವರು ಕನಕದಾಸರು.

ಕನ್ನಡ ಭಾಷೆಯಲ್ಲಿ ದೇವರೊಂದಿಗೆ ಸಂಭಾಷಣೆ

ದೇವರನ್ನು ಒಲಿಸಿಕೊಳ್ಳಲು ಕಷ್ಟಕರವಾದ ಸಂಸ್ಕೃತ ಮಂತ್ರಗಳೇ ಬೇಕಾಗಿಲ್ಲ, ನಮ್ಮ ಮನಸ್ಸಿನ ಭಾಷೆಯಾದ ಕನ್ನಡವೇ ಸಾಕು ಎಂದು ಕನಕದಾಸರು ತೋರಿಸಿಕೊಟ್ಟರು. ದೊಡ್ಡ ದೊಡ್ಡ ವೇದಾಂತದ ಮಾತುಗಳನ್ನು ಅತ್ಯಂತ ಸರಳವಾದ ಕನ್ನಡ ಪದಗಳಲ್ಲಿ ಹಾಡಿದರು ಮತ್ತು ತಿಳಿಸಿದರು. ಉದಾಹರಣೆಗೆ..

“ತಲ್ಲಣಿಸದಿರು ಕಂಡ್ಯ ತಾಳು ಮನವೇ,
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ”

“ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಏತಕೆ”

ಎನ್ನುವ ಅವರ ಕೀರ್ತನೆಯ ಮೇಲಿನ ಸಾಲುಗಳು ಎಂತಹ ಕಷ್ಟದಲ್ಲಿದ್ದವರಿಗೂ ಧೈರ್ಯ ತುಂಬಿದರೇ, ಕೆಳಗಿನ ಕೀರ್ತನೆಯ ಸಾಲುಗಳು ಜ್ಞಾನ ಮತ್ತು ಜ್ಞಾನಿಯ ಸಂಗದ ಪರಿಣಾಮವನ್ನು ಸಾರುತ್ತವೆ. ಸಂಸ್ಕೃತದ ಶ್ಲೋಕಗಳಿಗಿಂತಲೂ ಈ ಸರಳ ಕನ್ನಡದ ಸಾಲುಗಳು ಜನರ ಹೃದಯಕ್ಕೆ ನೇರವಾಗಿ ತಲುಪಿರುವುದೇ ದಾಸ ಸಾಹಿತ್ಯಕ್ಕೆ ಜನಮಾನಸದಲ್ಲಿ ವಿಶೇಷ ಪ್ರಾತಿನಿಧ್ಯ ದೊರೆಯಲು ಸಾಧ್ಯವಾಯಿತು.

ಅಂದಿನ ಕಾಲದಲ್ಲಿ ಸಂಸ್ಕೃತದಲ್ಲಿ ಶಾಸ್ತ್ರಗಳನ್ನು ಚರ್ಚಿಸುತ್ತಿದ್ದ ವ್ಯಾಸಕೂಟ ಮತ್ತು ಆ ಜ್ಞಾನವನ್ನು ಸರಳ ಕನ್ನಡದಲ್ಲಿ ಜನರಿಗೆ ತಲುಪಿಸುತ್ತಿದ್ದ ದಾಸಕೂಟ ಎಂಬ ಎರಡು ಪರಂಪರೆಗಳಿದ್ದವು.

ವ್ಯಾಸರಾಯರ ಶಿಷ್ಯರಾದ ಕನಕದಾಸರು ದಾಸಕೂಟದ ಆಶಯವನ್ನು ಜನಸಾಮಾನ್ಯರ ಮನೆಮನೆಗೆ ಕನ್ನಡಿಕರಣಗೊಳಿಸಿ ತಲುಪಿಸಿದರು. ವ್ಯಾಸಕೂಟದ ಸಂಸ್ಕೃತ ಪಾಂಡಿತ್ಯವನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಕನ್ನಡದ ಹಾಡುಗಳನ್ನಾಗಿ ಪರಿವರ್ತಿಸಿ, ಜ್ಞಾನದ ಬಾಗಿಲನ್ನು ಎಲ್ಲರಿಗೂ ತೆರೆದರು.

ಮುಂಡಿಗೆಗಳ ಮೂಲಕ ಕನ್ನಡದ ಶಕ್ತಿ ಪ್ರದರ್ಶನ

ಕನ್ನಡ ಕೇವಲ ಸಾಮಾನ್ಯರ ಭಾಷೆ, ಅದರಲ್ಲಿ ಗಹನವಾದ ತತ್ವಗಳನ್ನು ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದ ಪಂಡಿತರಿಗೆ ಕನಕದಾಸರು ತಮ್ಮ ಮುಂಡಿಗೆಗಳ ಮೂಲಕ ತಕ್ಕ ಉತ್ತರ ನೀಡಿದರು. ಮುಂಡಿಗೆ ಎಂದರೆ ಮೇಲ್ನೋಟಕ್ಕೆ ಒಗಟಿನಂತೆ ಕಾಣುವ, ಆದರೆ ಒಳಗೆ ದೊಡ್ಡ ಆಧ್ಯಾತ್ಮಿಕ ಅರ್ಥವನ್ನು ಅಡಗಿಸಿಟ್ಟುಕೊಂಡಿರುವ ಪದಗಳು.

“ಎರಡು ಕಣ್ಣಿನ ಕುರುಡ ಒಂದೇ ಕಾಲಿನ ಕುಂಟ,
ಹರಿದು ಹೋಗುವ ಹಾವ ಕಚ್ಚಿ ಕೊಂದ…”

ಇಲ್ಲಿ ಎರಡು ಕಣ್ಣಿನ ಕುರುಡ ಎಂದರೆ ಹೊರಗಿನ ಪ್ರಪಂಚವನ್ನಷ್ಟೇ ನೋಡಿ ಸತ್ಯವನ್ನು ಕಾಣದ ಅಜ್ಞಾನಿ ಮನಸ್ಸು. ಒಂದೇ ಕಾಲಿನ ಕುಂಟ ಎಂದರೆ ಲೌಕಿಕ ಆಸೆಗಳನ್ನು ಬಿಟ್ಟು ಕೇವಲ ಭಕ್ತಿಯ ಒಂದೇ ದಾರಿಯಲ್ಲಿ ನಡೆಯುವ ಸಾಧಕ. ಹರಿದು ಹೋಗುವ ಹಾವು ಎಂದರೆ ಮನುಷ್ಯನ ಚಂಚಲತೆ, ಅಹಂಕಾರ ಮತ್ತು ಕಳೆದುಹೋಗುವ ಆಯುಷ್ಯ.

ಒಟ್ಟಾರೆಯಾಗಿ ನೋಡುವುದಾದರೇ, ಸಾಧಕನು ತನ್ನ ಏಕಾಗ್ರತೆ ಮತ್ತು ಭಕ್ತಿಯ ಮೂಲಕ ಚಂಚಲ ಮನಸ್ಸು ಹಾಗೂ ಅಹಂಕಾರವೆಂಬ ಹಾವನ್ನು ನಿಯಂತ್ರಿಸಿ ಮುಕ್ತಿ ಪಡೆಯುತ್ತಾನೆ ಎಂಬುದು ಈ ಮುಂಡಿಗೆಯ ಸರಳ ಹಾಗೂ ಆಧ್ಯಾತ್ಮಿಕ ಅರ್ಥವಾಗಿದೆ.

ಹೀಗೆ ಸಂಸ್ಕೃತ ಪಂಡಿತರೇ ತಲೆಕೆಡಿಸಿಕೊಂಡು ಯೋಚಿಸುವಂತಹ ಗಹನವಾದ ತತ್ವಗಳನ್ನು ಅಚ್ಚಕನ್ನಡದ ಪದಗಳಲ್ಲಿ ಹೇಳುವ ಮೂಲಕ ಕನಕದಾಸರು ಕನ್ನಡ ಭಾಷೆಯ ಬೌದ್ಧಿಕ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟರು.

ಶ್ರಮದ ಬದುಕಿಗೆ ನೀಡಿದ ಸಾಹಿತ್ಯಿಕ ಗೌರವ

ಕನಕದಾಸರು ಸಂಸ್ಕೃತದ ಕಾವ್ಯ ಶೈಲಿಯನ್ನು ಅನುಸರಿಸದೆ, ಕನ್ನಡದ ನೆಲದ ಸೊಗಡಿನ ಛಂದಸ್ಸುಗಳಲ್ಲಿಯೇ ಕಾವ್ಯ ಬರೆದರು. ಅವರ ರಾಮಧಾನ್ಯ ಚರಿತೆ ಇದಕ್ಕೆ ಅತ್ಯುತ್ತಮ ಉದಾಹರಣೆ.

ಅಂದಿನ ಕಾಲದಲ್ಲಿ ಶ್ರೀಮಂತರ ಆಹಾರವಾಗಿದ್ದ ಭತ್ತ ಮತ್ತು ಬಡವರ ಆಹಾರವಾಗಿದ್ದ ರಾಗಿಯ ನಡುವೆ ಜಗಳ ತಂದಿಟ್ಟು, ಕೊನೆಗೆ ಬಡವರ ರಾಗಿಯೇ ಶ್ರೇಷ್ಠ ಎಂದು ರಾಮನಿಂದ ತೀರ್ಪು ಕೊಡಿಸಿದರು. ಈ ಮೂಲಕ ಕನ್ನಡ ನಾಡಿನ ಸಾಮಾನ್ಯ ರೈತರು ಮತ್ತು ಶ್ರಮಜೀವಿಗಳಿಗೆ ಸಾಹಿತ್ಯದಲ್ಲಿ ದೊಡ್ಡ ಗೌರವ ತಂದುಕೊಟ್ಟರು.

ಸಾಮಾಜಿಕ ಅಸಮಾನತೆ ವಿರುದ್ಧಕನ್ನಡ ಧ್ವನಿ

ಜಾತಿ, ಮತಗಳ ಹೆಸರಿನಲ್ಲಿ ಸಾಮಾನ್ಯ ಜನರನ್ನು ವಿಭಜಿಸುತ್ತಿದ್ದ ಸಮಾಜವನ್ನು ಸಂತ ಕನಕದಾಸರು ಅನುಭವದಿಂದ ಕೂಡಿರುವ ಕನ್ನಡದ ಹಾಡುಗಳ ಮೂಲಕವೇ ಎಚ್ಚರಿಸಿದರು.

“ಕುಲ ಕುಲ ಕುಲವೆಂದು ಹೊಡೆದಾಡದಿರಿ,
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ”

“ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯ”

ಎಂದು ಪ್ರಶ್ನಿಸುವ ಮೂಲಕ ಜಾತಿ ವ್ಯವಸ್ಥೆಯ ಗೋಡೆಯನ್ನೂ ಕೆಡವಿದರು. ಕನಕದಾಸರು ಸಂಸ್ಕೃತ ಭಾಷೆಯನ್ನು ದ್ವೇಷಿಸಲಿಲ್ಲ, ಬದಲಾಗಿ ಸಂಸ್ಕೃತದ ಹೆಸರಿನಲ್ಲಿ ಸಾಮಾನ್ಯ ಜನರನ್ನು ಜ್ಞಾನದಿಂದ ದೂರ ಇಟ್ಟಿರುವ ವ್ಯವಸ್ಥೆಯನ್ನು ವಿರೋಧಿಸಿದರು.

ಇದನ್ನೂ ಓದಿ : ಬೀದರ್‌ | ಸಮಾನತೆ ಸಂದೇಶ ಸಾರಿದ ಕನಕದಾಸರು: ಸಂಸದ ಸಾಗರ ಖಂಡ್ರೆ

ಪಂಡಿತರ ಗ್ರಂಥಗಳಲ್ಲಿದ್ದ ಜ್ಞಾನವನ್ನು ಜನಸಾಮಾನ್ಯರ ಮನೆಯಂಗಳಕ್ಕೆ ತಂದರು. ಸರಳ ಕೀರ್ತನೆಗಳು, ಬುದ್ಧಿವಂತಿಕೆಯ ಮುಂಡಿಗೆಗಳು ಮತ್ತು ದೇಸಿ ಕಾವ್ಯಗಳ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಕನಕದಾಸರು, ನಿಜವಾದ ಅರ್ಥದಲ್ಲಿ ಕನ್ನಡ ಕಟ್ಟಿದ ಅಪರೂಪದ ಹಾಗೂ ಕ್ರಾಂತಿಕಾರಿ ಕವಿಗಳಾಗಿದ್ದಾರೆ.

ಬರೆಹ : ಬಾಲಾಜಿ ಅಮರವಾಡಿ – ಸಾಹಿತಿಗಳು‌, ಔರಾದ್

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ವಿಮಾನ ಅಪಘಾತದ ಅಣಕು ಕಾರ್ಯಾಚರಣೆ: 117 ಪ್ರಯಾಣಿಕರ ರಕ್ಷಣೆಗೆ ವಿವಿಧ ಇಲಾಖೆಗಳ ಸಮನ್ವಯ

ವಿಮಾನ ಅಪಘಾತದ ಸಂದರ್ಭದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ವಿವಿಧ ಇಲಾಖೆಗಳ...

ಬೀದರ್‌ | ಸಮಾನತೆ ಸಂದೇಶ ಸಾರಿದ ಕನಕದಾಸರು: ಸಂಸದ ಸಾಗರ ಖಂಡ್ರೆ

ಜಾತಿ, ಮತ, ಧರ್ಮಗಳ ಭೇದಭಾವಗಳನ್ನು ಮೀರಿ ತಮ್ಮ ಕೀರ್ತನೆಗಳು, ಮುಂಡಿಗೆಗಳು ಹಾಗೂ...

ತಮಿಳುನಾಡು | ಮಹಿಳಾ ಜಿಲ್ಲಾಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ಟಿವಿಕೆ ಶಾಸಕ ಅರುಳ್ ವಿಘ್ನೇಶ್ ಬಂಧನ

ಮಹಿಳಾ ಜಿಲ್ಲಾಧಿಕಾರಿಗೆ (ಐಎಎಸ್ ಅಧಿಕಾರಿ) ಲೈಂಗಿಕ ಕಿರುಕುಳ ನೀಡಿದ ಮತ್ತು ಅನುಚಿತವಾಗಿ...

ನಶೆಮುಕ್ತ ಶಿವಮೊಗ್ಗ ನಿರ್ಮಾಣಕ್ಕೆ ಮುಸ್ಲಿಂ ಯೂಥ್ ಕೌನ್ಸಿಲ್ ಅಭಿಯಾನ

ನಶೆಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಶಿವಮೊಗ್ಗ ಮುಸ್ಲಿಂ ಯೂಥ್ ಕೌನ್ಸಿಲ್ ವತಿಯಿಂದ...